fbpx

ದಸರಾ ನಾಡಹಬ್ಬಕ್ಕೆ ವಿಶೇಷ ಟೂರ್ ಪ್ಯಾಕೇಜ್!

ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಮೈಸೂರು ಮತ್ತು ಸುತ್ತಮುತ್ತಲಿನ ಪ್ರವಾಸಿ ತಾಣಗಳ ಭೇಟಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆ.ಎಸ್.ಆರ್.ಟಿ.ಸಿ) ವತಿಯಿಂದ ವಿಶೇಷ ಪ್ರವಾಸ ಪ್ಯಾಕೇಜ್ ಪರಿಚಯಿಸಿದೆ.

ವೇಗದೂತ, ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಕ್ಲಬ್ ಕ್ಲಾಸ್ ಸಾರಿಗೆ ಸೇವೆಗಳ ಜೊತೆಗೆ ಅ.1ರಿಂದ 10ರವರೆಗೆ ವಿಶೇಷ ಬಸ್ ಗಳು ಹಾಗು ಒಂದು ದಿನದ ಟೂರ್ ಪ್ಯಾಕೇಜ್ ವಾಹನಗಳು ಸಂಚರಿಸಲಿವೆ.

ಗಿರಿದರ್ಶಿನಿ: ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಚಾಮುಂಡಿ ಬೆಟ್ಟಕ್ಕೆ ಗಿರಿದರ್ಶಿನಿ ಎಂದು ಹೆಸರಿದ್ದು, ವಯಸ್ಕರಿಗೆ 400 ಹಾಗು ಮಕ್ಕಳಿಗೆ 250 ರೂ. ದರವನ್ನು ನಿಗದಿ ಪಡಿಸಲಾಗಿದೆ.

ಜಲದರ್ಶಿನಿ: ಗೋಲ್ಡನ್ ಟೆಂಪಲ್(ಬೈಲುಕುಪ್ಪೆ), ದುಬಾರೆ ಅರಣ್ಯ ಧಾಮ, ರಾಜಾಸೀಟ್, ಹಾರಂಗಿ ಜಲಾಶಯ ಕೆ.ಆರ್.ಎಸ್ ಗೆ ಪ್ಯಾಕೇಜ್ ಇರಲಿದ್ದು, ವಯಸ್ಕರಿಗೆ 450 ರೂ. ಹಾಗು ಮಕ್ಕಳಿಗೆ 250 ರೂ ದರವನ್ನು ನಿಗದಿ ಪಡಿಸಲಾಗಿದೆ.

ದೇವದರ್ಶಿನಿ: ನಂಜನಗೂಡು, ಬ್ಲಫ್, ಮುಡುಕು ತೊರೆ, ತಲಕಾಡು, ಸೋಮನಾಥಪುರ, ಶ್ರೀರಂಗಪಟ್ಟಣಕ್ಕೆ ವಯಸ್ಕರಿಗೆ 300 ರೂ. ಹಾಗು ಮಕ್ಕಳಿಗೆ 175 ರೂ. ಪ್ರಯಾಣ ದರ ಇರಲಿದೆ.

ನಗರ ವೋಲೋ ಬಸ್ ಗಳ ಮೂಲಕ ಮೈಸೂರು ದರ್ಶಿನಿ ಸಂಚರಿಸಲಿದ್ದು, ನಂಜನಗೂಡು, ಚಾಮುಂಡಿಬೆಟ್ಟ, ಮೃಗಾಲಯ, ಅರಮನೆ, ಶ್ರೀರಂಗಪಟ್ಟಣ, ಕೆ.ಆರ್.ಎಸ್ ಗೆ ಸಂಚರಿಸಲಿದೆ.

ಇ-ಟಿಕೇಟ್ ಬುಕಿಂಗನ್ನು www.ksrtc.karnataka.gov.in ವೆಬ್ ಸೈಟ್ ಮೊಬೈಲ್ ಮೂಲಕ ಅಥವಾ ಬುಕ್ಕಿಂಗ್ ಕೌಂಟರ್ ಗಳ ಮೂಲಕ ಆಸನಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದಾಗಿದೆ.

error: Content is protected !!