ವಿಶ್ವ ಕೈತೊಳೆಯುವ ದಿನಾಚರಣೆ
ಈದಿನ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗ ಪೋನ್ನಂಪೇಟೆಯಲ್ಲಿ ವಿಶ್ವ ಕೈತೊಳೆಯುವ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀಮತಿ ಗಾಯತ್ರಿ ರವರು ಮಕ್ಕಳಿಗೆ ಕೈ ತೊಳೆಯುವ ರೀತಿ ತಿಳಿಸಿದರು. ಕೈ ತೊಳೆಯುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ ಎಂದು ತಿಳಿಸಿದರು. ಎಲ್ಲ ಮಕ್ಕಳಿಗೂ ಕೈ ತೊಳೆಯಲು ಅವಕಾಶ ನೀಡಲಾಯಿತು.
ಈ ಸಂಧರ್ಭ ಮುಖ್ಯ ಶಿಕ್ಷಕರಾದ ಬಿ ಎಂ ವಿಜಯ್. ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಡ ಜೀವನ್. ಸಹ ಶಿಕ್ಷಕರಾದ ಫಿಲೋಮೀನ. ಜಾನ್ಸಿ. ಮಂಗಳಾoಗಿ. ಮಹೇಶ್. ವಿನಿತಾ ಶಕೀಲಾಬಾನು ಹಾಗೂ 1 ರಿಂದ 7ನೇ ತರಗತಿ ಮಕ್ಕಳು ಹಾಜರಿದ್ದರು.