ಕಾರ್ತಿಂಗ ಸುರು ಆಕನ……!!

ಮಳೆಗಾಲ ಸುರು ಅವುಟು..
ಜರಿ ಮಳೆ ಬರ್ತಾ ಉಟ್ಟು..
ಕೊಡೆ ಗ ಎಲ್ಲೆಲ್ಲೋ ಬಿದ್ದುಟು..
ತಲೆಗೆ ಹಾಕುವ ಪ್ಲಾಸ್ಟಿಕ್ ಹರ್ದ್ ಹಾಳಾಗುಟು…..

ಎಲ್ಲವರ ಕಾಫಿ ತೋಟಕ್ಕೆ ಗೊಬ್ಬರ ಹಾಕಿ ಮುಗ್ದುಟು…
ಗದ್ದೆ ಹೂಡಿ ಬೀಜ ಹಾಕುವ ಸಮಯ ಬಂದುಟು..
ಕಾರ್ತಿಂಗ ಸುರು ಆಗಿ, ಮನೆವು ಎಲ್ಲ ಒಟ್ಟಿಗೆ ಸೇರುವ time ಬಾತ್..
ಕೂಗಲಿಟ್ಟ್.,ಕಣಲೆ ಕಾರ್ತಿಂಗಳ ವಿಶೇಷ ಗಮ್ಮತ್ತ್..

ತೋಡು ಗ ಯಾಗ ತುಂಬಿದೆ ತ
ಗೊತ್ಲೆ..
ಹೊರಗೆ ಹೋಗಿ ಬಾಕನ ಆದ ಚಳಿ ಇನ್ನು ಬುಟ್ಟತ್ಲೆ…
ಇನ್ನೇನು ಮಾಡ್ದು ಕಂಬಳಿ ಹೊದ್ದ್ ಮಲ್ಗುದು..
ಒಲೆ ಬುಡಲಿ ಕುದ್ದ್ ಹಲಸಿನಕ್ಕಿ ಗೇರ್ ಬೀಜ ಸುಡ್ದು..

ತೋಡುಲಿ ಮೀನ್ ಗೆ ಹತ್ತಿಟು..
ಕಾಡು ಲಿ ಜಲ ಏಳಿಕೆ ಸುರು ಆವುಟು..
ಪಣಪುಳಿ ಬಿದ್ದುಟು ,, ಎಸೆಂಡ್ ಕಾಂಬಕೆ ಸುರು ಆವುಟು….
ಹಲಸಿನ ಹಣ್ಣ್ ಕರಗಿ ಹಾಳಾಗಿಟು..

ತಂಪಾದ ಗಾಳಿ ಬೀಸ್ತಾ ಉಟ್ಟು..
ಗಾಳಿ ಬೀಸುಕನ ಗಿಡ ಮರ ಬಾಗಿ ಎಲೆಗ ಉದುರ್ತ ಉಟ್ಟು.
ಗುಡುಗು ಬಾಕನ ಹೆದರಿಕೆ ಆದೆ ..
ಅಲ್ಲಲ್ಲಿ ಸುಮಾರ್ ಅಳುಂಬು ಎದ್ದದೆ…

Current ಹೋದರೆ ಎಲ್ಲವರ ಮೊಬೈಲ್ switch off ಆದೆ ..
ಮಾವಿನ ಹಣ್ಣ್ ಬೀಳ್ತಾ ಉಟ್ಟು,, butter fruit ಹಣ್ಣಾದೆ..
ಮಳೆ ಜೋರಾಗಿ ಬಂದದೆ..
ಇದೆಲ್ಲ ಮುಗಿಯಕನ ಕಾರ್ತಿಂಗ
ಮುಗ್ದ್.. ಆಟಿ ತಿಂಗ ಸುರು ಆದೆ……

✍️ದರ್ಶನ್ ಕೋಳಿಮಾಡು ಚೇಲಾವರ ಗ್ರಾಮ.. ಚೆಯ್ಯಂಡಾಣೆ ಅಂಚೆ 571212 ಮಡಿಕೇರಿ ತಾಲ್ಲೂಕು.. ಕೊಡಗು...

error: Content is protected !!
satta king chart