ಇವರು ಜನಸೇವೆಯಲ್ಲಿ ಸಾರ್ಥಕತೆ ಕಾಣುವ ಧೀಮಂತ…

ಈ ಜನಾನುರಾಗಿಯ ಹೃದಯವದು ಶ್ರೀಮಂತ…

An opportunity to work is good luck for me. I put my Soul into it. Each such opportunity opens the gates for the next one…
-Sri Narendra Modi, Honourable Prime Minister of India                            

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮಾತಿನಂತೆಯೇ  ಕೆಲಸವನ್ನು ನಿರ್ವಹಿಸಲು ಸಿಗುವ ಪ್ರತಿ ಅವಕಾಶಗಳನ್ನು ಅದೃಷ್ಟವೆಂದು ಭಾವಿಸಿ, ಅದನ್ನು ತನು ಮನ ಧನಗಳನ್ನೂ ನೀಡಿ ಆತ್ಮಸಾಕ್ಷಿಯ ಜಾಗೃತಿಯೊಂದಿಗೆ ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಪ್ರಚಾರವನ್ನೂ ಬಯಸದೆ ಮಾಡುತ್ತಿರುವ ಪ್ರೌಢತನದ, ಸರಳ ಸಜ್ಜನಿಕೆಯ ಕೊಡಗಿನ ಜನಸೇವಕರಾಗಿರುವ ವಿ.ಎಂ ವಿಜಯ್ ಅವರು…

ಅದಮ್ಯ ಛಲದೊಂದಿಗೆ ಶಕ್ತಿ ಮೀರಿ ಶ್ರಮಿಸುತ್ತಾ, ಸ್ವಾಭಿಮಾನದಿಂದ ಬೆಳೆದ ವಿ.ಎಂ ವಿಜಯ್ ಅವರು ಹಲವಾರು ಪ್ರಮುಖ ಸಮಾಜಮುಖಿ ಕೆಲಸಗಳನ್ನು ಅಳಿಲು ಸೇವೆ ಎಂಬಂತೆ ಮಾಡುತ್ತಾ, ತಮ್ಮ ರಾಜಕೀಯ ಕ್ಷೇತ್ರದಲ್ಲಿನ ಪಯಣವನ್ನು ಮಾಡಿಕೊಂಡು ಬಂದಿದ್ದಾರೆ. ಇಂದಿಗೂ ಅವರ ನಿಶ್ಕಳಂಕಿತ ಶುಭ್ರವಾದ ಅವರ ವ್ಯಕ್ತಿತ್ವವು ಅವರು ತೊಡುವ ಕಾದಿಯ ಬಿಳಿ ಧರಿಸಿನಷ್ಟೇ ಕಲೆ ರಹಿತ ಹಾಗು  ಶ್ವೇತವರ್ಣೀಯ.

ಸೋಮವಾರಪೇಟೆ ತಾಲೂಕಿನ ಆಡಿನಾಡೂರು ಗ್ರಾಮದ ಮಾಧವನ್ ಹಾಗು ಪಾರುಕುಟ್ಟಿ ದಂಪತಿಗಳ ಐವರು ಮಕ್ಕಳಲ್ಲಿ ಒಬ್ಬರಾಗಿ  ಶ್ರೀಯುತರು ಜನಿಸಿದರು.  ಬದುಕೆಂಬ ಬಾಣಲೆಯಲ್ಲಿ ಬಡತನವೆಂಬ ಜ್ವಾಲೆಯ ಬೇಗೆಯಲ್ಲಿ ಬೆಂದಿದ್ದ ಅವರಿಗೆ ಅದು ಹಸಿವೆಂದರೇನು ಎಂಬ ಪಾಠ ಕಲಿಸಿತ್ತು. ಆದರೂ ಅಂಜದೆ ಅಳುಕದೆ ಪ್ರಾಮಾಣಿಕವಾಗಿ ಶ್ರಮಜೀವಿಯಂತೆ  ನ್ಯಾಯದ ಪಥದಲ್ಲಿ ದುಡಿದಿದ್ದರಿಂದ ಸಿರಿತನವನ್ನು ಹೊಂದಲು ಸಾಧ್ಯವಾಯಿತು. ಖುದ್ದು ಬಡ ಕುಟುಂಬದಿಂದ ಬೆಳೆದಿದ್ದ ಅವರಿಗೆ ಬಡತನದ ಕರಾಳತೆ ಎಷ್ಟಿರುತ್ತದೆ ಎಂಬುದು ಸ್ಪಷ್ಟವಾಗಿ ಗೊತ್ತಿತ್ತು.

ಆದ್ದರಿಂದ ಸಮಾಜದ ಕೆಳ ಹಂತದ ಜನರ ನೋವು, ಕಣ್ಣೀರು ಇಲ್ಲವಾಗಿಸಲು ಸಾಧ್ಯವಾದಷ್ಟು ದುಡಿಯಬೇಕೆಂದು ನಿರ್ಧರಿಸಿ, ಮುನ್ನಡೆದ ವಿ.ಎಂ ವಿಜಯ್ ಅವರು ಸಮಾಜ ಸೇವೆ ಮಾಡಲು ಎಂದೂ ಹಿಂದೆ ಮುಂದೆ ನೋಡಲಿಲ್ಲ. ಶ್ರೀಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ, ಅವುಗಳಿಗೆ ಪರಿಹಾರ ಕಂಡುಕೊಡುವಲ್ಲಿ, ಬಡವರ ಕಣ್ಣೀರು ವರೆಸುವಲ್ಲಿ ಅವರು ತೋರಿರುವ ಆಸಕ್ತಿ ನಿಜಕ್ಕೂ ಕಾಳಜಿಯಿಂದ ಕೂಡಿತ್ತು.

ನಿಸ್ವಾರ್ಥ ಸ್ವಭಾವದ ಸಹೃದಯಿ ವಿಜಯ್ ಅವರು ಎಂದು ಗೆಲುವನ್ನು ತಲೆಗೆ ಏರಿಸಿಕೊಳ್ಳದೆ, ಸೋಲನ್ನು ಎದೆಗೆ ಇಳಿಸಿಕೊಳ್ಳದೆ ಸಮಚಿತ್ತದಲ್ಲಿ ನಡೆಯುವವರಾಗಿದ್ದಾರೆ. ಯಶಸ್ವಿ ಉದ್ಯಮಿ, ಬೆಳೆಗಾರರು ಹಾಗು ಸಮಾಜ ಸೇವಕರಾಗಿರುವ ಅವರು ತಾವು ಬಾಲ್ಯದಲ್ಲಿ ಬಡತನದಿಂದಾಗಿ ನೊಂದಿದ್ದನ್ನು ಇಂದಿಗೂ ನೆನೆಯುತ್ತಾರೆ. ಹಾಗಾಗಿ ಅವರ ಅಭಯವನ್ನು ಅರಸಿ ಬಂದ ಬಡವರಿಗೆ ಸಹಾಯ ಹಸ್ತ ಚಾಚುತ್ತಾರೆ. ‘ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬುದನ್ನು ಬಲವಾಗಿ ನಂಬುತ್ತಾರೆ. ನೇರ-ನಿಷ್ಠೂರ ಮಾತಿನ ವ್ಯಕ್ತಿಯಾಗಿ ಎಲ್ಲೂ ಕಪಟತನ ತೋರದೆ ಸಮಾಜ ಸೇವೆಯನ್ನು ಮನಸ್ಪೂರ್ವಕವಾಗಿ ಮಾಡಿದ್ದಾರೆ. ರಾಜಕಾರಣವನ್ನು ಪ್ರವೇಶಿಸಿ, ಅಧಿಕಾರವನ್ನು ಪಡೆದಾಗಲೂ ಕೊಂಚವೂ ಬದಲಾಗದೆ ಸಮಾಜದ ಪ್ರಗತಿಗಾಗಿ ಅವಿರತ ಕೆಲಸ ಮಾಡಿದ್ದಾರೆ. ಜನಪರವಾಗಿ ಧ್ವನಿ ಎತ್ತುತ್ತಾ ಹೋರಾಟದ ಹಾದಿಯಲ್ಲಿ ಬೆಳೆದ ಅವರ ಹಾದಿಯೂ ಅಷ್ಟೇ ದುರ್ಗಮವಾಗಿತ್ತು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರನ್ನು ಒಟ್ಟುಗೂಡಿಸಿ ಸಂಘಟಿಸುವ ಸಂಘಟನಾ ಚಾತುರ್ಯ ಶ್ರೀ ವಿ. ಎಂ ವಿಜಯ್ ಅವರಿಗೆ ಇದ್ದಿದ್ದರಿಂದ ರಾಜಕೀಯ ರಂಗದಲ್ಲಿನ ಹಿರಿಯ ನಾಯಕರುಗಳ ಗಮನ ಸೆಳೆದರು. ಆದ್ದರಿಂದ ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನಗಳು ಅವರಿಗೆ ದೊರೆಯಿತು.

ಈಗ ಭಾರತೀಯ ಜನತಾ ಪಕ್ಷ (ಬಿಜೆಪಿ)ಯಲ್ಲಿ ಅಸಂಘಟಿತ ಕಾರ್ಮಿಕರ ಜಿಲ್ಲಾ ಸಂಚಾಲಕರಾಗಿ ಧ್ವನಿ ಇಲ್ಲದ ಕಾರ್ಮಿಕ ವರ್ಗದವರಿಗೆ ಸರಕಾರದ ಯೋಜನೆಗಳು ತಲುಪುವಂತೆ ಮಾಡಿ ಅವರು ಷೋಷಣೆಗೆ ಒಳಗಾಗದಂತೆ ನೋಡಿಕೊಂಡಿದ್ದಾರೆ.  ಹಿಂದೂ ಮಳಿಯಾಳಿ ಸಂಘದ ತಾಲೂಕು ಅಧ್ಯಕ್ಷರಾಗಿ ಅದೇ ರೀತಿ ಹಲವಾರು ಸಂಘ ಸಂಸ್ಥೆಗಳು, ಬ್ಯಾಂಕುಗಳಲ್ಲಿ ಅಧ್ಯಕ್ಷರಾಗಿ, ಸಂಚಾಲಕರಾಗಿ ಹಾಗು ಸಲಹೆಗಾರರಾಗಿ ಕಾರ್ಯೋನ್ಮುಕವಾಗಿದ್ದಾರೆ. ಅದರೊಂದಿಗೆ ಅಡಿಯಾನಾಡೂರು ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಮತ್ತು ಸ್ಟೋನ್ ಕ್ರಷರ್ ಒನರ್ಸ್ ಅಸೋಸಿಯೇಶನ್ನಿನ ಜಿಲ್ಲಾಧ್ಯಕ್ಷರಾಗಿ ತಮ್ಮ ಅಮೂಲ್ಯವಾದ ಸೇವೆಯನ್ನು ಸಲ್ಲಿಸುತ್ತಿದ್ದಾರೆ‌. ಹಿಂದೂ ಮಲೆಯಾಳ ಸಂಘದ ಜಿಲ್ಲಾ ಗೌರವಾಧ್ಯಕ್ಷರಾಗಿ ಬಿಡುವಿರದಂತೆ ಒಂದಿಲ್ಲೊಂದು ಚಟುವಟಿಕೆಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ವೈಯಕ್ತಿಕ ಜೀವನ:

ಶ್ರೀ ವಿ.ಎಂ ವಿಜಯ್ ಅವರ ಮಡದಿ ವಿ.ವಿ ಶೀಲಾ ಹಾಗು ಮೂವರು ಮಕ್ಕಳುಗಳನ್ನು ಹೊಂದಿದ್ದಾರೆ. ದೀಪ್ತಿ, ದೀಕ್ಷಿತ್, ದಿವಿಜಾ ಶ್ರೀ ಅವರ ಮಕ್ಕಳಾಗಿದ್ದಾರೆ. ಕಿಶೋರ್ ಅವರು ದೀಪ್ತಿ ಅವರನ್ನು ವಿವಾಹವಾಗಿದ್ದಾರೆ. ದೀಪ್ತಿ ಅವರು ಹಿರಿಯ ಮಗಳಾಗಿದ್ದು ಅವರು ಸ್ನಾತಕೋತ್ತರ ಪದವೀಧರೆ. ಮಗ ದೀಕ್ಷಿತ್ ಅವರು ಎಂ.ಟೆಕ್ ಓದುತ್ತಿದ್ದಾರೆ. ಕಿರಿಯ ಮಗಳು ದಿವಿಜಾ ಶ್ರೀ ವೈದ್ಯಕೀಯ ಶಿಕ್ಷಣದ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ. ಅಳಿಯ ಕಿಶೋರ್ ಅವರು ಎಂ.ಎ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ. ಮನೆಯ ಎಲ್ಲರೂ ಸದಸ್ಯರುಗಳು ವಿ.ಎಂ ವಿಜಯ್ ಅವರು ಮಾಡುವ ಎಲ್ಲಾ ಸಾಮಾಜಿಕ ಹಾಗು ಧಾರ್ಮಿಕ ಕಾರ್ಯಗಳಿಗೆ ಸಾಥ್ ನೀಡಿ ಸಹಕರಿಸುತ್ತಿದ್ದಾರೆ. ಸುಖಿ ಸಂಸಾರ ಇಡೀ ಸಮಾಜಿಕ ಕಾಳಜಿ ಆಸಕ್ತಿಯನ್ನು ಹೊಂದಿದೆ.

ಸಂಘಟನಾ ಚಾಣಾಕ್ಷ:

ಉತ್ತಮ ಸಂಘಟನಾ ಶಕ್ತಿ ಇವರಿಗಿದ್ದು, ಈ ಹಿಂದೆ ಜೆಡಿಎಸ್ ಪಕ್ಷದಲ್ಲಿದ್ದಾಗ, ಇವರ ಬದ್ಧತೆಯನ್ನು ಮೆಚ್ಚಿ ರಾಜ್ಯ ಕಾರ್ಯದರ್ಶಿ ಹುದ್ದೆಯನ್ನು ಮುಖಂಡರು ನೀಡಿದ್ದರು. ಕೊಡಗು, ಪಿರಿಯಾಪಟ್ಟಣ ಮತ್ತು ಹುಣಸೂರು ತಾಲೂಕುಗಳಲ್ಲಿ ಚುನಾವಣೆಯ ಉಸ್ತುವಾರಿ ಹೊತ್ತು, ಅದರಲ್ಲಿ ಪಕ್ಷ ಅಮೋಘವಾದ ಗೆಲುವನ್ನು ಪಡೆಯಲು ಪ್ರಮುಖ ಪಾತ್ರ ವಹಿಸಿದ್ದರು. ಅದೇ ರೀತಿ ಜೆ.ಡಿ.ಎಸ್ ಪಕ್ಷದಲ್ಲಿ ಎಲ್ಲಾ  ಹಿಂದುಳಿದ ವರ್ಗದ ಜನರ ಅಭ್ಯುದಯಕ್ಕೆ  ಜಿಲ್ಲಾ ಅಧ್ಯಕ್ಷರಾಗಿಯೂ ಸೇವೆ ಮಾಡಿದ್ದರು. ಜೆಡಿಎಸ್ ಹಾಗು ಕಾಂಗ್ರೆಸ್ ಅಲ್ಲಿ ಸಾಕಷ್ಟು ಹೊಣೆಗಳನ್ನು ಯಶಸ್ವಯಾಗಿ ನಿಭಾಯಿಸಿದ್ದರು.  ಬದಲಾದ ರಾಜಕೀಯ ಸನ್ನಿವೇಶದಲ್ಲಿ  16 ಜನವರಿ 2018ನಲ್ಲಿ ಬಿಜೆಪಿಗೆ ತಮ್ಮ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಸೇರ್ಪಡೆಯಾದ ಬಳಿಕ ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗುತ್ತಾ, ತಮ್ಮ ನಾಯಕತ್ವದ ಸಾಮಥ್ಯ೯ದ ಕಸುವನ್ನು ಪಕ್ಷ ಸಂಘಟನೆಯ ಮೂಲಕ ತೋರಿಸಿ, ಬಿಜೆಪಿಯ ಗೆಲುವಿನ ನಾಗಾಲೋಟದಲ್ಲಿ ಸಾಗುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 

ಅಧಿಕಾರ ಇದ್ದಾಗ ಹಿಗ್ಗಲಿಲ್ಲ, ಇಲ್ಲದಾದಾಗ ಕುಗ್ಗಲಿಲ್ಲ!

ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷರಾದಾಗಿ ಅಧಿಕಾರ ವಹಿಸಿಕೊಂಡ ಮೇಲೆ ಹಲವಾರು ಮಹತ್ತರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದರು. ಅವುಗಳಲ್ಲಿ ಪ್ರಮುಖ ಕಾರ್ಯಗಳನ್ನು ಹೇಳುವುದಾದರೆ, ಆಗ ಸನ್ಮಾನ್ಯ ಶ್ರೀ ಬಿ.ಎಸ್ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು.

ಅವರನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರ ಒಕ್ಕೂಟದ ನಿಯೋಗವು ವಿಜಯ್ ಅವರ ಮುಂದಾಳತ್ವದಲ್ಲಿ ಹೋಗಿ ಭೇಟಿಯಾಗಿ, ‘ಕೊಡಗು ಮಲೆನಾಡ ಗುಡ್ಡಗಾಡಿನ ಪ್ರದೇಶವಾಗಿದ್ದು, ಮಳೆಗಾಲದಲ್ಲಿ ಅತಿ ಹೆಚ್ಚು ಹಾನಿಗಳಾಗುತ್ತದೆ. ಹಾಗಾಗಿ ಮಳೆ ಹಾನಿ ಪರಿಹಾರ ವಿತರಿಸಲು ಅಧ್ಯಕ್ಷರಿಗೆ ವಿವೇಚನಾ ನಿಧಿಗಾಗಿ ಹಣ ಬಿಡುಗಡೆ ಮಾಡಿಸಿದರು. ಆವಾಗ ಗ್ರಾಮ ಸಡಕ್ ಯೋಜನೆಯಲ್ಲಿ ಕೈಗೊಳ್ಳುವ ಕಾಮಗಾರಿಗಳಲ್ಲಿ ಪೈಪ್ ಲೈನ್ ದುರಸ್ತಿ ಪಡಿಸಲು ಅವಕಾಶವಿರಲಿಲ್ಲ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅದಕ್ಕೆ ಬೇಕಾದ ಅನುದಾನವನ್ನು ಬಿಡುಗಡೆ ಮಾಡಿಸಿದ್ದರು. ನಂತರ ರಾಜ್ಯ ಸರಕಾರ ಅದನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಬದಲಾವಣೆಯನ್ನು ತಂದಿತು. ಹೀಗೆ ಹಲವಾರು ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಿಸಿ, ಭ್ರಷ್ಟಾಚಾರ ರಹಿತವಾಗಿ ಜನ ಮನ್ನಣೆಯನ್ನು ಗಳಿಸಿ ಜಿಲ್ಲೆಯ ಏಳಿಗೆಗೆ ಯತ್ನಿಸಿದರು ಬಂದಿರುತ್ತಾರೆದರು.

ಅಧಿಕಾರದ ಅವಧಿ ಮುಗಿದ ಮೇಲೂ ಯಾವ ವ್ಯತ್ಯಾಸವೂ ಇರದಂತೆ ಅದೇ ಗಾಂಭೀರ್ಯದೊಂದಿಗೆ  ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವತ್ತ ತಮ್ಮ ಏಕಚಿತ್ತವನ್ನಿತ್ತು ಸ್ಪಂದನಾಶೀಲ ಗುಣವನ್ನೇ ಹೊಂದಿದ್ದರು. ನಾಯಕತ್ವದ ಗುಣಗಳ ಎಲ್ಲಾ ಕೌಶಲ್ಯವನ್ನೂ ಬಳಸಿ, ಪ್ರಜೆಗಳೊಂದಿಗೆ ಸಾಮಾನ್ಯ ಪ್ರಜೆಯಂತೆ ಪಕ್ಷ ಸಂಘಟನೆಯನ್ನು ಅನವರತವಾಗಿ ಮಾಡುತ್ತಿದ್ದಾರೆ.

ಶ್ರೀ ವಿ.ಎಂ ವಿಜಯ್ ಅವರು ಆಯೋಜಿಸಿದ್ದ ಸಮಾವೇಶದಲ್ಲಿ ಸಾಗರೋಪಾದಿಯಲ್ಲಿ ನೆರೆದಿರುವ ಜನರು

ಯುವ ನಾಯಕರುಗಳಿಗೆ ಮಾರ್ಗದರ್ಶನ ನೀಡಿ ಅವರನ್ನು ಬೆಳೆಸುವ ಕುರಿತು ಮುತುವರ್ಜಿ ವಹಿಸುತ್ತಿದ್ದಾರೆ.‌

ಧಾರಾಳ ಗುಣದ ಕೊಡು ಕೈ ದಾನಿ:

ಅನಾರೋಗ್ಯ ಹೊಂದಿದ ಮಕ್ಕಳಿಗೆ ಅಭಯ ಹಸ್ತ ನೀಡುವ ಸಂದರ್ಭ

ಅಪೂರ್ವ ಯುವ ಪ್ರತಿಭೆಗಳು, ಕ್ರೀಡಾಪಟುಗಳು ಆರ್ಥಿಕ ಸಮಸ್ಯೆಯೆಂದು ಬಂದಾಗ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿ, ಸಹಾಯ ಮಾಡಿದ್ದಾರೆ. ವಿದ್ಯಾವಂತ ಮಕ್ಕಳು ಶಿಕ್ಷಣಕ್ಕೆಂದು ಆರ್ಥಿಕ ಅಭಯ ಕೇಳಿದಾಗ ಅವರಿಗೆ ಬೇಕಿರುವಷ್ಟನ್ನು ನೀಡಿ, ಅವರ ಶಿಕ್ಷಣವನ್ನು ಪೂರ್ಣಗೊಳಿಸಿ ಸಬಲರಾಗಲು ಬೆನ್ನೆಲುಬಾಗಿ ನಿಂತಿದ್ದಾರೆ.

ಬಡವರ ಬಂಧು ಕರುಣಾಮಯಿ ವಿ.ಎಂ ವಿಜಯ್ ಅವರು ಧನ ಸಹಾಯ ಮಾಡುತ್ತಿರುವುದು
ಬಡವರ ಪಾಲಿನ ಆಶಾಕಿರಣ ಶ್ರೀ ವಿ.ಎಂ ವಿಜಯ್

ಅನಾರೋಗ್ಯದ ಸಮಸ್ಯೆಯೆಂದು ಕಷ್ಟ ಹೇಳಿಕೊಳ್ಳಲು ಬಂದವರಿಗೆ ಆರ್ಥಿಕ ಬಲ ತುಂಬಿದ್ದಾರೆ. ಇವಿಷ್ಟೇ ಅಲ್ಲದೆ ದೇವಾಲಯಗಳ ನಿರ್ಮಾಣ,ಜೀಣೋದ್ಧಾರ, ಸಮುದಾಯ ಭವನಗಳ ನಿರ್ಮಾಣಕ್ಕೆ ದೇಣಿಗೆ ಹಣವನ್ನು  ನೀಡುತ್ತಾ ಬಂದಿರುತ್ತಾರೆ. ಆದರೆ ಅದ್ಯಾವುದಕ್ಕೂ ಪ್ರಚಾರ ಪಡೆಯದೆ ಬಲ ಕೈಯಲ್ಲಿ ಕೊಟ್ಟ ದಾನ ಎಡ ಕೈಗೆ ಗೊತ್ತಾಗದಂತೆ ನೀಡಿರುವುದು ‘ದಾನ’ವೆಂಬ ಪದದ ಅರ್ಥಕ್ಕೆ ನ್ಯಾಯ ಸಲ್ಲಿದಂತೆಯೇ ಸರಿ.

ಒಟ್ಟಿನಲ್ಲಿ ಸಮಾಜಮುಖಿ, ಸ್ಪಂದನಾಶೀಲ ಗುಣ, ಸಮರ್ಪಣಾ ಮನೋಭಾವ ಹಾಗು ಸಮರ್ಥ ಸಂಘಟಕರಾದ ಸರಳ ಸಜ್ಜನಿಕೆಯ ಅಜಾತ ಶತ್ರುವೂ ಆಗಿರುವ ವಿ.ಎಂ ವಿಜಯ್ ಅವರು ಜನ ನಾಯಕರಾಗಬೇಕೆಂಬ ಆಸೆಯಲ್ಲಿ ಮುನ್ನಡೆಯುತ್ತಿರುವ ಎಲ್ಲಾ ಯುವಕರಿಗೂ ಆದರ್ಶ ಪ್ರಾಯರೇ ಆಗಿದ್ದಾರೆ. ಅವರು ಮಾಡುತ್ತಿರುವ ಜನಸೇವೆಗೆ ಮತ್ತಷ್ಟು ರಾಜಕೀಯ ಸ್ಥಾನಮಾನ ಸಿಕ್ಕರೆ ಅವರಿಗೆ ಮತ್ತಷ್ಟು ಬಲ ಬಂದಂತೆ ಆಗುತ್ತದೆ. ಅಭಿವೃದ್ಧಿಯ ಹರಿಕಾರ, ಪ್ರಗತಿ ಮಂತ್ರದ್ದೇ ಜೇಂಕಾರ ಮಾಡುವ ವಿ.ಎಂ ವಿಜಯ್ ಅವರಂತಹ ನಾಯಕರು ಆಡಳಿತದ ಚುಕ್ಕಾಣಿ ಹಿಡಿದಾಗ ಮಾತ್ರ, ಪ್ರಜಾಪ್ರಭುತ್ವದ ನೈಜ ತಾಕತನ್ನು ಸಮಾಜದ ಉನ್ನತಿ ಮೂಲಕ ತೋರಿಸಲು ಸಾಧ್ಯ!

ರಜತ್ ರಾಜ್ ಡಿ.ಹೆಚ್,
ಸಂಪಾದಕರು,
ಸುದ್ದಿಸಂತೆ ವೆಬ್ ಪೊರ್ಟಲ್
error: Content is protected !!
satta king chart