ಬೆಳಗಾವಿ ಪ್ರವಾಸ ರದ್ದುಗೊಳಿಸಿ ತರಾತುರಿಯಲ್ಲಿ ಬೆಂಗಳೂರಿಗೆ ಬಂದ ಸಿ.ಎಂ !

ಬೆಂಗಳೂರು: ಸಿಡಿ ಯುವತಿ ಬೆಂಗಳೂರಿನಲ್ಲಿ ವಿಶೇಷ ಕೋರ್ಟ್ ಎದುರು ಹಾಜರಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲೆ ಪ್ರವಾಸ ಮೊಟುಕುಗೊಳಿಸಿ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿದ್ದಾರೆ.

ಪೂರ್ವ ನಿಗದಿತ ವೇಳಾಪಟ್ಟಿ ಪ್ರಕಾರ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಗೆ ಪಕ್ಷದ ಅಭ್ಯರ್ಥಿ ಮಂಗಲಾ ಅಂಗಡಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು. ಶಾಸಕರು ಹಾಗೂ ಪಕ್ಷದ ಮುಖಂಡರ ಜತೆಗೆ ಸಂಜೆ ಏರ್ಪಡಿಸಿರುವ ಸಭೆಯಲ್ಲಿ ಪಾಲ್ಗೊಂಡು ಕ್ಷೇತ್ರದ ವಸ್ತುಸ್ಥಿತಿ, ತಯಾರಿ ಮಾಹಿತಿ ಪಡೆದು ಚುನಾವಣೆ ಕಾರ್ಯತಂತ್ರ ಕುರಿತು ಚರ್ಚೆ ನಡೆಸಲಿದ್ದರು. ಮಂಗಳವಾರ ಬೆಳಗಾವಿಯಲ್ಲಿ ವಾಸ್ತವ್ಯ ಹೂಡಲಿದ್ದರು. ಬುಧವಾರ ಬೆಳಗ್ಗೆ ಅಲ್ಲಿಂದ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಬೇಕಾಗಿತ್ತು.

ಆದರೆ, ಶಾಸಕರು ಹಾಗೂ ಮುಖಂಡರ ಸಭೆ ದಿಢೀರ್‌ನೆ ರದ್ದುಪಡಿಸಿ, ಬೆಳಗಾವಿಯಿಂದ ರಸ್ತೆ ಮಾರ್ಗವಾಗಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ತಲುಪಿ, ಸಿಎಂ ಬೆಂಗಳೂರಿಗೆ ಮರಳುತ್ತಿರುವುದು ಕುತೂಹಲ ಕೆರಳಿಸಿದೆ.

ಸಿಡಿ ಯುವತಿ ಕೋರ್ಟ್ ಎದುರು ಹಾಜರಾಗಿ ಕೋರ್ಟ್‌ಗೆ ಹೇಳಿಕೆ ನೀಡಿರುವ ಕಾರಣ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉದ್ವೇಗಕ್ಕೆ ಒಳಗಾಗಿದ್ದು, ಈ ಬೆಳವಣಿಗೆ ರಾಜಕೀಯವಾಗಿ ಸಿಎಂ ಬಿಎಸ್‌ವೈಗೆ ತಲೆ ಬಿಸಿ ತಂದೊಡ್ಡಿದೆ ಎಂದು ಮೂಲಗಳು ಹೇಳಿವೆ.

error: Content is protected !!
satta king chart