ಕೇಸ್ ತನಿಖೆ ಮುಂದುವರಿಕೆ
ಕೊಡಗಿನಲ್ಲಿ ಈ ಮೊದಲು ಜಿಲ್ಲಾಧಿಕಾರಿ ಆಗಿದ್ದ ಅನುರಾಗ್ ತಿವಾರಿ ಅವರ ಸಂಶಯಾಸ್ಪದ ಸಾವಿನ ಪ್ರಕರಣ ನಾಲ್ಕು ವರ್ಷ ಕಳೆದರೂ ಮುಗಿಯುವಂತೆ ಕಾಣುತ್ತಿಲ್ಲ.
ಅನುರಾಗ್ ತಿವಾರಿ ಸಾವಿನ ಪ್ರಕರಣದ ತನಿಖೆಯನ್ನು ಸೂಕ್ತ ಸಾಕ್ಷ್ಯ ಇಲ್ಲದ ಕಾರಣ ಮುಕ್ತಾಯಗೊಳಿಸಲು ಉತ್ತರಪ್ರದೇಶ ಹೈಕೋರ್ಟಿಗೆ ಸಿಬಿಐ ತನಿಖಾ ತಂಡ ಅರ್ಜಿ ಸಲ್ಲಿಸಿತ್ತು.
ಆದರೆ ಕೋರ್ಟ್ ಈ ಬಗ್ಗೆ ಪ್ರಕರಣದ ತನಿಖೆಯನ್ನು ಸ್ಥಗಿತಗೊಳಿಸದೇ ಮುಂದುವರಿಸಿ, ಸೆಪ್ಟೆಂಬರ್ ಹತ್ತರ ಒಳಗಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
ಪ್ರಕರಣವನ್ನು ಮುಕ್ತಾಯಗೊಳಿಸಲು ಮುಂದಾಗಿದ್ದ ಸಿಬಿಐ ಕ್ರಮದ ವಿರುದ್ಧ ತಿವಾರಿ ಸಹೋದರ ಮಾಯಾಂಕ್ ತಿವಾರಿ ಕೋಟಿಗೆ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರು.
ಇದೀಗ ಮತ್ತೆ ಸಿಬಿಐ ಅನುರಾಗ್ ತಿವಾರಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯ ಕಲೆ ಹಾಕಲು ತನಿಖೆ ಮುಂದುವರಿಸಬೇಕಾಗಿದೆ.
ಅನುರಾಗ್ ತಿವಾರಿ ಲಖನೌ ದಲ್ಲಿ ರಸ್ತೆ ಬದಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು.