ಸೈನಿಕ ಶಾಲೆಯಲ್ಲಿ ನಡೆಯಿತು ವಾರ್ಷಿಕ ಸಾಂಸ್ಕೃತಿಕ ಸ್ಪರ್ಧಾಕೂಟ
ದೇಶದ ಪ್ರತಿಷ್ಠಿತ ಮೂವತ್ತಮೂರು ಸೈನಿಕ ಶಾಲೆಗಳ ಪೈಕಿ ಒಂದಾಗಿರುವ ಕೊಡಗು ಸೈನಿಕ ಶಾಲೆಯಲ್ಲಿ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧಾಕೂಟಗಳು ಅಕ್ಟೋಬರ್ ಹದಿಮೂರು ಮತ್ತು ಹದಿನಾಲ್ಕನೇ ತಾರೀಖಿನಂದು ನಡೆದವು.
ಕೋವಿಡ್ ಕಾರಣದಿಂದ ಎರಡು ವರ್ಷಗಳ ಕಾಲ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯದಿದ್ದ ಕಾರಣ ಈ ಬಾರಿ ಆರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದವು. ಕಟಾರಿ, ಮೆನನ್, ಕಾರ್ಯಪ್ಪ ಮತ್ತು ಸುಬ್ರತೋ ಹೌಸುಗಳ ತೀವ್ರ ಪೈಪೋಟಿಯಲ್ಲಿ ಕಾರ್ಯಪ್ಪ ಹೌಸ್ ಈ ವರ್ಷದ ಚಾಂಪಿಯನ್ ವಿಭಾಗವಾಗಿ ಹೊರಹೊಮ್ಮಿತು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಕಣ್ಣನ್, ಆಡಳಿತಾಧಿಕಾರಿಯಾದ ಲೆಫ್ಟಿನೆಂಟ್ ಕರ್ನಲ್ ಅಜಿತ್ ಲಾಟರ್ ನರೆದಿದ್ದ ಸಮಾರಂಭದಲ್ಲಿ ಮಡಿಕೇರಿಯ ಮಕ್ಕಳ ತಜ್ಞ ವೈದ್ಯರು ಮತ್ತು ಸಾಹಿತಿ ಮೇಜರ್ ಡಾ ಕುಶ್ವಂತ್ ಕೋಳಿಬೈಲುರವರು ಅತಿಥಿ ಮತ್ತು ತೀರ್ಪುಗಾರರಾಗಿ ಭಾಗವಹಿಸಿದ್ದರು.