ಕೊಡಗು ಹೆಗ್ಗಡೆ ಸಮಾಜದಲ್ಲಿ ಕೈಲ್ ಪೊಳ್ದ್ ಒತ್ತೋರುಮೆ ಕೂಟ
ಕೊಡಗು ಹೆಗ್ಗಡೆ ಸಮಾಜ ಬಿಟ್ಟಂಗಾಲದಲ್ಲಿ ಆಡಳಿತ ಮಂಡಳಿ ವತಿಯಿಂದ ಕೈಲ್ ಪೋಳ್ದ್ ಒತ್ತೋರುಮೆ ಕೂಟವನ್ನು ಏರ್ಪಡಿಸಲಾಗಿತ್ತು. ಸಮಾಜದ ಹಿರಿಯರಾದ ಮೂರೀರ ಕುಶಾಲಪ್ಪ ಹಬ್ಬದ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಸಮಾಜದ ಹಿರಿಯ ನಿರ್ದೇಶಕರಾದ ತೊರೇರ ಮುದ್ದಯ್ಯನವರು ಹಬ್ಬದ ವೈಶಿಷ್ಟ್ಯತೆಯನ್ನು ತಿಳಿಸಿ ನಮ್ಮೆಲ್ಲಾ ಹಬ್ಬಗಳು ಕೃಷಿಯೊಂದಿಗಿನ ಸಂಬಂಧವನ್ನು ಸಾರಿ ಹೇಳುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮಾಜದ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪ ಸ್ವಾಗತಿಸಿದರು. ಉಪಾಧ್ಯಕ್ಷ ರಾದ ಕೊರಕುಟ್ಟೀರ ಸರಾ ಚಂಗಪ್ಪ, ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪಡಿಞರಂಡ ಪ್ರಭು ಕುಮಾರ್ ಕೊಡಗು ಹೆಗ್ಗಡೆ ಸಮಾಜದ, ಖಚಾಂಚಿ ಪಾನಿಕುಟ್ಟೀರ ರಾಧಾ ಕುಟ್ಟಪ್ಪ, ನಿರ್ದೇಶಕರಾದ ಕೊಪ್ಪಡ ಪಟ್ಟುಪಳಂಗಪ್ಪ, ತಂಬಂಡ ಮಂಜುನಾಥ್,ಮೂರೀರ ಶಾಂತಿ, ಕೊಕ್ಕೇರ ಬೆಲ್ಲು ಸುಬ್ಬಯ್ಯ, ಕೊಂಗೆಪಂಡ ರಘು, ಹಿರಿಯರಾದ ಚಂಗಚಂಡ ನಂಜುಂಡ, ಉಪನ್ಯಾಸಕಿ ಮೂರೀರ ಸೀಮಾ, ಮಲ್ಲಾಡ ಕಟ್ಟಿ ಪೂಣಚ್ಚ ಮುಂತಾದವರು ಹಾಜರಿದ್ದರು