ಸಹೋದರಿ ನನ್ನ ಪ್ರೀತಿ ಪಾತ್ರಳು


ದಿನಂಪ್ರತಿ ಪತ್ರಿಕೆಗಳನ್ನು ಓದುವಾಗ ಭಿನ್ನ-ವಿಭಿನ್ನವಾದ ಸುಂದರವಾದ ಲೇಖನಗಳು, ಕಥೆ-ಕವನಗಳನ್ನು ಓದುತ್ತಿದ್ದಾಗ ನನಗೂ ನನ್ನ ಸ್ನೇಹಿತೆ, ಗೆಳತಿ, ಮಾತೃಹೃದಯಿ ಮಮತೆ-ವಾತ್ಸಲ್ಯವನ್ನು ನೀಡಿದಂತಹ ನನ್ನಕ್ಕನ ಬಗ್ಗೆ ನಾನೇಕೆ ಲೇಖನವನ್ನು ಬರೆಯಬಾರದೆಂಬ ಯೋಚನೆ ನನ್ನಲ್ಲಿ ಬಂದು ನನ್ನ ಪಾಲಿನ ತಾಯಿಯ ಪ್ರೀತಿಯನ್ನು ಧಾರೆ ಎರೆಯುವ ನನ್ನ ಸಹೋದರಿಯ ಬಗ್ಗೆ ಬರೆಯುವ ಹುಮ್ಮಸ್ಸು ನನ್ನಲ್ಲಿ ಹೆಚ್ಚಿತ್ತು.
ಕುಟುಂಬದಲ್ಲಿ ಎಲ್ಲಾ ಬಾಂಧ್ಯವ್ಯಗಳ ಮಧ್ಯೆ ಅಕ್ಕ-ತಂಗಿಯ ನಡುವೆ ಇರುವಂತಹ ಪ್ರೀತಿ, ವಾತ್ಸಲ್ಯ, ಕಾಳಜಿ, ಹುಸಿ ಮುನಿಸು, ತುಂಟಾತನ ಎಲ್ಲಾವು ವಿಶೇಷವಾದದ್ದು. ಅಕ್ಕ ಎಂದರೆ ಸಹೋದರನಿಗೆ ಉತ್ತಮ ಸ್ನೇಹಿತೆಯಾಗಿಯೂ, ಸಹೋದರಿಗೆ ಮಾರ್ಗದರ್ಶಕಳಾಗಿಯೂ ಸಾಥ್ ನೀಡುವವಳು. ಸದಾ ತನ್ನ ಬೆನ್ನಿಂದೆ ಬಂದ ಸಹೋದರ-ಸಹೋದರಿಯರ ಒಳಿತನ್ನು ಬಯಸಿ, ಎಷ್ಟೇ ಕೋಪ-ಮನಸ್ತಾಪಗಳು ಬಂದರೂ ಅದು ಅವಳಿಗೆ ಕ್ಷಣಿಕವಷ್ಟೇ. ನಂತರ ಎಲ್ಲಾವನ್ನು ಮರೆತು ತನ್ನವರ ಸಂತೋಷದಲ್ಲಿ ತೊಡಗಿಕೊಳ್ಳುತ್ತಾಳೆ.
ಅಕ್ಕ ಎಂಬ ಪದವೇ ಹಾಗೇ ಮುನಿಸಿಕೊಳ್ಳುವುದಕ್ಕೆ ಜೊತೆಯಾಗಿ, ಓಡಾಡುವುದಕ್ಕೆ, ಕೀಟಾಲೆ ಮಾಡುವುದಕ್ಕೆ ನೋವಾದಾಗ ತಬ್ಬಿಕೊಂಡು ಅಳಲು, ಸಮಾಧಾನ ಮಾಡಲು ಸ್ನೇಹಿತೆಯಂತೆ ಮನದಟ್ಟು ಮಾಡಲು ಇವೆಲ್ಲದಕ್ಕೂ ಜೊತೆಯಾಗಿರುವವಳು ನನ್ನಕ್ಕ. ಅಕ್ಕನಿದ್ದಾಗ ಸ್ನೇಹಿತೆಯರು ಬೇಕೆಂದೆನಿಸುವುದಿಲ್ಲ. ಬಬ್ಬ ಸ್ನೇಹಿತೆಯ ಜೊತೆ ಎಷ್ಟು ಆತ್ಮೀಯತೆಯಿಂದ ಇರಬಹುದು ಅಷ್ಟೇ ಆತ್ಮೀಯಳಾಗಿರುವಳು ನನ್ನ ಸಹೋದರಿ.
ಎಲ್ಲಾ ಅಕ್ಕಂದಿರು ತಮ್ಮ ಸಹೋದರ-ಸಹೋದರಿಯನ್ನು ಕಾಳಜಿ ಮಾಡುತ್ತಾರೋ, ಇಲ್ಲವೋ ನಾ ಅರಿಯೇ? ಆದರೆ ನನ್ನ ಸಹೋದರಿ ನನಗೆ ತುಂಬಾನೇ ಸ್ಪೆಷಲ್. ಅಕ್ಕ ಅತ್ತರೆ ತಂಗಿ, ತಂಗಿ ನೋವಿಗೆ ಅಕ್ಕ ಸಂತೈಸುವಳು. ಒಬ್ಬರಿಗೊಬ್ಬರು ಸದಾ ಆಸರೆಯಾಗಿರುತ್ತಾರೆ.
ಬಾಲ್ಯದಲ್ಲಿ ನಮ್ಮಷ್ಟು ಜುಟ್ಟು-ಜುಟ್ಟು ಹಿಡಿದುಕೊಂಡು, ಹೊಡೆದಾಡಿಕೊಳ್ಳುವ ಅಕ್ಕ-ತಂಗಿಯರಿಲ್ಲ ಶತ್ರುಗಳಂತೆ ಆಡುತ್ತಿರಿ ಎಂದು ದಿನ ಅಮ್ಮನ ಬಾಯಲ್ಲಿ ಬೈಗುಳದ ಸುರಿಮಳೆನ್ನೇ ಕೇಳಿತ್ತಿದ್ದ ದಿನವಾದು, ಆದರೆ ಇಂದು ನಮ್ಮನ್ನು ಕಂಡು ನಿಮ್ಮ ಹಾಗೇ ಅಕ್ಕ-ತಂಗಿ ಇರಬೇಕೆಂದು ಹೊಟ್ಟೆ ಉರಿ ಪಟ್ಟುಕೊಳ್ಳುವ ಅದೆಷ್ಟೋ ಮನಗಳು, ಹಾಗೆಯೇ ಸದಾ ಹೀಗೆ ಇರಿ ಎಂದು ಹರಸುವ ಎಲ್ಲಾ ಮನಗಳ ಶುಭ-ಅಶುಭದ ನುಡಿಗಳಿಗೆ ನಾ ಚಿರಋಣಿ.
ಸಹೋದರಿ ಜೀವನದ ಪ್ರತಿ ಹಂತ-ಹAತದಲ್ಲೂ ಸಮಾಜದಲ್ಲಿ ನಾವೇಗಿರಬೇಕು, ತುಳಿಯುವ ಜನರ ನಡುವೆ ನಾವು ಯಾವ ರೀತಿಯಲ್ಲಿ ಎದ್ದು ನಿಲ್ಲಬೇಕೆಂದು ತಿಳಿ ಹೇಳಿದ ಗುರು. ನಮ್ಮ ತಪ್ಪಿಲ್ಲದಾಗ ಯಾರ ಮುಂದೆಯೂ ತಲೆ ತಗ್ಗಿಸಬಾರದೆಂದು ತಿಳಿ ಹೇಳಿದ ಧೈರ್ಯಶಾಲಿ ನನ್ನಕ್ಕ.
ತನ್ನ ಸಹೋದರ/ಸಹೋದರಿ ಸ್ವಲ್ಪ ಮಂಕಾಗಿದ್ದರೂ ಅವರನ್ನು ನಗಿಸುವ ಸಲುವಾಗಿ ಮಾಡುವ ತುಂಟಾಟಗಳು-ಕೀಟಾಲೆ,ತರಲೆ ನೋಡಿ ಮನ ನಗುತ್ತಿದ್ದರೂ ತನ್ನ ಒಳಜಂಭವನ್ನು ಬಿಡದೇ ಮನದೊಳಗೆಯೇ ನಕ್ಕು ಆನಂದಿಸುವುದೆAದರೆ ಸಂಭ್ರಮವೋ ಸಂಭ್ರಮ.
ಅಮ್ಮನ ಪ್ರತೀ ರೂಪ ಸಹೋದರಿ ಎಂಬ ಮಾತು ನೂರರಷ್ಟು ಸತ್ಯ. ಎಲ್ಲಾರಿಗೂ ಇಂತಹ ಸಹೋದರಿ ಸಿಗುವುದು ಅಪರೂಪ, ಸಿಕ್ಕರೆ ಅಂತಹ ಸಹೋದರಿಯನ್ನು ಕಳೆದುಕೊಳ್ಳದಿರಿ, ಕಳೆದುಕೊಂಡರೆ ನಿಮ್ಮಂತ ಮೂರ್ಖರೂ ಬೇರೊಬ್ಬರಿಲ್ಲ. ಅಕ್ಕನ ಪ್ರೀತಿ-ವಾತ್ಸಲ್ಯ, ಕಾಳಜಿಯೇ ಹಾಗೇ ಅವಳನ್ನು ಪಡೆದ ನಾನೆ ಧನ್ಯ, ಅವಳ ಪ್ರೀತಿ-ಮಮತೆಗೆ ನಾನು ಯಾವತ್ತಿದ್ದರೂ ಸದಾ ಚಿರಋಣಿ

ನಿಶಾ.ಕುಮಾರಿ
ಇರುವೈಲು

error: Content is protected !!