ಅಪರೂಪದ ರಾಬಿನ್ ನೀಲಿ ಮೊಟ್ಟೆ ಪತ್ತೆ

-ಗಿರಿಧರ್ ಕೊಂಪುಳೀರ

ಕೊಡಗು:ನಗರವಾಸಿಗಳು ಕಾಡಿನ ಹಕ್ಕಿಗಳು ಹೋಗಲಿ,ಅವುಗಳ ಸಂತತಿ ಉತ್ಪಧಿಸುವ ಮೂಟ್ಟೆಗಳನ್ನು ನೋಡುವುದಕ್ಕೆ ಸಾಧ್ಯವಿಲ್ಲ,ಅಂತಹದರಲ್ಲಿ ಮಡಿಕೇಲಿ ತಾಲ್ಲೂಕಿನ ಬೆಟ್ಟತ್ತೂರು ಗ್ರಾಮದ ಪುಷ್ಪ ಕೆ ಕೆ ರವರ ಕಾಫಿ ತೋಟದಲ್ಲಿ ಅಪರೂಪದ ಇಂಡಿಯನ್ ರಾಬಿನ್ ಹಕ್ಕಿಯ ಆರು ಮೂಟ್ಟೆಗಳು ಗೋಚರಿಸಿದೆ,ದಟ್ಟ ಹುಲ್ಲಿನಿಂದ ಕೂಡಿದ್ದ ತೋಟದಲ್ಲಿ ಕೆಲ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಮಳೆಗೆ ರಕ್ಷಿಸಲು ಸುರಕ್ಷಿತವಾಗಿ ರಕ್ಷಿಸಲ್ಪಟ್ಟ ಹಕ್ಕಿಯ ಗೂಡು ಪತ್ತೆಯಾಗಿದೆ.ಕಾರ್ಮಿಕರ ಸಮಯ ಪ್ರಜ್ಞೆಯಿಂದ ಗೂಡಿಗೆ ಯಾವುದೇ ಹಾನಿ ಮಾಡದೆ ಹಾಗೆ ಬಿಡಲಾಯಿತು. ಅಪರೂಪದ ನೀಲಿ ಮೊಟ್ಟೆಯನ್ನು ನೋಡಿ ಪ್ರತಿಯೊಬ್ಬರಿಗೂ ಅಚ್ಚರಿಯಾಗಿ ತಮ್ಮ ಮೂಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡರು. ಈ ಸಂದರ್ಭ ತಾಯಿ ರಾಬಿನ್ ಹಕ್ಕಿ ಅಕ್ಕಪಕ್ಕದಲ್ಲೇ ಸುಳಿದಾಡುತ್ತಿತ್ತು.ಈ ಅಪರೂಪದ ನೀಲಿ ಮೊಟ್ಟೆಯನ್ನು ಕೆಲವು ಪಕ್ಷಿ ತಜ್ಞರು,ಗೂಗಲ್ ನಲ್ಲಿ ಪರಿಶೀಲಿಸಿದಾಗ ಇದು ಇಂಡಿಯನ್ ರಾಬಿನ್ ಹಕ್ಕಿಯ ಮೂಟ್ಟೆಗಳು ಎಂದು ತಿಳಿದು ಬಂದಿದೆ.

ಕಪ್ಪು,ಹಳದಿ,ಕೇಸರಿ ಮಿಶ್ರಿತ ಈ ರೀತಿ ಮೂಟ್ಟೆ ಇಡುವುದಕ್ಕೂ ಕಾರಣವಿದೆ.ಮೂಟ್ಟೆಯ ಚಿಪ್ಪು ಸಾಕಷ್ಟು ಗಟ್ಟಿಯಿದ್ದು,ಬಿಸಿಲಿನ ಶಾಖ ವನ್ನು ತಡೆಗಟ್ಟಲು ಈ ರೀತಿ ಮೂಟ್ಟೆಗಳನ್ನು ಇಡುತ್ತವೆ ಎನ್ನಲಾಗಿದೆ,ಅತೀ ಬಿಸಿಲಿನಿಂದ ಮರಿಗಳ ಮೇಲೆ ಪರಿಣಾಮ ಬೀರುವುದರಿಂದ ಈ ರೀತಿ ಮೂಟ್ಟೆಗಯಗನ್ನು ಇಡುತ್ತವೆ ಎಂದು ವಿವರಿಸಲಾಗಿದೆ.

ಪರಿಸರದ ಸಮತೋಲನತ್ತು ಶತ್ರುಗಳಿಂದ ರಕ್ಷಿಸಲು ಪೋಷಕ ಹಕ್ಕಿಗಳು ಈ ರೀತಿ ಮೂಟ್ಟೆಗಳು ಇಡುತ್ತವೆ,ಮತ್ತು ವಿಭಿನ್ನ ಬಣ್ಣದಲ್ಲಿ ಇರುವುದರಿಂದ ಸುಲಭವಾಗಿ ಪೋಷಕ ಹಕ್ಕಿಗಳು ಮೂಟ್ಟೆಗಳ ರಕ್ಷಣೆ ಮಾಡಬಹುದು.ಕೆಲವೆಡೆ ಕಡು ನೀಲಿ,ಹಸಿರು ಮಿಶ್ರಿತ ನೀಲಿ ರೂಪದಲ್ಲೂ ಮೂಟ್ಟೆಗಳು ಕಂಡು ಬರುತ್ತದೆ.ತಾಯಿ ಮೂಟ್ಟೆಯ ಪೌಷ್ಠಿಕ ಆಹಾರ ಸೇವನೆಯಿಂದ ಮೂಟ್ಟೆಯ ಬಣ್ಣ ಬದಲಾಗುತ್ತದೆ ಎನ್ನಲಾಗಿದೆ.ನಿಜಕ್ಕೂ ಪ್ರಕೃತಿಯಲ್ಲಿ ನಮಗೆ ಗೊತ್ತಿಲ್ಲದೆ ಎಷ್ಟೋ ವಿಚಾರಗಳು ನಡೆಯುತ್ತಿರುತ್ತದೆ ಎನ್ನುವುದಕ್ಕೆ ರಾಬಿನ್ ನೀಲಿ ಮೊಟ್ಟೆಯೇ ಸಾಕ್ಷಿ.

error: Content is protected !!