2021-22ನೇ ಸಾಲಿನ ಗಡಿ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭ
‘ಭಾರತ ಸ್ವಾತಂತ್ರ್ಯ ಅಮೃತೋತ್ಸವದ ಸವಿನೆನಪು’
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಹಾಗೂ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ (ರಿ), ಮಡಿಕೇರಿ, ಇವರ ಸಂಯುಕ್ತ ಆಶ್ರಯದಲ್ಲಿ ೨೦೨೧-೨೨ನೇ ಸಾಲಿನ ಗಡಿ ಸಾಂಸ್ಕೃತಿಕ ಉತ್ಸವದ ಉದ್ಘಾಟನಾ ಸಮಾರಂಭ ದಿನಾಂಕ ನಾಳೆ ಬುಧವಾರ, ಬೆಳಿಗ್ಗೆ ೧೦.೦೦ ಗಂಟೆಗೆ ಮಡಿಕೇರಿಯ ಕಾವೇರಿ ಕಲಾ ಕ್ಷೇತ್ರ (ನಗರ ಸಭಾ ಸಭಾಂಗಣ)ಯಲ್ಲಿ ನಡೆಯಲಿದೆ.
ಉತ್ಸವದ ಉದ್ಘಾಟನಾ ಸಮಾರಂಭ ಪಾಸ್ತವಿಕ ನುಡಿಯನ್ನು ಕೊಡಗುಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ (ರಿ)ದ ಅಧ್ಯಕ್ಷರು ಶ್ರೀ ಎಂ.ಪಿ. ಕೇಶವ ಕಾಮತ್ , ಆಡಲಿದ್ದಾರೆ.
ಉದ್ಘಾಟನೆಯನ್ನು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಭಾ,ಆ,ಸೇ ಅಧ್ಯಕ್ಷರು ಡಾ ಸಿ.ಸೋಮಶೇಖರ್ ನೆರವೇರಿಸಲಿದ್ದಾರೆ.
ಉಪನ್ಯಾಸವನ್ನು ಟಿಪಿ ರಮೇಶ್ ಮಾಜಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಗಡಿ ಪ್ರದೇಶದ ಜನ ಜೀವನ ವಿಚಾರದ ಕುರಿತು ಮಂಡಿಸಲಿದ್ದಾರೆ.
ಅಧ್ಯಕ್ಷತೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಅಪ್ಪಚ್ಚು ರಂಜನ್ ವಹಿಸಲಿದ್ದು, ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಹಾಗೂ ಶಾಸಕರು, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶ್ರೀ ಮುಖ್ಯ ಅಥಿತಿಗಳಾಗಿ ಶ್ರೀ ಕೆ.ಜಿ. ಬೋಪಯ್ಯ ,ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿಯ ಅಧ್ಯಕ್ಷರು ಶ್ರೀ ರವಿ ಕುಶಾಲಪ್ಪ ,ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದರು ಪ್ರತಾಪ್ ಸಿಂಹ, ಶಾಸಕರು ಶ್ರೀಮತಿ ವೀಣಾ ಅಚ್ಚಯ್ಯ , ಕರ್ನಾಟಕ ವಿಧಾನ ಪರಿಷತ್ ಶಾಸಕರು ಶ್ರೀ ಎಸ್.ಎಲ್. ಬೋಜೆಗೌಡ, ಶಾಸಕರು ಕರ್ನಾಟಕ ವಿಧಾನ ಪರಿಷತ್ ಅಯನೂರು ಮಂಜುನಾಥ್, ಶಾಸಕರು ಕರ್ನಾಟಕ ವಿಧಾನ ಪರಿಷತ್ ಎಂ.ಪಿ ಸುಜಾ ಕುಶಾಲಪ್ಪ, ನಗರಸಭೆ ಮಡಿಕೇರಿ ಅಧ್ಯಕ್ಷರು ಅನಿತಾ ಪೂವಯ್ಯ, ನಗರಾಭಿವೃದ್ಧಿ ಪ್ರಾಧಿಕಾರ ಮಡಿಕೇರಿ ಅಧ್ಯಕ್ಷರು ರಮೇಶ್ ಹೊಳ್ಳ ವಹಿಸಲಿದ್ದಾರೆ.