ಭಾರತದ ಮೊದಲ ಸಸ್ಯ ಆಧಾರಿತ ಮಾಂಸ ಗುಜರಾತ್‌ನಿಂದ ಅಮೆರಿಕಾಕ್ಕೆ ರಫ್ತು
ಸಸ್ಯ ಆಧಾರಿತ ಪ್ರೋಟೀನ್ ಆಹಾರ ಕಂಪನಿ ಗ್ರೀನೆಸ್ಟ್ (GREENEST) ಯುಎಸ್ ಗೆ ಭಾರತದ ಸಸ್ಯ ಆಧಾರಿತ ಮಾಂಸದ ಮೊದಲ ರವಾನೆಯನ್ನು ಮಾಡಿದೆ. ಅಪೆಕ್ಸ್ ರಫ್ತು ಉತ್ತೇಜನಾ ಸಂಸ್ಥೆ, ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಪ್ರಾಧಿಕಾರ (APEDA)ದ ಮೂಲಕ ಕೇಂದ್ರವು ಸಸ್ಯಾಧಾರಿತ ಮಾಂಸ ಉತ್ಪನ್ನಗಳ (plant-based meat product) ಮೊದಲ ರವಾನೆಯನ್ನು ಯುಸ್ ಗೆ ರಫ್ತು ಮಾಡಲು ಅನುವು ಮಾಡಿಕೊಟ್ಟಿದೆ.
ಜನಪ್ರಿಯ ಸಸ್ಯ ಪ್ರೋಟೀನ್ ಆಹಾರ ಬ್ರಾಂಡ್ ಆಗಿರುವ ಗ್ರೀನ್‌ಸ್ಟ್, (Greenest ) ಭಾರತದ ಮೊದಲ ಸಸ್ಯ ಆಧಾರಿತ ಮಾಂಸ ರಫ್ತು ಸರಕುಗಳನ್ನು ಸಸ್ಯಾಹಾರಿ ಆಹಾರ ವರ್ಗದ ಅಡಿಯಲ್ಲಿ ಗುಜರಾತ್‌ನ (Gujarat) ನಾಡಿಯಾಡ್‌ನಿಂದ ಕ್ಯಾಲಿಫೋರ್ನಿಯಾಗೆ ಈ ಆಹಾರಗಳನ್ನು (Food) ರವಾನೆ ಮಾಡಲಾಗಿದೆ.
ಗುಜರಾತ್ ಟು ಅಮೆರಿಕಾ
5,000 ಕೆಜಿ ಇದ್ದ ಈ ರವಾನೆಯಲ್ಲಿ ಮಿನಿ ಸಮೋಸಾಗಳು, ಬಿಸಿ ಮತ್ತು ಮಸಾಲೆಯುಕ್ತ ಸ್ಟ್ರಿಪ್‌ಗಳು, ಮೊಮೊಸ್ ಗಳು, ಸ್ಪ್ರಿಂಗ್ ರೋಲ್‌ಗಳು, ಗ್ರಿಲ್ಡ್ ಪ್ಯಾಟಿಗಳನ್ನು ಒಳಗೊಂಡಿತ್ತು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
“ಇದು ಕೇವಲ ಒಂದು ಆರಂಭದ ಹೆಜ್ಜೆ”
ಎಪಿಇಡಿಎ ಅಧ್ಯಕ್ಷ ಎಂ ಅಂಗಮುತ್ತು ಈ ಬಗ್ಗೆ ಮಾತನಾಡಿ, ಸಾಂಪ್ರದಾಯಿಕ ಪ್ರಾಣಿ ಆಧಾರಿತ ಮಾಂಸ ರಫ್ತು ಮಾರುಕಟ್ಟೆಗೆ ತೊಂದರೆಯಾಗದಂತೆ ಸಸ್ಯ ಆಧಾರಿತ ಮಾಂಸ ಉತ್ಪನ್ನಗಳ ಉತ್ತೇಜನಕ್ಕೆ ಸಂಸ್ಥೆಯು ದೊಡ್ಡ ರೀತಿಯಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
“ಇದು ಕೇವಲ ಒಂದು ಆರಂಭವಾಗಿದೆ, ಮತ್ತು ಭಾರತವು ತನ್ನ ಶ್ರೀಮಂತ ಸಸ್ಯಾಹಾರಿ ಪರಂಪರೆಯೊಂದಿಗೆ ಸಸ್ಯ ಆಧಾರಿತ ಸಸ್ಯಾಹಾರಿ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಗೆ ಕೇಂದ್ರವಾಗಲಿದೆ ಎಂದು ನಾವು ಭಾವಿಸುತ್ತೇವೆ” ಎಂದು ಎಂ ಅಂಗಮುತ್ತು ತಿಳಿಸಿದರು. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ಸಸ್ಯ ಪ್ರೋಟೀನ್ ಮಾರುಕಟ್ಟೆಯು $ 400-450 ಮಿಲಿಯನ್ ತಲುಪುತ್ತದೆ ಎಂದು ಎಪಿಇಡಿಎ ನಿರೀಕ್ಷಿಸುತ್ತದೆ ಎಂದು ತಿಳಿಸಿದರು.
ಬೇರೆ ದೇಶಕ್ಕೂ ರಫ್ತು ಮಾಡಲು ಪ್ಲ್ಯಾನ್
ಕೇವಲ ಯುಎಸ್ ಗೆ ಮಾತ್ರವಲ್ಲದೇ ಈ ರೀತಿಯ ಆಹಾರಗಳನ್ನು ಬೇರೆ ದೇಶಕ್ಕೂ ರಫ್ತು ಮಾಡಲು ಸಹ ಚಿಂತನೆ ನಡೆದಿದೆ. “ಮುಂಬರುವ ತಿಂಗಳುಗಳಲ್ಲಿ ಆಸ್ಟ್ರೇಲಿಯಾ, ಇಸ್ರೇಲ್, ನ್ಯೂಜಿಲ್ಯಾಂಡ್ ಮತ್ತು ಇತರ ದೇಶಗಳಿಗೆ ಪ್ಯಾನ್‌ಕೇಕ್, ತಿಂಡಿಗಳು, ಚೀಸ್, ಇತ್ಯಾದಿ ಸೇರಿದಂತೆ ವಿವಿಧ ಸಸ್ಯಾಹಾರಿ ಆಹಾರ ಉತ್ಪನ್ನಗಳನ್ನು ಕಳುಹಿಸಲು APEDA ಯೋಜಿಸಿದೆ” ಎಂದು ಸಚಿವಾಲಯ ಹೇಳಿದೆ.
ಸಸ್ಯಾಹಾರಿ ಆಹಾರ ಉತ್ಪನ್ನಗಳ ಹೆಚ್ಚಿನ ಪೋಷಕಾಂಶದ ಮೌಲ್ಯದಿಂದಾಗಿ ಸಸ್ಯ ಆಧಾರಿತ ಆಹಾರ ಉತ್ಪನ್ನಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೃಹತ್ ರಫ್ತು ಸಾಮರ್ಥ್ಯವನ್ನು ಹೊಂದಿವೆ. ಫೈಬರ್ ಮತ್ತು ಕಡಿಮೆ ಕೊಲೆಸ್ಟ್ರಾಲ್ ಅಂಶಗಳ ಕಾರಣದಿಂದಾಗಿ, ಸಸ್ಯಾಹಾರಿ ಆಹಾರ ಉತ್ಪನ್ನಗಳು ಪ್ರಪಂಚದಾದ್ಯಂತ ಪರ್ಯಾಯ ಆಹಾರ ಉತ್ಪನ್ನಗಳಾಗುತ್ತಿವೆ. ಇನ್ನೂ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸಸ್ಯಾಹಾರಿ ಆಹಾರ ಉತ್ಪನ್ನಗಳ ಜನಪ್ರಿಯತೆ ಹೆಚ್ಚುತ್ತಿದೆ.
ಗ್ರೀನೆಸ್ಟ್ (Greenest) ಕಂಪನಿ
ಗ್ರೀನೆಸ್ಟ್ ಸಸ್ಯ ಆಧಾರಿತ ಪ್ರೊಟೀನ್ ಉತ್ಪನ್ನಗಳಲ್ಲಿ ಭಾರತದ ಪ್ರವರ್ತಕವಾಗಿದೆ ಮತ್ತು ಬೆಟರ್ ಬೈಟ್ ವೆಂಚರ್ಸ್, ನ್ಯೂಜಿಲೆಂಡ್ ಮೂಲದ ಮೀಸಲಾದ Alt Protein VC ಫಂಡ್, ಮ್ಯಾಗ್ನೆಟಿಕ್ ಮತ್ತು ITC ಗಳ ಫ್ರೋಜನ್ ಸ್ನ್ಯಾಕ್ಸ್ ವ್ಯವಹಾರದ ಮಾಜಿ ಮುಖ್ಯ ಕಾರ್ಯನಿರ್ವಾಹಕ ಸಚಿದ್ ಮದನ್ ಅವರಂತಹ ಹೂಡಿಕೆದಾರರಿಂದ ಉದ್ಯಮ ಮುನ್ನಡೆಯುತ್ತಿದೆ.
ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಪ್ರಾಧಿಕಾರ ( APEDA)
APEDA ಎಂದರೆ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ. ಮೂಲಸೌಕರ್ಯ, ಗುಣಮಟ್ಟ ಮತ್ತು ಮಾರುಕಟ್ಟೆ ಅಭಿವೃದ್ಧಿಯಂತಹ ತನ್ನ ಯೋಜನೆಗಳ ವಿವಿಧ ಘಟಕಗಳ ಅಡಿಯಲ್ಲಿ APEDA ರಫ್ತುದಾರರಿಗೆ ಸಹಾಯ ಮಾಡುತ್ತದೆ. ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು APEDA ಅಂತರರಾಷ್ಟ್ರೀಯ ಖರೀದಿದಾರ-ಮಾರಾಟಗಾರರ ಸಭೆಗಳನ್ನು ಮತ್ತು ಆಮದು ಮಾಡಿಕೊಳ್ಳುವ ದೇಶಗಳೊಂದಿಗೆ ವರ್ಚುವಲ್ ವ್ಯಾಪಾರ ಮೇಳಗಳನ್ನು ಸಹ ನಡೆಸುತ್ತದೆ.