fbpx

ಕೃಷಿಯಲ್ಲಿ ತೊಡಗಿಸಿಕೊಂಡ ಮಾದರಿ ಬಾಲಕ

ಶಾಲಾ ವಿದ್ಯಾರ್ಥಿಗಳು ರಜೆ ಸಿಕ್ಕಿದರೆ ಸಾಕು ಪೋಷಕರೊಂದಿಗೆ ಊರೂರು ತಿರುಗಾಡುವುದು, ಅಜ್ಜ ನ ಮನೆಗೆ ತೆರಳುವುದು ಸಹಜ ಆದರೆ ಕುಶಾಲನಗರದ ಬಾಲಕನೊಬ್ಬ ಹೈನುಗಾರಿಕೆಯ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ.

ಹೌದು ಈತನ ಹೆಸರು ನಿಡ್ಯಮಲೆ ದಿಗಂತ್, ಮಡಿಕೇರಿಯ ಯುವ ಸಬಲೀಕರಣ ಮತ್ತು ಕ್ರೀಡಾಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ಈತ ತನ್ನ ಬೇಸಿಗೆ ರಜೆಯಲ್ಲಿ ಕೋಳಿ, ಮೇಕೆ, ಶ್ವಾನ ಸಾಕುವುದರ ಜೊತೆ ಒಣ ಮರದ ಹೊಟ್ಟಿನಲ್ಲಿ ಅಣಬೆ ಕೃಷಿ ಯನ್ನು ಮಾಡುತ್ತಿದ್ದು ತನ್ನ 10 ನೇ ವಯಸ್ಸಿನಲ್ಲಿ ಇತರೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾನೆ.

ಅಪ್ಪ ನಿಡ್ಯಮಲೆ ದಿನೇಶ್ ಮತ್ತು ತಾಯಿಯ ಸಹಕಾದೊಂದಿಗೆ ಈ ರೀತಿಯಲ್ಲಿ ಪುಟ್ಟ ವಯಸ್ಸಿನಲ್ಲೇ ಮೊಬೈಲ್, ಟಿವಿ ಅಂತ ಸಮಯ ಹಾಳು ಮಾಡದೆ ರೈತನಾಗಿ ಮಾರ್ಪಾಡಾಗಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

error: Content is protected !!