ಕಾಡು ಕುರಿಗಳ ರಕ್ಷಣೆ

Sudhisanthe Exclusive Breaking

ಕರಿಕೆ: ಗ್ರಾಮದ ಬೊರುಕ ಅಣೆಕಟ್ಟಿನ ಚಾನಲ್ ನೀರಿನಲ್ಲಿ ಹರಿದು ಹೋಗುತ್ತಿದ್ದ ಎರಡು ಕಾಡು ಕುರಿಗಳನ್ನು ರಕ್ಷಿಸಲು ಸ್ಥಳೀಯರು ಯಶಸ್ವಿಯಾಗಿದ್ದಾರೆ.

ಪಶ್ಚಿಮ ಘಟ್ಟಗಳ ಅಂಚಿನ ಪ್ರದೇಶದ ಭಾಗಮಂಡಲ ಭಾಗದ ಅರಣ್ಯ ಪ್ರದೇಶದಿಂದ ಇವುಗಳು ಬಂದಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಅಣೆಕಟ್ಟನ್ನು ದಾಟುವ ಪ್ರಯತ್ನ ಮಾಡಿದಾಗ ಇವು ನೀರಿನಲ್ಲಿ ಸಿಲುಕಿರುವ ಸಾಧ್ಯತೆ ಇದೆ. ಇವು ತಾಯಿ ಹಾಗು ಕಾಡು ಕುರಿಗಳಾಗಿದ್ದು, ಸ್ಥಳೀಯರ ಸಮಯೋಚಿತ ರಕ್ಷಣಾ ಕಾರ್ಯದಿಂದ ಇವುಗಳನ್ನು ರಕ್ಷಿಸಲು ಸಾಧ್ಯವಾಗಿದೆ‌ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಕೊಡಗಿನಲ್ಲಿ ವನ್ಯ ಜೀವಿಗಳ ಬೇಟೆಗಳ ಅಪರಾಧದ ಪರಿಸರ ವಿರೋಧಿ ಪ್ರಕರಣಗಳೇ ಕೇಳಿ ಬರುತ್ತಿರುವ ಸಂದರ್ಭದಲ್ಲಿ ಈ ಸುದ್ದಿ ಪ್ರಾಣಿ ಪ್ರಿಯರಿಗೆ ಸಂತಸ ಉಂಟು ಮಾಡುವಂತಿದೆ. ಇದೇ ರೀತಿ ಪ್ರಜ್ಞಾವಂತಿಕೆಯಿಂದ ಜನ ವನ್ಯ ಜೀವಿ ಸಂಪತ್ತನ್ನು ಕೊಡಗಿನಲ್ಲಿ ಸಂರಕ್ಷಿಸುವಂತಾದಾಗ ಮಾತ್ರ ಇಲ್ಲಿನ ಪ್ರಾಕೃತಿಕ ರಮಣೀಯತೆ ಹಾಗೆ ಉಳಿಯಲು ಸಾಧ್ಯ.

error: Content is protected !!
satta king chart