fbpx

ಧಿಡೀರನೆ ತಯಾರು ಮಾಡಬಹದು ಈ ಸಿಹಿ ತಿನಿಸು!

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಏನಾದರೂ ಸಿಹಿ ತಿನ್ನಬೇಕು ಅನಿಸಿದಾಗ ಮಾಡಿ ನೋಡಿ ಈ ಮಿಲ್ಕ್ ಪೌಡರ್ ಬರ್ಫಿ. ಇದು ಥಟ್ಟಂತ ಮಾಡಿ ಬಿಡಬಹುದು ಹಾಗೆಯೇ ತಿನ್ನುವುದಕ್ಕೂ ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು:

ಹಾಲಿನ ಪುಡಿ – 2 ಕಪ್, ಸಕ್ಕರೆ – ½ ಕಪ್, ಹಾಲು ½ ಕಪ್, ಬಾದಾಮಿ – ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು ಸ್ವಲ್ಪ, ತುಪ್ಪ – 1/4 ಕಪ್.

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ತುಪ್ಪ ಹಾಕಿ ಇದು ಕರಗಿದ ಮೇಲೆ ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಸ್ವಲ್ಪ ಬಿಸಿಯಾಗುತ್ತಿದ್ದಂತೆ ಇದಕ್ಕೆ ಹಾಲಿನ ಪುಡಿಯನ್ನು ಸ್ವಲ್ಪ ಸ್ವಲ್ಪವೇ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.

ಸಣ್ಣ ಉರಿಯಲ್ಲಿ ಈ ಮಿಶ್ರಣವನ್ನು ಚೆನ್ನಾಗಿ ಕೈಯಾಡಿಸುತ್ತಲೆ ಇರಿ. ಇದು ತುಸು ಗಟ್ಟಿಯಾಗುತ್ತಿದ್ದಂತೆ ಇದಕ್ಕೆ ಸಕ್ಕರೆ ಪುಡಿಯನ್ನು ಸೇರಿಸಿ ಮತ್ತೆ ಮಿಕ್ಸ್ ಮಾಡುತ್ತಾ ಇರಿ. ಈ ಮಿಶ್ರಣ ತಳ ಬಿಟ್ಟುಕೊಂಡು ಮುದ್ದೆ ರೀತಿ ಆಗುತ್ತದೆ.

ಆಗ ಇದನ್ನು ಒಂದು ತುಪ್ಪ ಸವರಿದ ತಟ್ಟೆಗೆ ತೆಗೆದುಕೊಂಡು ಚೆನ್ನಾಗಿ ಸಮತಟ್ಟು ಮಾಡಿಕೊಳ್ಳಿ. ನಂತರ ಇದರ ಮೇಲೆ ಬಾದಾಮಿ ಚೂರುಗಳನ್ನು ಉದುರಿಸಿ. 1 ಗಂಟೆ ಬಿಟ್ಟು ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು ಸವಿಯಿರಿ.

error: Content is protected !!
satta king chart