ನನ್ನ ಮಂಞ
ಅರೆಭಾಷೆ ಕಥೆ
“ಅಮ್ಮ… ರಾಜು ಅಣ್ಣ ಕುಡ್ದ್ ಗಾಡಿ ಓಡ್ಸಕನ ಬಿದ್ದ್ ಪೆಟ್ಟಾಗಿ ಅಡ್ಮಿಟ್ ಮಾಡಿಯೊಳೊ ಗಡ…” ನನ್ನ ಮಗಳ ಈ ಮಾತ್ ಕೇಳಿ ಮೊನ್ಸಿಗೆ ಬಾರಿ ಬೇಜಾರ್ ಆತ್. ಛೇ !! ಎಸ್ಟ್ ಒಳ್ಳ ಹೈದ ಕುಡೆವ ಚಟಂದಾಗಿ ಭವಿಷ್ಯನೆ ಹಾಳ್ ಮಾಡಿಕಂಡಟ್. ಆಸ್ಪತ್ರೆಗೆ ಹೋಕುಂತ ಹೊರ್ಡಿಕೆ ಸುರು ಮಾಡಕನ ಅವನ ಬಾಲ್ಯ ನನ್ನ ಕಣ್ಣ್ ಮುಂದೆ ಬಾಕೆ ಸುರು ಆತ್…
ನಮ್ಮ ಊರು ಭಾಗಮಂಡಲ ಹಕ್ಕಲೇ ಇರ್ವ ಕೊರಂಗಾಲ . ನನ್ನ ಹೆಸ್ರ್ ವೀಣಾ. ನಂಗೆ ಇಬ್ಬೊರ್ ಮಕ್ಕ , ಸುರುನವ ಪ್ರಸನ್ನ ಎರಡನೇ ಕೂಸು ಪ್ರಣತಿ. ಈ ರಾಜು ನ ನಿಜವಾದ ಹೆಸ್ರ್ ರಾಜೇಶ. ಇವ ನನ್ನ ಸ್ವಂತ ಮಂಞ ಅಲ್ಲ. ಇವ ಮತ್ತೆ ಇವನ ಅಮ್ಮ ನಮ್ಮ ತ್ವಾಟಲಿ ಕೆಲ್ಸ ಮಾಡಿಕಂಡ್ ಇದ್ದವು. ನನ್ನ ಗಂಡ ತೀರಿ ಹೋಕನ ನನ್ನ ಮಂಞ ಕಾಲೇಜು ಮೆಟ್ಲ್ ಹತ್ತಿದ್ದರೆ , ಮಗ್ಳ್ ಹೈ ಸ್ಕೂಲ್ ಲಿ ಇತ್ತ್. ಹೃದಯಾಘಾತ ಆಗಿ ನಮ್ಮ ಬಟ್ಟ್ ಹೋಕನ ಇಡೀ ಲೋಕನೆ ನನ್ನ ವಿರುದ್ಧ ನಿತ್ತಂಗೆ ಗ್ಯಾನ ಆಕೆ ಸುರಾತ್. ಆದರೆ ನನ್ನ ಮಕ್ಕಳ ಭವಿಷ್ಯ ನಾ ಗ್ಯಾನ ಮಾಡಿ, ಧೈರ್ಯ ಲಿ ಜೀವನ ನಡ್ಸಿಕೆ ಸುರು ಮಾಡ್ದೆ…
ರಾಜೇಶ ಆಗ ಡಿಗ್ರಿ ಮುಗ್ಸಿ, ಕೆಲ್ಸ ಹುಡ್ಕಿಕೆ ಸುರು ಮಾಡಿತ್ತ್. ಬೇರೆ ಮಕ್ಕಳಂಗೆ ಅಲ್ಲ ರಾಜೇಶ , ಕಾಲೇಜ್ ಹೋಕನ ರಜೆ ಸಿಕ್ಕಿರೆ ತೋಟ ಕೆಲ್ಸಕ್ಕೆ ಬರ್ತಿತ್. ದಿನ ಕೊಟಗೆ ಕೆಲ್ಸ ಎಲ್ಲಾ ಇವನೇ ಮಾಡ್ತಿತ್. ಒಳ್ಳ ಹೈದ, ಮಾತ್ ಕಮ್ಮಿ ಆದರೂ ಕೆಲ್ಸ ಮಾಡಿಕೆ ಸುರು ಮಾಡ್ರೆ ಮುಗ್ಸಿ ಬರುವ ಛಲ ಇತ್ತ್. ನೋಡಿಕೆ ಅಜಾನುಬಾಹು, ಲಕ್ಷಣ ಇರ್ವ ಮುಖ, ಓದುಲಿ ಬಾರಿ ಚೂಟಿ ಹೈದ. ನನ್ನ ಮಗ್ಳ್ ಗೆ ಇಂಗ್ಲಿಷ್ ಹೇಳಿ ಕೊಡಿಕೆ ದಿನ ಮನೆಗೆ ಬರ್ತಿತ್, ಅವ ಬಂದರೆ ನಾನ್ ತೋಟ ಕ್ಕೇ ಹೋಗಿ ಬರ್ತಿದ್ದೆ. ಅಷ್ಟ್ ನಂಬಿಕೆ ಅವನ ಮೇಲೆ, ಆ ನಂಬಿಕೆಗೆ ಕಳಂಕ ಬರೊಂಗೆ ಅವ ಇದೂವರೆಗೆ ನಡ್ಕಂಡತ್ಲೆ. ನನ್ನ ಮಂಞಂಗೂ ಅಷ್ಟೇ ಅವ ತ ಹೇಳ್ರೆ ಪ್ರಾಣ, ಓದಿಕೆ ಅಲ್ಲ ; ಆಟ ಆಡಿಕೆ, ತೋಟ ಸುತ್ತಿಕೆ ಹಿಂಗೇ ನನ್ನ ಇನ್ನೊಂದ್ ಮಂಞ ಆಗಿ ಹೋಗಿತ್ ಅವ . ಅವನ ಅಮ್ಮನೂ ಹಂಗೇ , ಪಾಪ ಓದುಂತ ಹೇಳ್ದು ಗೊತ್ತಿಲ್ಲದೇ ಇದ್ದರೂ ಕೆಲಸ ಲಿ ಎತ್ತಿದ ಕೈ. ವಿನಾಕಾರಣ ಕೆಲ್ಸಕ್ಕೆ ಬರದೆ ಕುದ್ರುವ ಹೆಂಗ್ಸ್ ಅಲ್ಲ ಅವು. ರಾಜೇಶ ನಾ ಅಪ್ಪ ಇವ ಸಣ್ಣಿತಲಿ ಇರ್ಕನೇ ತೀರಿ ಹೋಗಿದ್ದೋ . ಈ ವಿಷ್ಯ ಬುಟ್ಟರೆ ಬೇರೆ ಏನೂ ಗೊತ್ತಿತ್ಲೆ ಅವರ ಬಗ್ಗೆ. ನಮ್ಮ ಲೈನ್ ಮನೇಲಿ ಇದ್ದ ಇವು , ನಮ್ಮ ಕೆಲಸದವು ಆಗದೆ ನಮ್ಮ ಎಲ್ಲಾ ಕಷ್ಟ ಸುಖಲಿ ಒಟ್ಟಿಗೆ ನಿಲ್ಲುವ ಕುಟುಂಬಕ್ಕಿಂತ ಹೆಚ್ಚಾಗಿದ್ದೋ…
ಹಿಂಗೇ ನಮ್ಮೊಟ್ಟಿಗೆ ಯಾಗೋಳೂ ಇರ್ತಿದ್ದ ರಾಜೇಶನಾ ಅಮ್ಮ ಸವಿತಾ ಇದಕ್ಕಿಂದಂಗೆ ತೋಟ ಕೆಲ್ಸಕ್ಕೆ ಹೋದವು, ಮತ್ತೆ ಬಾತೇಲೆ . ಮೆಡಿಕಲ್ ಟೆಸ್ಟ್ ಗಳ್ಲಿ ಹೃದಯಘಾತಂತ ಹೇಳ್ದೊ. ಊರ್ ಜನಗ ಗುಳಿಗನ ಪೆಟ್ಟ್ ಹಂಗೆ ಹಿಂಗೇ ತ ಮಾತಾಡಿಕೆ ಸುರುಮಾಡ್ದೊ. ಒಟ್ಟಾರೆಯಾಗಿ ಸವಿತಕ್ಕ ದೂರಾದ್ ಮಾತ್ರ ಸತ್ಯ !!
ಸುದ್ದ ಕಾರ್ಯಗ ಮುಗ್ಸಿ ಸ್ವಲ್ಪ ದಿನಲೇ ರಾಜೇಶಂಗೆ ಮಂಗ್ಳೂರುನ ಒಂದ್ ಹೋಟೆಲ್ ಲಿ ಕೆಲ್ಸ ಸಿಕ್ಕಿತ್ . ಅವನ ಸಿನೇಹಿತರ್ ಯಾರೋ ಹೇಳಿ ಕೆಲ್ಸ ಕೊಡ್ಸಿದ್ದೊ ಗಡ. ಅವನ ಕಳ್ಸಿಕೆ ಮೊನ್ಸಿಲ್ಲದಿದ್ದರೂ ಕಳ್ಸುವ ಅನಿವಾರ್ಯತೆ ಇತ್ತ್. ಅವನ ಎಲ್ಲಾ ಖರ್ಚ್ ವೆಚ್ಚನಾ ನಮಿಗೆ ನೋಡಿಕೆ ಆದುಲೆ ಅಲಾ…
ಕೆಲ್ಸಕ್ಕೆ ಹೋದ ಹಂಞ ದಿನಗಳ್ಲೇ ಫೋನ್ ಮಾಡ್ದು ಎಲ್ಲಾ ಕಮ್ಮಿ ಆತ್, ಕಾರಣ ಇಂದಿಗೂ ನಂಗೆ ಗೊತ್ಲೆ. ಅಲ್ಲಿನ ಅವನ ಸಿನೇಹಿತ ನಾ ಪರಿಚಯ ಆತ್, ರಾಜೇಶನೇ ಪರಿಚಯ ಮಾಡ್ಸಿದ್. ಅವನ ಸಿನೇಹಿತ ಆಗಾಗ ಪೋನ್ ಮಾಡಿ ರಾಜೇಶ ಕುಡಿಯಕ್ಕೆ ಸುರು ಮಾಡಿಟ್ಟು , ನಾವು ಎಸ್ಟ್ ಹೇಳಿರೂ ನಮ್ಮ ಮತೇ ಕೇಳ್ತಾ ಇಲ್ಲೇ ಅವ . ನಾವು ಮತ್ತೆ ಸುಮ್ಮನಾಗಿ ಬುಟ್ಟೋ…” ಅಮ್ಮ ಬೇಗ ಹೊರ್ಡ್, ಹೋಕು ಇಂದೇ” ಮಂಞ ಜೋರ್ ಲಿ ಹೇಳಿಕನ ವಾಸ್ತವಕ್ಕೆ ಬಂದೆ…
ನಿಜ ಒಳ್ಳ ಭವಿಷ್ಯ ಹುಡ್ಕುವ, ಕುಟುಂಬದ ಜವಾಬ್ದಾರಿ ಹೊಂದಿರ್ವ ಅದೆಷ್ಟೋ ಕುಟುಂಬದ ಯಜಮಾನ್ರ್ ಗ ಅವರ ಜವಾಬ್ದಾರಿ ಮರ್ತದೇ ಈ ಹಾಳ್ ಕಳ್ಳ್ಂದ. ಇದರ ಬಗ್ಗೆ ಅದೆಷ್ಟ್ ಜಾಗೃತಿ ಬಂದರೂ ಅದರ ವಿರುದ್ಧ ಮಾತಾಡೋ ಜನಗ ಇಂದ್ ಕಮ್ಮಿ ಬಹುಷಃ ಕಳ್ಳ್ ನಾ ಪ್ರಭಾವನೆ ಇರೋಕು….
✍️ ಪ್ರತೀಕ್ ಪರಿವಾರ, ಮರಗೋಡು