ಶಿಳ್ಳೆ ನಾಯಿಗಳ ದರ್ಶನ

Sudhisanthe Exclusive News Article

ಕೃಪೆ:ಚಮ್ಮಟಿರ ಪ್ರವೀಣ್

ಕಾಡು ನಾಶ ಮಾಡಿ ನಮಗೆ ಹಲವು ಸಸಿ ತಳಿಗಳೇ ಕಾಣುವುದಕ್ಕೆ ಅಸಾಧ್ಯ,ಅಂತಹದರಲ್ಲಿ ಕೊಡಗಿನ ಅಪರೂಪಕ್ಕೆ ಕಾಣಸಿಗುವ ಜೀವಿ ಕಂಡು ಬಂದಿದೆ. ಹೌದು ಇದು ರಿವರ್ ವಟ್ಟರ್ ,ಜಲಚರ ಅದರಲ್ಲೂ ಮೀನು ಪ್ರಿಯವಾಗಿರುವ ಇವುಗಳು
ಸ್ಥಳೀಯವಾಗಿ ನೀರುನಾಯಿ ಎಂದು ಕರೆಯಲಾಗುತ್ತದೆ,ನದಿಯ ಹೊಂಡ ,ಕೆರೆಗಳು ಇರುವ ಕಡೆ ಹೆಚ್ಚಾಗಿ ಕಂಡು ಬರುವ ಈ ಜಾತಿಗಳು ನಾಚಿಕೆ ಸ್ವಭಾವದವು. ನೋಡುವುದಕ್ಕೆ ನಾವು ಮನೆಯಲ್ಲಿ ಸಾಕುವ ಪೊಮೇರಿಯನ್ ಮುಖದಂತೆ ಇದ್ದರೆ,ದೇಹ ರಚನೆ ಡ್ಯಾಶಂಡ್ ನಾಯಿ ರೀತಿ ಇರುತ್ತವೆ.

ಗುಂಪಿನಲ್ಲಿ 10-12 ನೀರು ನಾಯಿಗಳು ಒಟ್ಟಿಗೆ ನದಿಯಲ್ಲಿ ನೀರು ಕಡಿಮೆಯಾದ ಸಂದರ್ಭ ಗುಂಡಿಯಲ್ಲಿರುವ ಮೀನು ಬೇಟೆಗೆ ಬರುತ್ತದೆ. ಅವುಗಳ ಸಂವಹನ ಮಾತ್ರ ಅಧ್ಭುತ,ಶಿಳ್ಳೆ ಹೊಡೆಯುವ ಮೂಲಕ ತಂಡದ ಹಿರಿಯ ನೀಡುತ್ತದೆ. ಸಮುದ್ರದಲ್ಲಿ ಸೀಲ್ ಡಾಗ್ ಹೇಗೆ ಇರುತ್ತದೋ ಅದೇ ರೀತಿ ಇರುತ್ತದೆ,ಆದರೆ ಪಶ್ಚಿಮಘಟ್ಟದಲ್ಲಿ ಕಾಣ ಸಿಗುವ ನಾಯಿಗಳೇ ಅಪರೂಪ. ಕ್ಷಣ ಮಾತ್ರದಲ್ಲಿ ಮೀನು ಬೇಟೆ ಮಾಡುವ ಸಾಮರ್ಥ್ಯ ಇವುಗಳಿಗಿದೆ ,ನೆಲದಲ್ಲಿ ಅಷ್ಟೇನು ವೇಗವಾಗಿ ಓಡುವ ಸಾಮರ್ಥ್ಯ ಇವುಗಳಿಗಿಲ್ಲ,

ಇಷ್ಟೆಲ್ಲಾ ಯಾಕೆ ಪೀಠಿಕೆ ಅವಶ್ಯಕತೆ ಇದೆ ,ಕಾರಣ ನನ್ನ ಪತ್ರಕರ್ತ ಸ್ನೇಹಿತನಿಗೆ ಸಿಕ್ಕಿದ ಈ ಅಪರೂಪದ ಜೀವಿ ಫೋಟೋ ಮತ್ತು ವಿಡಿಯೋಗಳು.
ದಕ್ಷಿಣ ಕೊಡಗು ಭಾಗದ ಬೆಸಗೂರಿನಲ್ಲಿ ಹರಿಯುವ ಕೀರೆಹೊಳೆಯಲ್ಲಿ ಈ ಜೀವಿಗಳು ಪತ್ತೆಯಾಗಿದೆ.ಇಲ್ಲಿನ ರೈತ ಬಾಚಮಾಡ ಶರಣು ಭೀಮಯ್ಯ ಎಂಬುವವರು ಮುದ್ದು ನಾಯಿಗಳ ಶಿಳ್ಳೆ(wistle) ಕೇಳಿ ಅಚ್ಚರಿಗೂಂಡು ನದಿ ತಟಕ್ಕೆ ಬಂದ ಸಂದರ್ಭ ಈ ದೃಶ್ಯ ಗೋಚರಿಸಿದ್ದು,
ಅದನ್ನು ಚಿತ್ರೀಕರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಈ ಅಪರೂಪದ ಜೀವಿಗಳು ಓಡಾಡುತ್ತಿವೆ ಅಲ್ಲಲ್ಲಿ ಇದೇ ರೀತಿ ಶಿಳ್ಳೆಯೂ ಕೇಳುತ್ತಿದೆ

ನನ್ನ ಕಳಕಳಿಯ ಮನವಿ SAVE WILDLIFE

error: Content is protected !!
satta king chart