ಪೊಲೀಸರಿಂದ ಮಡಿಕೇರಿಯಲ್ಲಿ ಮಹತ್ವದ ಕಾಯಾ೯ಚರಣೆ – ಮಾದಕ ಪದಾಥ೯ಗಳ ವಶ

ರಾಜ್ಯದಲ್ಲಿ ಮಾದಕ ದ್ರವ್ಯಗಳ ವಿರುದ್ದ ಸಮರ ಸಾರಿರುವ ಪೊಲೀಸರು ಇದೀಗ ಮಡಿಕೇರಿಯಲ್ಲಿ ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಕೊಡಗು ಜಿಲ್ಲೆಯ ವಿವಿಧ ಭಾಗಗಳಿಗೆ ಅತ್ಯಾಧುನಿಕ ಮಾದಕ ವಸ್ತುಗಳನ್ನು ಸರಬರಾಜು ಮಾಡಲು ಹೊಂಚು ಹಾಕುತ್ತಿದ್ದ ತಂಡದ ಸದಸ್ಯರ ಬಂಧನ

ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ವಾಹನಗಳ ತಪಾಸಣೆ ಕೈಗೊಂಡಾಗ ಎರಡು ವಾಹನಗಳಲ್ಲಿ ಡ್ರಗ್ ನೊಂದಿಗೆ ಆರೋಪಿಗಳು ತೆರಳುತ್ತಿದ್ದದ್ದು ಪತ್ತೆಯಾಗಿದೆ.

ಪೊಲೀಸ್ ತಪಾಸಣೆ ವೇಳೆ ಪರಾರಿಯಾಗಲು ಯತ್ನಿಸಿದ ಆರೋಪಿಗಳನ್ನು ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ.

ಅಯ್ಯಂಗೇರಿ ಗ್ರಾಮದ ಸೂಫಿ ಅವರ ಮಗ 35 ವಷ೯ದ ಮಜೀದ್,

ಅಯ್ಯಂಗೇರಿಯ 32 ವಷ೯ದ ಶಿಯಾಬುದ್ದೀನ್

ಬೆಂಗಳೂರಿನ ಶಿವಾಜಿ ನಗರದ 31 ವಷ೯ದ ಮುಜಾಮಿಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ 300 ಗ್ರಾಮ್ ಗಳಷ್ಟು ಎಂ.ಡಿ.ಎಂ.ಎ.ಮಾದಕ ವಸ್ತು ಹಾಗೂ ಟಾಟಾ ಇಂಡಿಕಾ ಕಾರ್ ವಶಪಡಿಸಿಕೊಳ್ಳಲಾಗಿದೆ.

ಮೂವರು ಆರೋಪಿಗಳೊಂದಿಗೆ ಮತ್ತೊಂದು ಕಾರ್ ನಲ್ಲಿ ಬಂದಿದ್ದ ಇತರ 5 ಮಂದಿ ಆರೋಪಿಗಳ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಕ್ಷಮಾಮಿಶ್ರಾ ತಿಳಿಸಿದ್ದಾರೆ.

ಕಾಯಾ೯ಚರಣೆಯಲ್ಲಿ ಮಡಿಕೇರಿ ಉಪವಿಭಾಗದ ಡಿವೈಎಸ್ರಿ ದಿನೇಶ್ ಕುಮಾರ್, ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಚಂದ್ರಶೇಖರ್, ಜಿಲ್ಲಾ ಪೊಲೀಸ್ ಆಪರಾಧ ಪತ್ತೆ ದಳದ ಎ.ಎಸ್.ಐ ಹಮೀದ್, ವೆಂಕಟೇಶ್, ಯೋಗೇಶ್ ಕುಮಾರ್, ನಿರಂಜನ್, ವಸಂತ, ಅನಿಲ್ ಕುಮಾರ್, ಶರತ್, ಚಾಲಕ ಶಶಿಕುಮಾರ್, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯ ದಿನೇಶ್, ಮಡಿಕೇರಿ ನಗರ ಪೊಲೀಸ್ ಠಾಣೆಯ ಪ್ರವೀಣ್, ಸಿಡಿಆರ್ ಸೆಲ್ ನ ರಾಜೇಶ್ ಪಾಲ್ಗೊಂಡಿದ್ದರು.

ಕಾಯಾ೯ಚರಣೆಯಲ್ಲಿ ಪಾಲ್ಗೊಂಡ ಪೊಲೀಸರ ಕಾಯ೯ಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಪೊಲೀಸ್ ವರಿಷ್ಡಾಧಿಕಾರಿ ಕ್ಷಮಾ ಮಿಶ್ರಾ,ತಂಡದ ಸದಸ್ಯರಿಗೆ ನಗದು ಬಹುಮಾನ ಘೋಷಿಸಿದ್ದಾರೆ.

error: Content is protected !!