ಇಂಡೋ-ಪಾಕ್ ಸಮರಕ್ಕೆ ಡೇಟ್ ಫಿಕ್ಸ್

ಢಾಕಾ, ಮಾ.31- ಬಹಳ ವರ್ಷಗಳಿಂದ ಎದುರು ನೋಡುತ್ತಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕೊನೆಗೂ ದಿನಾಂಕ ನಿಗಧಿಯಾಗಿದೆ. ಇದೇ ಏಪ್ರಿಲ್ 4 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಗೆಲುವಿಗಾಗಿ ಪರಸ್ಪರ ಪೈಪೋಟಿ ನಡೆಸಲಿವೆ.

ಇತ್ತೀಚೆಗಷ್ಟೇ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಮುಕ್ತಾಯವಾದ ನಂತರ ಈಗ ಐಪಿಲ್ ರಂಗು ರಂಗೇರುತ್ತಿದೆ. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ನಡುವೆ ಟ್ವೆಂಟಿ-20 ಕ್ರಿಕೆಟ್ ಸರಣಿಯೇ ಎಂದು ಗಲಿಬಿಲಿಯಾಗಬೇಡಿ.

ಪಾಕಿಸ್ತಾನ ಹಾಗೂ ಭಾರತ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿರುವುದು ಅಂಧರ ಕ್ರಿಕೆಟ್ ಸರಣಿಯಲ್ಲಿ, ಈ ತ್ರಿಕೋನ ಸರಣಿಯಲ್ಲಿ ಬಾಂಗ್ಲಾದೇಶ ಮತ್ತೊಂದು ತಂಡವಾಗಿ ಕಣಕ್ಕಿಳಿಯಲಿದೆ.

ಪಂದ್ಯ ಯಾವುದೇ ಆಗಿರಲಿ ಭಾರತ ಹಾಗೂ ಪಾಕಿಸ್ತಾನ ಪರಸ್ಪರ ಸೆಣಸುತ್ತಿದೆ ಎಂದು ಅಲ್ಲಿ ರೋಚಕತೆ ಇರುತ್ತದೆ.

ಏಪ್ರಿಲ್ 2 ರಿಂದ ಆರಂಭವಾಗುವ ಈ ತ್ರಿಕೋನ ಸರಣಿಯಲ್ಲಿ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶದ ಸವಾಲನ್ನು ಎದುರಿಸಿದರೆ, ಏಪ್ರಿಲ್ 3 ರಂದು ಪಾಕಿಸ್ತಾನ ಹಾಗೂ ಬಾಂಗ್ಲಾದೇಶ, ಏಪ್ರಿಲ್ 4 ರಂದು ಪಾಕಿಸ್ತಾನದ ವಿರುದ್ಧ ಫೈಟ್ ಮಾಡಲಿವೆ. ಏಪ್ರಿಲ್ 6 ರಂದು ಪಾಕಿಸ್ತಾನ, ಬಾಂಗ್ಲಾದೇಶ ಸೆಣಸಿದರೆ, ಏಪ್ರಿಲ್ 7 ರಂದು ಮತ್ತೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಬಿಗ್‍ಫೈಟ್, ಏಪ್ರಿಲ್ 8 ರಂದು ಫೈನಲ್ ಪಂದ್ಯ ನಡೆಯಲಿದೆ.

error: Content is protected !!
satta king chart