fbpx

ಬಣ್ಣದ ಲೋಕದಿ ಧಾಪುಗಾಲಿಡುತ್ತಿರುವ ನಟ: ಅಶ್ವತ್ಥ್ ಉಡುದೊಳಿರ!

‘One day the people that didn’t believe in you, will tell everyone how they met you.’    -Johnny Depp

ಸಾಧನೆ ಅನ್ನೋದೇ ಹಾಗೆ. ಸಾಧನೆ ಮಾಡಿದರೆ ನಮ್ಮನ್ನೂ ಕಿಂಚಿತ್ತು ನಂಬದೆ ಇದ್ದ ಜನರು ಕೂಡ ನಮ್ಮನ್ನು ಮೊದಲ ಬಾರಿಗೆ ಭೇಟಿಯಾದ ಸಂದರ್ಭವನ್ನು ವಿವರಿಸುತ್ತಾರೆ. ಹಾಗೆ ಬೆಳೆಯೋ ಮಟ್ಟಕ್ಕೆ ಬಣ್ಣದ ಲೋಕದಲ್ಲಿ ಹೆಸರು ಮಾಡುತ್ತಿರುವ ಪ್ರತಿಭೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಅಶ್ವತ್ಥ್ ಉಡುದೊಳಿರ…!

    ನಾಣಯ್ಯ ಯು.ಎಸ್ ಹಾಗು ಶಾರದಾ ಎಸ್ ದಂಪತಿಗಳ ಸುಪುತ್ರರಾಗಿರುವ ಅಶ್ವತ್ಥ್ ಅವರಿಗೆ ಬಾಲ್ಯದಿಂದಲೇ ನಟನೆ ಎಂದರೆ ಪಂಚಪ್ರಾಣವಾಗಿತ್ತು. ಗಾರ್ಡನ್ ಸಿಟಿ ಬೆಂಗಳೂರಿಗೆ ಕಾಲಿಟ್ಟ ಮೇಲೆ ಒಂದೂವರೆ ವರ್ಷ ರಾಜ್ ಮ್ಯೂಸಿಕ್ ವಾಹಿನಿಯಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದರು. ಅಕಸ್ಮಾತಾಗಿ ಅವಕಾಶ ಅರಸಿಕೊಂಡು ಬಂದು 2015ರಲ್ಲಿ ತೆರೆ ಕಂಡ ಎಂ.ಡಿ ಶ್ರೀಧರ್ ಅವರ ನಿರ್ದೇಶನದ ‘ಬುಗುರಿ’ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಎದುರಿಗೆ ಮುಖ್ಯ ಖಳನಾಯಕನಾಗಿ ಅಭಿನಯಿಸಿದರು.

   ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ‘ವಿರಾಟ್’ ಚಿತ್ರದ ಮುಖ್ಯ ಸಾಹಸ ದೃಶ್ಯದಲ್ಲಿ ವಿಲನ್ ಆಗಿ ಮಿಂಚಿದರು. ಸಂಚಾರಿ ವಿಜಯ್ ಅವರು ನಾಯಕ ನಟನಾಗಿದ್ದ ‘ನನ್ ಮಗಳೇ ಹಿರೋಯಿನ್’ ಎಂಬ ಸಿನಿಮಾದಲ್ಲಿ ಲೀಡ್ ರೋಲ್ ಮಾಡಿದರು. ಇತ್ತೀಚೆಗೆ ತಯಾರಾಗಿರು ‘ರಾಬಟ್೯’ ಸಿನಿಮಾದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್, ಡಿ ಬಾಸ್ ದರ್ಶನ್ ಅವರ ಎದುರು ಖಳ ನಾಯಕನ ಖದರ್ ತೋರಿಸಿದ್ದಾರೆ.

     ಕಿರಿತೆರೆಯಲ್ಲಿ ಕೂಡ ಇವರ ಸಾಧನೆಯ ಪಟ್ಟಿ ಬೆಳೆಯುತ್ತಲೇ ಇದೆ. Colors ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಶನಿ’ ಹಾಗು ‘ಮಹಾ ಕಾಳಿ’ ಧಾರಾವಾಹಿಯಲ್ಲಿ ನಂದಿಯ ಪಾತ್ರ ಮಾಡಿದರು. ಈಗ ಪ್ರಸ್ತುತ colors ವಾಹಿನಿಯ ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ರಜತ್ ಎಂಬ ಹೆಸರಿನ ಪಾತ್ರ ನಿರ್ವಹಿಸುತ್ತಿರುವರು.

   ಕಲಾವಿದನಾಗಿ ರೂಪುಗೊಂಡಿರುವ ಅವರು ಮಾತನಾಡುತ್ತಾ, ‘ಕಲಾವಿದನಿಗೆ ನಿರಂತರವಾಗಿ ಅವಕಾಶಗಳು ಸಿಗುವುದು ತೀರಾ ವಿರಳ.ಅವಕಾಶಗಳು ಸಿಗದಿರುವ ದಿನಗಳಲ್ಲಿ ಖಾಲಿಯಾಗಿ ಕಾಲ ಕಳೆಯುವುದು ಸವಾಲೆ ಸರಿ. ಆಗಲೂ ಸ್ಥಿತ ಪ್ರಜ್ಞರಾಗಿ ಇರುವುದು ನಿಜಕ್ಕೂ ಮುಖ್ಯವಾಗುತ್ತದೆ. ಯಶಸ್ಸು ಪಡೆಯುವ ತನಕ ಜನರು ಕೇಳುವ ಪ್ರಶ್ನೆಗಳಿಗೆಲ್ಲಾ ತಾಳ್ಮೆಯಿಂದ ಉತ್ತರಿಸುವ ಸಹನೆಯೂ ಇರಬೇಕಾಗುತ್ತದೆ ಎನ್ನುತ್ತಾರೆ‌.

    ಇನ್ನು ಮುಂದಕ್ಕೂ ಅಶ್ವತ್ಥ್ ಅವರಿಗೆ ಹೇರಳ ಅವಕಾಶಗಳು ದೊರೆತು ದೊಡ್ಡ ನಟನಾಗಿ ಬೆಳೆಯಲಿ ಎಂಬುದೇ ನಮ್ಮ ಸುದ್ದಿ ಸಂತೆ‌ ಬಳಗದ ಹಾರೈಕೆ.

error: Content is protected !!
satta king chart