ಹುಡ್ಗಾಟ
ಪ್ರತೀಕ್ ಪರಿವಾರ, ಮರಗೋಡು
ಅರೆಭಾಷೆ ಕಥೆ
ಎಚ್ಚರ ಆತ್. ಕಣ್ಣ್ ಬುಟ್ಟ್ ನೋಡ್ರೆ ಅದ್ ಆಸ್ಪತ್ರೆ ಆಗಿತ್ತ್ ! ಅಮ್ಮ ನನ್ನ ಹಕ್ಕಲೇ ಕುದ್ದ್ ಮೊರ್ಡುತಿದ್ದೋ. ಈಗ ಹಂಞ ನೆನ್ಪ್ ಬಾಕೆ ಸುರು ಆತ್….
ನಾನ್ ಪೃಥ್ವಿ . ನನ್ನ ಊರು ಬೈರಂಬಾಡ . ನಾವು 5 ಜನ ಬಾರಿ ದೋಸ್ತಿಗ ; ನಾನ್, ವಿಶ್ವ, ಕವನ್,ಮೇಘನ್, ವಿಶಾಲ್. ಯಾಗೋಲು ಒಟ್ಟಿಗೆ ಇರ್ತ ಇದ್ದೊ . ಓದುಲಿ ಎಲ್ಲಾ ಅಷ್ಟಕಸ್ಟೇ…
ನಾವೆಲ್ಲ ಮಧ್ಯಮ ವರ್ಗದವು. ಬಡತನ ಮನೇಲಿ ಮಾತ್ರ ಇತ್ತ್. ನನ್ನ ಮತ್ತೆ ದೋಸ್ತಿಗಳೋಟ್ಟಿಗೆ ಇರ್ಕನಾ ನಾವೆಲ್ಲ ಶ್ರೀಮಂತರೇ ಆಗಿದ್ದೋ. ಕೆಲವೊಂದು ವಿಚಾರಲಿ ಹಂಞ ಭಿನ್ನಾಭಿಪ್ರಾಯ ಇತ್ತ್ . ನಾವು 10 ನೇ ಕ್ಲಾಸ್ ಲಿ ಇರ್ಕನ ಮಾಡ್ದ ಗಲಾಟೆಗಳಿಗೆ ಲೆಕ್ಕನೆ ಇಲ್ಲೆ. . ಒಮ್ಮೆ ನಮ್ಮದೇ ಒಬ್ಬ ಫ್ರೆಂಡ್ ಮೋಹನ್ ಒಂದ್ ಗೂಡೆನಾ ಬಗ್ಗೆ ಬೇಡದ ಮಾತ್ ಹೇಳ್ತ್ . ಕೇಳಿ ನಾವುಗೆ ತುಂಬಾ ಸಿಟ್ಟ್ ಬಂದ್ ಇದಿಕ್ಕೆ ಏನಾರ್ ಒಂದು ಗತಿ ತೋರ್ಸೋಕು ತ ಯೋಚನೆ ಮಾಡ್ದೊ . ಅವನ ಮನೆಗೆ ಹೋಗುವ ದಾರಿ ನಮಿಗೆಲ್ಲ ಗೊತ್ತಿತ್ತ್ .
ಗಾಡಿಗ ಬಾದು ಕಮ್ಮಿ ಆ ರಸ್ತೇಲಿ. ನಮ್ಮ ಪ್ಲಾನ್ ರೆಡಿ ಆಗಿತ್ತ್. ಅವ ಮನೆಗೆ ಹೋಕನ ಅವನ ಹಿಂದೆ ಹೋದೋ. ಅವಂಗೆ ನಾವು ಹೋದು ಗೊತ್ತಿತ್ಲೆ .ನಮ್ಮ ಯೋಜನೆನಂಗೆ ವಿಶಾಲ್ ಅವನ ಮುಖಕ್ಕೆ ಬಟ್ಟೆ ಹಾಕಿಟ್. ನಾವು ಸಿಕ್ಕಿದ ಚಾನ್ಸ್ ತೊಪ್ಪುಸಿಕೆ ಮಾಡಿಕೆ ಬೊತ್ತುತ ಹೇಳಿ ಸರಿಯಾಗಿ ಹೊಡ್ದ್ ಅಲ್ಲಿಂದ ಪರಾರಿ ಆದೊ.ಒಂದ್ ವಾರ ಅವ ಸ್ಕೂಲ್ಗೆ ರಜೆ ಹಾಕಿತ್ತ್. ಆಮೇಲೆ ನಮಿಗೆ ಗೊತ್ತಾದ್ ಅವಸ 5 ದಿನ ಆಸ್ಪತ್ರೆಲಿ ಇತ್ತ್ ತ. ಈ ವಿಚಾರ ದೊಡ್ಡ ಸುದ್ದಿ ಆಗಿತ್ತ್ ನಮ್ಮ ಊರುಲಿ. ಮೊದ್ಲೇ ಗ್ರಾಮೀಣ ಪ್ರದೇಶ ; ಒಂದ್ ಸಣ್ಣ ಸುದ್ದಿ ಸಿಕ್ಕಿರೂ ಸಾಕ್ , ಅದಿಕ್ಕೆ ಕಥೆ ಕಟ್ಟಿಕೆ ಸುಮಾರ್ ಜನ ಇದ್ದವೇ ಅಲಾ.
ಆದರೂ ಯಾರ್ ಹೊಡ್ದದ್ ತ ಹೇಳೋ ವಿಷ್ಯ ಮಾತ್ರ ಯಾರ್ಗು ಗೊತ್ತಾತ್ಲೆ. ಜಾಸ್ತಿ. ರೈಡ್ ಕೊಟ್ಟತ್ಲೆ ತ ಮೋಹನ್ ಜಗಳ ಮಾಡಿಕೆ ಶುರು ಮಾಡ್ತ್ . ವಿಶಾಲ್ ಸಿಟ್ಟ್ ಲಿ ನಿಂಗೆ ಅಂಧ್ ನಿಮ್ಮ ರೋಡ್ ಲಿ ಹೊಡ್ದದ್ ಕಮ್ಮಿ ಆತ್’ರಾಂತ ಹೇಳಿಬುಟ್ಟತ್ . ಆ ಒಂದ್ ಮಾತ್ ನಮ್ಮ ಪಾಲಿಗೆ ವಿಶಾತ್ . ನಮ್ಮ ಅಪ್ಪ ಅವ್ವನಾ ಶಾಲೆಗೆ ಕರ್ಸಿ ನಮಿಗೆ ಬೈದ್ , ಬುದ್ದಿವಾದ ಹೇಳಿ ನಮ್ಮನ್ನ ಒಂದ್ ವಾರ ಶಾಲೆಗೆ ಬಾಕೆ ಬೊತ್ತುತ ನಿರ್ಧಾಕ್ಷೀನ್ಯ ಆಗಿ ಹೇಳಿಬುಟ್ಟೊ ಹೆಡ್ಮಾಸ್ಟರ್. ಮಾಡಿದ್ದುಣ್ಣೋ ಮಾರಾಯ ತ ಹೇಳೋ ಗಾದೆನಂಗೆ ನಾವು ಒಂದ್ ವಾರ ಶಾಲೆಗೆ ಹೋತ್ಲೆ . ಹೇಳಿಕೆ ಹೋದರೆ ಇಂತ ಘಟನೆಗ ಅದೆಷ್ಟೋ ಒಳೋ.
ನಮ್ಮ ಪರೀಕ್ಷೆಗ ಹತ್ರ ಬಂದದ್ರ್’ಂದ ಮತ್ತೆ ನಾವುಗೆ ಆಟ ಕ್ಕೆ ಬುಡ್ದು ಕಮ್ಮಿ ಮಾಡ್ದೊ . ಪರೀಕ್ಷೆ ಹೆಂಗೋ ಮುಗ್ತ್. ಫಲಿತಾಂಶ ಬಾತ್. ನಾವ್ಗೆಲ್ಲಾ ಪ್ರಥಮ ಶ್ರೇಣಿಲಿ ಪಾಸಾಗಿದ್ದೋ. ಇದೆ ಖುಷಿಲಿ ಶಾಲೆ ಕೆಳಗೆ ಇದ್ದ ಹೊಳೆಗೆ ಈಜಿಕೆ ತ ಹೋದೋ. ಹೋಕೆ ಮುಂಚೆ ನಾವೆಲ್ಲ ದುಡ್ಡ್ ಹಾಕಿ ಜ್ಯೂಸ್, ಸ್ವಲ್ಪ ಕುರ್ಕುರೆ ತಗಂಡ್ ಹೋದೋ. ಸ್ವಲ್ಪ ಹೊತ್ತು ಈಜಿ ಬಂದ್ ಕುರ್ಕುರೆ ತಿಂದ್ ಪುನಃ ಈಜಿಕೆ ತ ಹೋದೋ. ವಿಶಾಲ್, ವಿಶ್ವ ಮತ್ತೆ ಕವನ್ ಹೊಳೆಲಿ ಈಜಿಕಂಡೆ ಮುಂದೆ ಮುಂದೆ ಹೋದೋ. ಸ್ವಲ್ಪ ಹೊತ್ತುಲೇ ಕಾಪಾಡ್ರ ಮುಳುಗುತೊಳೆ… ವಿಶಾಲ್ನಾ ಈ ಮಾತ್ ಕೇಳಿ ಗುಂಡಿಗೆ ಇಲ್ದದ್ ಮಾತ್ರ ಗ್ಯಾನ ಇತ್ತ್. ಅದರ ಮೇಲೆ ಎಂತ ಆತ್ ತ ನೇ ಗೊತ್ತಾತ್ಲೆ. ಒಮ್ಮೆ ಕಬ್ಬಡಿ ಆಡಕನ ಪೆಟ್ಟ್ತಿಂದವ ಮತ್ತೆ ನಾವ್ ಐದ್ ಜನ ಒಂದೇ ಟೀಮ್ ಲಿ ಇದ್ದೋ. ನಮ್ಮ ವಿಶಾಲ್ಗೆ ಸಿಟ್ಟ್
2 ತಿಂಗಲೇ ಕಾಲೇಜು ಶುರು ಆಕೆ ಇತ್ತ್. ನಾವು ಒಂದೇ ಕಾಲೇಜು ಸೇರೋಕು, ಒಟ್ಟಿಗೆ ಇರೋಕು ಇದೆಲ್ಲದರ ಬಗ್ಗೆ ಮಾತಾಡಿದ್ದೋ. ಆದರೆ ಏನ್ ಮಾಡ್ದು ; ವಿಧಿ ನಮ್ಮ ಸ್ನೇಹಲಿ ಕ್ರೂರ ಆಟ ಆಡಿ ಬುಟ್ಟಿತತ್ತ್….ಎಚ್ಚರ ಆಕನ ಆಸ್ಪತ್ರೆಲಿ ಇದ್ದೆ. ಅಮ್ಮನ ಕೇಳ್ಕನ ಗೊತ್ತಾದ್ ಮುಳ್ಗುತಿದ್ದ ನಮ್ಮ ಅಲ್ಲೇ ಕೆಲ್ಸ ಮಾಡ್ದಿದ್ದವು ಕಾಪಾಡ್ದೊಂತ . ಆದರೆ ವಿಶಾಲ್, ಮತ್ತೆ ಕವನ್ ಮುಳುಗಿ ಬಾರದ ಲೋಕಕ್ಕೆ ಹೋಗಿ ಬುಟ್ಟಿದ್ದೊ . ಅಯ್ಯೋ ವಿಧಿಯೇ !! ಅವರೊಟ್ಟಿಗೆ ನನ್ನಸ ಯಾಕೆ ಕರ್ಕಂಡ್ತಲೆ. ಅವು ನನ್ನೊಟ್ಟಿಗೆ ಆಡ್ದ ಮಾತ್ , ಆಟ ಎಲ್ಲಾ ಕನ್ಸ್’ನಂಗೆ ಕಣ್ಣ್ ಮುಂದೆ ಬಾಕೆ ಶುರು ಆತ್…
ಮರೆ ಆಗದ ನೋವುಲಿ ನನ್ನ ಎದೆ ಈಗಳು ದಹಿಸಿದೆ . ನೆನ್ಸಿರೆ ಆ ಗಳಿಗೆ ಯಾಕಾಗಿ ನಮ್ಮ ಬೊದ್ಕ್ ಲಿ ಬಾತ್ಂದ ದೇವ್ರ್ ಮೇಲೇ ಸಿಟ್ಟ್ ಬಂದೆ…
ಸದಾ ನಿಮ್ಮ ನೆನಪಿನಂಗಳಲಿ…..