ಹೋಳಿ ಹಬ್ಬಕ್ಕೆ ವಿಶೇಷ ಉಡುಗೊರೆ ಪಡೆದ ರಶ್ಮಿಕಾ!
ಹೈದರಾಬಾದ್ : ಟಾಲಿವುಡ್ ನ ಬಹುಬೇಡಿಕೆಯ ನಟಿ ಎನಿಸಿಕೊಂಡ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹೋಳಿ ಹಬ್ಬಕ್ಕಾಗಿ ವಿಶೇಷ ಉಡುಗೊರೆಯೊಂದು ಹತ್ತಿರದ ವ್ಯಕ್ತಿಯಿಂದ ದೊರಕಿದೆ.
ಹೌದು. ನಟಿ ರಶ್ಮಿಕಾ ಮಂದಣ್ಣ ಅವರಿಗೆ ಹೋಳಿ ಹಬ್ಬದ ಉಡುಗೊರೆಯಾಗಿ ಹತ್ತಿರದ ವ್ಯಕ್ತಿಯೊಬ್ಬರು ಉಂಗುರವನ್ನು ಕಳುಹಿಸಿದ್ದಾರೆ. ಈ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡಿಯಾದಲ್ಲಿ ತಾವು ಅದನ್ನು ಪಡೆದುಕೊಂಡಿರುವುದಾಗಿ ಹಾಗೂ ಅವರು ಕಳುಹಿಸಿದ ರಹಸ್ಯ ಸಂದೇಶವನ್ನು ಓದಿರುವುದಾಗಿ ತಿಳಿಸಿದ್ದಾರೆ.
ಹಾಗಾಗಿ ಅಭಿಮಾನಿಗಳು ಇದು ಅವರ ಗೆಳೆಯ ಇರಬಹುದು ಎಂಬ ಸಂದೇಹ ಹೊರಹಾಕಿದ್ದಾರೆ. ಆದರೆ ರಶ್ಮಿಕಾ ಆ ವ್ಯಕ್ತಿ ಯಾರು ಎಂಬುದನ್ನು ಅವರ ಹೆಸರನ್ನು ಬಹಿರಂಗಪಡಿಸಿಲ್ಲ ಎನ್ನಲಾಗಿದೆ.