ಕೋವಿಡ್ ನಿಯಂತ್ರಣದಲ್ಲಿ ಜಿಲ್ಲಾಡಳಿತ ಸೋಲುತ್ತಿದೆಯೇ…

ಇಡೀ ಜಿಲ್ಲೆಯ ಜನ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕೋವಿಡ್ ನಿಂದಾಗಿ ಹೈರಾಣಾಗಿ ಭವಿಷ್ಯತ್ತಿನ ಬಗ್ಗೆ ಯಾವ ಭರವಸೆಗಳೂ ಇಲ್ಲದೆ ಚಿಂತಾಕ್ರಾಂತರಾಗಿದ್ದಾರೆ.

ಲಾಕ್ ಡೌನ್ ಆಗಿ ತಿಂಗಳುಗಳೇ ಕಳೆಯುತ್ತಿದ್ದರೂ ಕೊರೋನಾದ ಕಾಟ ಇನ್ನೂ ಮುಗಿದಿಲ್ಲ. ಈ ನಡುವೆ ಡೆಲ್ಟಾ ಪ್ಲಸ್ ಎಂಬ ರೂಪಾಂತರಿ ವೈರಸ್ ಬರುವ ಸಾಧ್ಯತೆಗಳು ಇವೆ ಎಂಬ ತತ್ಞರ ಎಚ್ಚರಿಕೆ ಭಯಕ್ಕೆ ಕಾರಣವಾಗಿದೆ. ಪರಿಸ್ಥಿತಿ ಹೀಗೆ ಅಯೋ ಮಯವಾಗಿರುವಾಗ, ಕೊಡಗಿಗೆ ಪ್ರವಾಸಿಗರು ಗುಟ್ಟಾಗಿ ಬಂದು ಹೋಗುತ್ತಿರುವುದು ಕಳವಳ ಉಂಟು ಮಾಡಿದೆ.

ಜಿಲ್ಲೆಯ ಜನ ಹಣ ಸಂಪಾದನೆ ಇಲ್ಲದೆ ಖಾಲಿ ಕುಳಿತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ಮೈಸೂರಿನಿಂದ ಪ್ರವಾಸಿಗರು ಕೊಡಗಿನ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿ ಪ್ರವಾಸಕ್ಕೆಂದು ಬರುತ್ತಿರುವುದು ಕಂಡು ಬಂದಿದೆ.

ಇದು ಜಿಲ್ಲಾಡಳಿತದ ವೈಫಲ್ಯವಲ್ಲವಾ? ಇದೇ ಕೋವಿಡ್ ಪ್ರಕರಣದ ಏರಿಕೆಗೆ ಕಾರಣವಾಗಿರಬಹುದು ಅಲ್ಲವೇ? 23 ಜೂನ್ ತಾರೀಕಿನಂದು 3.91% ಇದ್ದ ಕೋವಿಡ್ ಪಾಸಿಟಿವಿಟಿ ರೇಟ್ 25 ಜೂನ್ ದಿನದಂದು 8.05% ಗೆ ಏರಿಕೆ ಕಂಡಿತು. ನಿನ್ನೆ ದಿನ ಪಾಸಿಟಿವಿ ರೇಟ್ 5.78% ಇದೆ.

ಜನ ಸಂಚಾರವೇ ಅತಿ ವಿರಳವಾಗಿ ಜನ ಕಷ್ಟನೋ ಸಂಕಟನೋ ಮನೆಯಲ್ಲೇ ಬಂಧಿಯಾಗಿರುವ ಈ ಸಂದರ್ಭದಲ್ಲೂ ಹೀಗೆ ಏರಿಕೆಯಾಗಿರುವುದು ಹೇಗೆ? ಅಕ್ರಮವಾಗಿ ಲಾಕ್ ಡೌನ್ ಸಡಿಲಿಕೆ ಆಗದಿದ್ದರೂ ಕೆಲ ಪ್ರವಾಸಿಗರು ರಾಜಾರೋಷವಾಗಿ ಜಿಲ್ಲೆ ಪ್ರವೇಶಿಸುತ್ತಿರುವುದು ಹೇಗೆ? ಇದಕ್ಕೆ ಜಿಲ್ಲಾಡಳಿತವೇ ಅಲ್ವಾ ಜವಾಬ್ದಾರರು? ಜನ ಹೀಗೆಲ್ಲಾ ಪ್ರಶ್ನಿಸುತ್ತಿದ್ದಾರೆ.

ಲಾಕ್ ಡೌನ್ ಜಾರಿಯಲ್ಲಿದ್ದೂ ಯಾವುದೇ ಸಡಿಲಿಕೆ ಮಾಡದ ಜಿಲ್ಲಾಡಳಿತ ಇನ್ನಾದರೂ ಪ್ರವಾಸಿಗರು ಜಿಲ್ಲೆ ಪ್ರವೇಶಿಸದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕೋವಿಡ್ ಮತ್ತೆ ಏರಿಕೆಯಾಗಿ ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ಜನ ಲಾಕ್ ಡೌನ್ ಸಂಕಷ್ಟ ಅನುಭವಿಸುವ ಪಜೀತಿ ಎದುರಾದೀತು. ಅದಕ್ಕೂ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುವಂತಾಗಲಿ…!

error: Content is protected !!
satta king chart