ರಿಲೀಫ್ ನೀಡುವ ಔಷಧೀಯ ಸಸ್ಯ ತುಳಸಿ

ತುಳಸಿ ಗಿಡ ಬರಿ ಪೂಜೆಗೆ ಅಷ್ಟೇ ಸೀಮಿತವಾಗದೆ ಹತ್ತಾರು ಆರೋಗ್ಯಕಾರಿ ಲಾಭಗಳನ್ನು ಹೊಂದಿದೆ, ತುಳಸಿಯಲ್ಲಿ ಆಯುರ್ವೇದ ಚಿಕಿತ್ಸಾ ಗುಣವಿದೆ ಆದ್ದರಿಂದ ಹಲವು ಸಮಸ್ಯೆಗಳಿಗೆ ತುಳಸಿ ಗಿಡವನ್ನು ಔಷಧಿಯಾಗಿ ಬಳಸುತ್ತಾರೆ.

ಮನೆ ಮುಂದೆ ತುಳಸಿ ಗಿಡ ಇದ್ರೆ ಒಂದಿಷ್ಟು ಸಮಸ್ಯೆಗಳಿಗೆ ಪರಿಹಾರ ನಮ್ಮ ಕೈಯಲ್ಲೇ ಇದ್ದಂತೆ, ವಿಷ್ಯಕ್ಕೆ ಬರೋಣ ಪ್ರತಿದಿನ ೪ ರಿಂದ ೫ ಶುದ್ಧವಾದ ತುಳಸಿ ಎಲೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನೋದ್ರಿಂದ ಇಡೀ ದಿನವೆಲ್ಲ ಮೈಂಡ್ ರಿಫ್ರೆಶ್ ಆಗಿ ಯಾವುದೇ ಒತ್ತಡ ಇಲ್ಲದಂತೆ ರಿಲೀಫ್ ಮೊಡ್ ನಲ್ಲಿರುತ್ತದೆ. ಇನ್ನು ಒತ್ತಡ ನಿವಾರಿಸುವ ಜೊತೆಗೆ ದೇಹದ ದಣಿವು ಸುಸ್ತು ಒತ್ತಡ ಕಡಿಮೆ ಮಾಡುತ್ತದೆ.

ಇನ್ನು ನೈಸರ್ಗಿಕವಾಗಿ ಸಿಗುವಂತ ಹಲವು ಸಸ್ಯಗಳು ಉತ್ತಮ ಅರೋಗ್ಯ ಗುಣಗಳನ್ನು ಹೊಂದಿದೆ, ದೇಹಕ್ಕೆ ಯಾವುದೇ ಅಡ್ಡ ಪರಿಣಾಮ ಬಿರೋದಿಲ್ಲ, ಆದ್ದರಿಂದ 7-8 ಹಸಿ ತುಳಸಿ ಎಲೆಗಳನ್ನು ನೀರಲ್ಲಿ ಕುದಿಸಿ ಆ ನೀರನ್ನು ದಿನಕ್ಕೆ 2 ಬಾರಿ ಸೇವಿಸಿದರೆ ಮೈ ಕೈ ನೋವು ಕಡಿಮೆಯಾಗುತ್ತದೆ.ಮತ್ತೊಂದು ವಿಧಾನ ಮೈಕೈ ನಿವಾರಣೆಗೆ ಅದುವೇ ಒಂದು ಗ್ಲಾಸ್ ಬಿಸಿ ಹಾಲಿಗೆ ಅರಿಶಿನ ಬೆರಸಿ ಕುಡಿಯೋದ್ರಿಂದ ಮೈ ಕೈ ನೋವು ನಿವಾರಣೆಯಾಗಿ ದೇಹ ರಿಲೀಫ್ ಕಾಣುತ್ತದೆ.

ಮೈಕೈ ನೋವು ನಿವಾರಣೆಗೆ ಬೆಳ್ಳುಳ್ಳಿ ಕೂಡ ಮದ್ದಾಗಿದೆ: ಹೌದು ಅಡುಗೆಗೆ ಬಳಸುವಂತ ಬೆಳ್ಳುಳ್ಳಿಯನ್ನು ಬಳಸಿ ದೇಹದ ದಣಿವು ಸುಸ್ತು ಮೈ ಕೈ ನೋವು ಎಲ್ಲವನ್ನು ಕೂಡ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಪ್ರತಿದಿನ ಎರಡು ಬೆಳ್ಳುಳ್ಳಿ ಎಸಳನ್ನು ತಿನ್ನೋದ್ರಿಂದ ಉತ್ತಮ ಅರೋಗ್ಯ ವೃದ್ಧಿಯಾಗುತ್ತದೆ. ಅಲ್ಲದೆ ಅಡುಗೆಗೆ ಬಳಸುವಂತ ಒಂದು ಚಮಚ ಹಸಿ ಶುಂಠಿಯನ್ನುನೀರಿನಲ್ಲಿ ಹಾಕಿ ಕುದಿಸಿ ತಣ್ಣಗಾದ ಮೇಲೆ ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಸೇವಿಸುವುದರಿಂದ ಮೈಕೈ ನೋವು ನಿವಾರಣೆಯಾಗುತ್ತದೆ.

error: Content is protected !!
satta king chart