ಜಿಲ್ಲೆಯಲ್ಲಿ ಕಿರಾತಕರ ವಿಕೃತತೆ ಅಟ್ಟಹಾಸ ಮೆರೆಯುತ್ತಿದೆಯೇ…!?

ಕೊಡಗಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ಕಂಡಾಗ ತೀವ್ರ ಆತಂಕವಾಗುತ್ತದೆ. ರಾಮರಾಜ್ಯದಂತಿದ್ದ ಕೊಡಗಿನಲ್ಲಿ ಕಿರಾತಕರ ಆಟಾಟೋಪ ಎಲ್ಲೆ ಮೀರುತ್ತಿದೆ.

ಎಳೆ ಹಸುಗಳನ್ನು, ದನಗಳನ್ನು ಜನ ರಸ್ತೆಗೆ ಬಿಟ್ಟು ಬಿಡುತ್ತಿದ್ದಾರೆ. ಪರಿಣಾಮವಾಗಿ ಅವು ಇರಲು ಸರಿಯಾದ ಸೂರಿಲ್ಲದೆ ಸಿಕ್ಕ ಮೇವು ತಿನ್ನುತ್ತಾ ಬೀದಿ ಬೀದಿ ಅಲೆಯುತ್ತಿವೆ.

ಅಕ್ರಮವಾಗಿ ಗೋ ಹತ್ಯೆ ಹಾಗು ಸಾಗಾಣಿ ಪ್ರಕರಣಗಳು ಕೂಡ ಅತಿ ಹೆಚ್ಚಾಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಅದು ಎಷ್ಟರ ಮಟ್ಟಿಗೆಂದರೆ ಗಬ್ಬದ ಹಸುವಿನ ಕರುಳು ಸೀಳುವ ತನಕ ಅವರ ವಿಕೃತತೆ‌ ಅತಿರೇಖವನ್ನು ತಲುಪಿದೆ!

ಇತ್ತೀಚೆಗಷ್ಟೇ ಕೊಡಗಿನ ಸೈನಿಕ ಹಾಗು ಅವನ ಕುಟುಂಬದ ಮೇಲೆ ಗಂಡು ಹೆಣ್ಣು, ಮಕ್ಕಳು ಎಂಬ ಬೇಧವಿಲ್ಲದಂತೆ ಅವರ ಮೇಲೆ ಮಾರಣಾಂತಿಕವಾಗಿ ಮತಾಂಧರು ಹಲ್ಲೆ ನಡೆಸಿ, ಹೆಂಗಸಿನ ಮಂಗಳ ಸೂತ್ರವನ್ನೂ ಸೇರಿ ಅವರ ಚಿನ್ನಾಭರಣಗಳನ್ನು ದೋಚಿದರು.

ಗೋ ಕಳ್ಳ ಸಾಗಾಣಿಕೆ, ಡ್ರಗ್ಸ್ ಮಾಫಿಯಾ, ಟಿಂಬರ್ ಸ್ಮಗ್ಲಿಂಗ್, ಬೇಟೆ ಪ್ರಕರಣಗಳು ಕೂಡ ಹೆಚ್ಚು ಹೆಚ್ಚು ಜಿಲ್ಲೆಯಲ್ಲಿ ನಡೆಯುತ್ತಿರುವುದು ಕಂಡು ಬರುತ್ತಿದೆ.

ಅಪರಾಧ ಪ್ರಕರಣಗಳು ಈ ಮಟ್ಟಿಗೆ ಹೆಚ್ಚಾಗುತ್ತಿದೆ ಎಂದರೆ ಇದಕ್ಕೆ ನೇರ ಜಿಲ್ಲಾಡಳಿತದ ಆಡಳಿತ ವೈಫಲ್ಯ ಕಾರಣವಿರಬಹುದಾ? ಎಂಬ ಮಾತುಗಳು ಜನ ವಲಯದಲ್ಲಿ ಹರಿದಾಡುತ್ತಿದೆ.

ಇನ್ನು ಮುಂದಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಪರಾಧಗಳಲ್ಲಿ ಸಿಕ್ಕ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಮಾಡಿ, ಪಾಠ ಕಲಿಸಿ ಆ ಮೂಲಕ ಕಾನೂನು ಬಾಹೀರ ಚಟುವಟಿಕೆಗಳನ್ನು ಮಾಡುವವರಿಗೆ ಸ್ಪಷ್ಟ ಸಂದೇಶ ನೀಡಬೇಕಿದೆ.

ಆ ಮೂಲಕ ಜಿಲ್ಲೆಯಲ್ಲಿ ಮತ್ತೆ ಹಿಂದಿನಂತೆ ಶಾಂತಿ ನೆಲೆಸುವಂತೆ ಆಗಬೇಕು. ಕಾನೂನು ಬಾಹೀರ ಚಟುವಟಿಕೆಗಳಿಗೆ ಅಂಕುಶ ಹಾಕಲು ಜಿಲ್ಲಾಡಳಿತ ಹಾಗು ಜಿಲ್ಲಾ ಪೊಲೀಸ್ ಮುನ್ನಡೆಯಬೇಕು.

ಕೊಡಗಿನ ಜನ ರೊಚ್ಚಿಗೆದ್ದು, ಕಾನೂನನ್ನು ಕೈಗೆತ್ತಿಕೊಂಡು ತಾವೇ ಸಮಸ್ಯೆಗಳ ಶಮನಕ್ಕಿಳಿಯುವ ಮುನ್ನ ಆಡಳಿತ ಯಂತ್ರ ಎಚ್ಚೆತ್ತರೆ ಉತ್ತಮ. ಸುರಕ್ಷತೆ, ಸುಭದ್ರತೆಯನ್ನು ಕಾಪಾಡಲು ಜಿಲ್ಲಾಡಳಿತ ಹಾಗು ಜಿಲ್ಲಾ ವ್ಯವಸ್ಥೆ ಮತ್ತಷ್ಟು ಶ್ರಮ ವಹಿಸಿ ಕೆಲಸ ಮಾಡಬೇಕಿದೆ. ಇಲ್ಲವಾದರೆ ಕೊಡಗು ಇನ್ನಷ್ಟು ಹಾಳಾಗುವುದರಲ್ಲಿ ಅನುಮಾನವೇ ಇಲ್ಲ…!

error: Content is protected !!
satta king chart