fbpx

ದೀಪಕ್ ಪೊನ್ನಪ್ಪ ಅವರಿಂದ ಅರ್ಥಪೂರ್ಣವಾಗಿ ಹುಟ್ಟು ಹಬ್ಬ ಆಚರಣೆ

ಮಡಿಕೇರಿ ನಗರದ ಶ್ರೀಶಕ್ತಿ ವೃಧ್ರಾಶ್ರಮದ‌ ಹಿರಿಯರಿಗೆ ಸ್ವೆಟರ್ ವಿತರಿಸುವ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ಕೇಕ್‌ಕತ್ತರಿಸುವ ಮೂಲಕ ಪ್ರಾರಂಭಿಸಲಾಯಿತು.

ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸ್ತ್ರೀ ರೋಗ ತಜ್ಞೆ ಮಾತನಾಡಿ ದೀಪಕ್ ಅವರಿಗೆ ಶುಭಾಶಯವನ್ನು ತಿಳಿಸುತ್ತಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ಮೈಗೂಡಿಸಿಕೊಂಡವರಿಗೆ ಮಾತ್ರ ಈ‌ರೀತಿ ಕಾರ್ಯಕ್ರಮವನ್ನು ಮಾಡಲು ಸಾಧ್ಯ .ಈ ಸಂಘಟನೆಗೆ ಮತ್ತು ಪದಾಧಿಕಾರಿಗಳಿಗೆ ಇನ್ನು ಹೆಚ್ಚಿನ ಕೆಲಸ ಮಾಡಲು ಶಕ್ತಿ ದೊರೆಯಲಿ ಎಂದು ಹಾರೈಸಿದರು.

ಮತ್ತೋರ್ವ ಅತಿಥಿ ಪ್ರಕಾಶ್‌ಲಾಲಿ ಅವರು ಮಾತನಾಡುತ್ತಾ ಹುಟ್ಟು ಹಬ್ಬವನ್ನು ನೂತನ ರೀತಿಯಲ್ಲಿ ಆಚರಿಸುತ್ತಿರುವ ಗೆಳೆಯ ದೀಪಕ್ ಮತ್ತು ದಿವಾಕರ್ ಸಾಮಾಜಿಕವಾಗಿ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದು ನನ್ನನ್ನೂ ಆಹ್ವಾನಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಅವಕಾಶ ನೀಡಿದಕ್ಕಾಗಿ ಅಭಿನಂದನೆಗಳೆಂದರು.

ಜಿಲ್ಲಾ ಸಂಚಾಲಕರಾದ ಹೆಚ್ ಎಲ್ ದಿವಾಕರ್ ಮಾತನಾಡಿ ಹುಟ್ಟುಹಬ್ಬದ ದೀಪಕ್ ಅವರಿಗೆ ಶುಭಾಶಯಗಳನ್ನು ತಿಳಿಸುತ್ತಾ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊ‌ಂಡ ಶಿಷ್ಯ ನನಗೆ ದೊರೆತಿದ್ದು ನನ್ನ ಶಿಷ್ಯನ‌ ಬಗ್ಗೆ ನನಗೆ ಹೆಮ್ಮೆ ಇದೆ.ಇವರ ಸಾಮಾಜಿಕ ಜೀವನ‌ಹೀಗೆ ಸುಖಕರವಾಗಿರಲೆಂದರು.

ಕಾರ್ಯಕ್ರಮದ‌ ಕೇಂದ್ರಬಿಂದುವಾದ ದೀಪಕ್‌ಪೊನ್ನಪ್ಪ ಮಾತನಾಡುತ್ತಾ ಸಾಮಾಜಿಕ ಕಾರ್ಯದೊಂದಿಗೆ ಹುಟ್ಟುಹಬ್ಬ ಆಚರಿಸುವ ರುಚಿ ನನಗೆ ದೊರೆತಿದ್ದು ಬೆಳಗ್ಗೆ ನೇತ್ರದಾನಕ್ಕೆ ನೋಂದಣಿ ಮಾಡುವ ಮೂಲಕ ದಿನವನ್ನು ಪ್ರಾರಂಭ ಮಾಡಿದ್ದೇನೆ.ಹಿರಿಯರ ಆಶೀರ್ವಾದ ಬೇಡುವ ದೃಷ್ಟಿಯಿಂದ ನಮ್ಮ ಬಳಿಗೆ ಬಂದಿದ್ದೇನೆ.ಇಪ್ಪತ್ತೆಂಟಕ್ಕೆ ಕಾಲಿಟ್ಟಿರುವ ನಾನು ಎಪ್ಪಂತೆಂಟಾದರೂ ಇದೇ ರೀತಿ ಕೆಲಸ ಮಾಡಲು ಸಮರ್ಥನಾಗಿರುವಂತೆ ಆಶೀರ್ವಾದ ನೀಡಿ ಎಂದರು. ಆಶ್ರಮದ‌ ಹಿರಿಯರಿಗೆ ಭೋಜನದ ವ್ಯವಸ್ಥೆ ಮಾಡಲಾಯಿತು.

error: Content is protected !!