ಎಂ.ಜಿ.ಕಾವೇರಮ್ಮ ಕವನ ಪೈಪೋಟಿಯ ಫಲಿತಾಂಶ ಪ್ರಕಟ.
✍ವಿನೋದ್ ಮೂಡಗದ್ದೆ
ಅರೆಬಾಸೆನ ಹಿರಿಯ ಸಾಹಿತಿ ಎಂ.ಜಿ ಕಾವೇರಮ್ಮ ಅವರ ೮೧ನೇ ಹುಟ್ಟುಹಬ್ಬದ ನೆಂಪುಲಿ ಚೆಂಬು ಸಾಹಿತ್ಯ ವೇದಿಕೆ ಇಸಿಕಂಡಿದ್ದ ಎಂ.ಜಿ. ಕಾವೇರಮ್ಮ ಅರೆಭಾಷೆ ಕವನ ಪೈಪೋಟಿನ ಫಲಿತಾಂಶ ಬಂದುಟು.
ಎರಡನೇ ವರ್ಷದ ಎಂ.ಜಿ.ಕಾವೇರಮ್ಮ ಕವನ ಪೈಪೋಟಿ ಗೆ ಬಾಳ ಲಾಯ್ಕನ ಪ್ರತಿಕ್ರಿಯೆ ಸಿಕ್ಕಿದ್ದ್. ಬಾಳಷ್ಟ್ ಯುವ ಜನರ್ ಈ ಪೈಪೋಟಿಲಿ ಭಾಗವಹಿಸಿದ್ದೊ. ಯುವ ಪೀಳಿಗೆ ಅರೆಬಾಸೆ ಸಾಹಿತ್ಯದ ಕಡೆ ಒಲವು ತೋರ್’ಸ್ತಾ ಇರ್ದು ಸ್ವಾಗತಾರ್ಹ ಹಂಗೆ ಗಮನಾರ್ಹ ಬೆಳವಣಿಗೆ ತ ಚೆಂಬು ಸಾಹಿತ್ಯ ವೇದಿಕೆನ ಅಧ್ಯಕ್ಷರಾದ ಶ್ರೀಮತಿ ಸಂಗೀತ ರವಿರಾಜ್ ಅವು ಅಭಿಪ್ರಾಯ ಪಟ್ಟೊಳೊ.
ಕಳ್ದ ಸಲಕ್ಕಿಂತ ಈ ಸಲ ಹೆಚ್ಚ್’ನ ಸಂಖ್ಯೆಲಿ ಕವನಗ ಬಂದಿದ್ದ್ ಎಲ್ಲನೂ ಬಾಳ ಲಾಯ್ಕಲಿ ಇತ್ತ್. ಎಲ್ಲ ಕವನಗಳ ಅಳ್ದ್ ತೂಗಿ ತೀರ್ಪುಗಾರರಾದ ಶ್ರೀಮತಿ ಲೀಲಾ ದಾಮೋದರ ಹಂಗೆ ಶ್ರೀ ಕುತ್ಯಾಳ ನಾಗಪ್ಪ ಗೌಡ (ಕಿರಣ) ಇವು ಉತ್ತಮ ಮೂರು ಕವನಗಳ ಸುರುನ ಇನಾಮುಗೆ ಜೀವನ್ ಪುರ ಮರ್ಕಂಜ ಅವ್ ಬರ್ದ ಹೂಟೆ, ಎರಡನೆ ಇನಾಮುಗೆ ಬಾರಿಯಂಡ ಜೋಯಪ್ಪ ಅವ್ ಬರ್ದ ಗೊತ್ತಾಗಿಯೂ ಗೊತ್ತಾಗದಂಗೆ ಹಂಗೆ ಮೂರನೆ ಇನಾಮು ಗೆ ಲಿಖಿತ ಗುಡ್ಡೆಮನೆ ಅವ್ ಬರ್ದ ಒಂಟಿ ಹೂ ಕವನನ ಆಯ್ಕೆ ಮಾಡಿಯೊಳೊ.
ಇದರೊಟ್ಟಿಗೆ ಇನ್ನೂ ಹತ್ತ್ ಕವನಗಳಾದ ಕೆರೆನ ಬಿಳಿ ತಾವರೆ (ಮನೋಜ್ ಕುಡೇಕಲ್ಲು), ಕಾದ್ ಕಂಡೆ ಒಳೆ (ವಿನೋದ್ ಮೂಡಗದ್ದೆ), ಬೊದ್ಕ್ ಇಷ್ಟೆ (ಡಾ| ಪುನೀತ್ ರಾಘವೇಂದ್ರ ಕುಂಟುಕಾಡು), ತಳಮಳ (ವಿಶ್ವನಾಥ್ ಎಡಿಕೇರಿ), ಡೋಂಕ್ರ್ ಕಪ್ಪೆ (ಅಭಿಜಿತ್ ಸುಳ್ಯ), ಎಚ್ಚರದಿಂದಿರೊಕು (ಹೊದ್ದೆಟ್ಡಿ ಭವಾನಿಶಂಕರ್), ತೊಪ್ಪು ಯಾರ್ದ್ ಯ ಬಾವ (ಸಹನಾ ಕಾಂತಬೈಲ್), ಕರೆಯದವು (ಉದಯಭಾಸ್ಕರ್ ಸುಳ್ಯ), ಹಾಲ್ ಜೇನ್ (ವೈಲೇಶ್ ಪಿ.ಎಸ್) , ಹುತಾತ್ಮ ಅಪ್ಪಯ್ಯ ಗೌಡ (ಕೊಟ್ಟಕೇರಿಯನ ಲೀಲಾ ದಯಾನಂದ್) ಇದರ್’ನ ಮೆಚ್ಚಿಕಂಡೊಳೊ.
ಮೂರನೇ ಇನಾಮುನ ಕುಂದಲ್ಪಾಡಿ ಲೀಲಾ ದಾಮೋದರ್ ಇವು ಪ್ರಾಯೋಜಿಸಿಯೊಳೊ. ಈ ಕವನ ಪೈಪೋಟಿ ಬಾಳಷ್ಟ್ ಯುವ ಕವಿಗಳ ಹುಟ್ಟು ಹಾಕುವಲ್ಲಿ ಯಶಸ್ವಿ ಆವ್ಟು..
✍ವಿನೋದ್ ಮೂಡಗದ್ದೆ