fbpx

ಸೋಣ ತಿಂಗಳ ಪರ್ಚಯ!

✍🏻ಉಳುವಾರನ ರೋಶನ್ ವಸಂತ್, ಕಾಂತೂರು.

ಗೌಡ ಜನಾಂಗದ ಅರೆಭಾಸೆ ತಿಂಗಗಳ ಪ್ರಕಾರ ಇಂದ್ಂದ ಸೋಣ ತಿಂಗ ಸುರು. ಈ ತಿಂಗ ಸಿಂಹ ಸಂಕ್ರಮಣ ಕಳ್ದ ಮಾರನೇ ದಿನಂದ ಸುರಾಗಿ ಕನ್ಯಾ ಸಂಕ್ರಮಣ ಮುಟ್ಟ ಇದದ್ದೆ. ಅಂದರೇ ( ಆಗಸ್ಟ್ 15 ರ್ಂದ ಸೆಪ್ಟೆಂಬರ್ 15 ಕ್ಕೆ ಮುಟ್ಟ ) ಆಟಿ ತಿಂಗ ಕಳ್ದಂಗೆ ಮುಂದೆ ಬರುವ ತಿಂಗಳೇ ಈ ಸೋಣ ತಿಂಗ.

ಕಳ್ದ ಮೂರು ವರ್ಷಗಳ್ಂದ ಆಟಿ ತಿಂಗ ಎಲ್ಲಾವರ ಮನ್ಸ್ ಲ್ಲಿ ಉಳ್ಕಂಡ್ ಎಲ್ಲಾವರ ತುಂಬಾ ಹೆದ್ರ್ಸಿ ಅಸೆ ಭಾಸೆ ಇಲ್ಲದ ಅಶ್ಲೇಷ ಮಳೆ ಸರಿಯಾಗಿ ರಭಸನ ತೋರ್ಸಿ ಜಿಲ್ಲೆನ ಎಲ್ಲ ಕಡೇನು ಮಾರಿ ಮಳೆ ಬಿದ್ದ್ ಹೊಳೆ ,ತೋಡುಗ , ಜಲಪಾತಗ ತುಂಬಿ ಹರ್ದ್ ಒಂದಲ್ಲ ಒಂದು ತರಲ್ಲಿ ಕಷ್ಟ – ನಷ್ಟಗ ಅಗಿ ಮೊನ್ಸರ್, ಪ್ರಾಣಿಗ ಎಲ್ಲಾವು ಕಷ್ಟನ ಅನುಭವಿಸಿಯೊಳ್ಳೊ. ಆದರೆ ಈ ವರ್ಷ ಆಶ್ಲೇಷ ನಕ್ಷತ್ರದ ಮಹಾ ಮಳೆ ಈ ಸತಿ ಯಾರಿಗೂ ತೊಂದರೆ ಕೊಡದೆ ತುಂಬಾ ಶಾಂತ ಸ್ವಾಭವಲ್ಲಿ ಹೊರಟ್ ಹೊವ್ಟು. ಆಟಿ ತಿಂಗಳು ಈ ಸತಿ ತುಂಬಾ ಗೌಜಿಲ್ಲಿ ಮರೆಯಾಗಿ ಇಂದ್ಂದ ಆಟಿ ತಿಂಗ ಹೋಗಿ ಸೋಣ ತಿಂಗ ಬಂದುಟ್ಟು.

ಈ ತಿಂಗಳ್ಲಿ ಗೌರಿ ಗಣೇಶ ಹಬ್ಬ , ಕೊಡ್ಗ್ ನ ಗೌಜಿ ಗದ್ದಳದ ಸಾಂಪ್ರದಾಯಿಕ ಹಬ್ಬ ಕೈಲ್ ಮುಹೂರ್ತ ಬಂದದೆ. ಸೋಣ 12 ಅಗಸ್ಟ್ 28 ಕ್ಕೆ ನಾಲ್ಕುನಾಡ್ಲಿ ಕೈಲ್ ಮುಹೂರ್ತನ ಅಚರಣೆ ಮಾಡಿವೆ. ಸೋಣ 18 ಸೆಪ್ಟೆಂಬರ್ ಮೂರನೇ ತಾರೀಖ್ಗೆ ಸುಮಾರ್ ಕಡೆ ಈ ಹಬ್ಬನ ಅಚರಣೆ ಮಾಡುವ ಕ್ರಮ ತುಂಬಾ ಹಿಂದೆನ ಕಾಲಂದನು ನಡ್ಕಂಡ್ ಬಂದುಟ್ಟು. ಈ ತಿಂಗಳ್ಲಿ ಮಘ, ಮತ್ತೆ ಹುಬ್ಬಾ ನಕ್ಷತ್ರದ ಮಳೆ ಬಿದದ್ದೆ. ನಾಟಿ ಕೆಲ್ಸ ಎಲ್ಲ ಮುಗ್ದ್ ನಟ್ಟ ನಾಟಿ ಕರಿ ನಾಟಿ ಹತ್ತಿಕೆ ಸುರಾದೆ‌.

ಮಳೆನು ಕಮ್ಮಿಯಾಗಿ ಬಿಸ್ಲ್ ಬಾಕೆ ಸುರಾದೆ. ರೈತರ್ ತ್ವಾಟಲ್ಲಿ ಕಾಡ್ ಕಡಿಯೋದು , ಗದ್ದೆಲ್ಲಿ ಕಳೆ ತಗಿಯೋದು ಇಂತ ಕೆಲ್ಸಗಳ ಮಾಡಿವೆ. ಇನ್ನ್ ಹೊಸ ತ್ವಾಟ ಮಾಡಿಕೆ , ಬಾಳೆ ಹಾಕಿಕೆ , ತರ್ಕಾರಿ ಮಾಡಿಕೆ ಈ ತಿಂಗ ತುಂಬಾ ಒಳ್ಳ ತಿಂಗತ ನಮ್ಮ ಹಿರಿಯವು ಹೇಳಿವೆ.

ಈ ತಿಂಗಳ್ಲಿ ಮಳೆನ ರಭಸ ತುಂಬಾ ಕಮ್ಮಿ ಅಗಿ ಬಿಸ್ಲ್ ಬಂದದೆ. ಶುಭ ಕಾರ್ಯಗ , ಮೊದುವೆ ಜಂಬರಗ, ಪೂಜೆಗ ಈ ತಿಂಗಳ್ಂದ ಸುರಾದೆ. ಹಂಗೆ ಆಟಿ ತಿಂಗಳ್ಲಿ ಸತ್ತವುಕ್ಕೆ ಇದೇ ತಿಂಗಳ್ಲಿ ತಿಥಿ ಕರ್ಮಾಂತರ ಮಾಡಿವೆ. ಇದ್ದಿಷ್ಟ್ ಸೋಣ ತಿಂಗಳ ವಿಶೇಷ ಅವ್ಟು.

ಇನ್ನೂ ಮುಂದೆ ಬರುವ ನಿರ್ನಾಲ್ ತಿಂಗಳ ಪರ್ಚಯದೊಟ್ಟಿಗೆ ಬರುವ ತಿಂಗ ಕಾಂಬನೋ ಎಲ್ಲಾವುಕ್ಕೂ

error: Content is protected !!