ಕೋಕೋನಟ್ ಕೂಲರ್
ಬೇಕಾಗುವ ಸಾಮಾಗ್ರಿಗಳು:
500 ml ಎಳನೀರು
50 gm ಎಳನೀರು ಕೊಬ್ಬರಿ
1 ಲಿಂಬೆ ಹಣ್ಣು
8 ಪುದಿನ ಎಲೆ
1 ಹಸಿ ಮೆಣಸಿನ ಕಾಯಿ
10 gm ಶುಂಠಿ
1/2 ಚಮಚ ಬ್ಲಾಕ್ ಸಾಲ್ಟ್
2 tbsp ಖಸ್ ಸಿರಪ್
ಐಸ್ ಕ್ಯೂಬ್ಸ್
ವಿಧಾನ:
ಮೊದಲಿಗೆ ಎಳನೀರು ಕೊಬ್ಬರಿಯನ್ನು ಸಣ್ಣಗೆ ಹೆಚ್ಚಿ ಸರ್ವಿಂಗ್ ಗ್ಲಾಸ್ ಗೆ ಹಾಕಿ ಫ್ರಿಡ್ಜ್ ನಲ್ಲಿ 15 ನಿಮಿಷ ಇಡೀ.
ಲಿಂಬೆ ಹಣ್ಣನ್ನು ವೆಡ್ಜ್ಸ್ ಆಗಿ ಹೆಚ್ಚಿಕೊಳ್ಳಿ. ಖಾರ ಇಲ್ಲದ ಹಸಿಮೆಣಸಿನಕಾಯಿ ಒಂದು ಚಿಕ್ಕದು, ತೆಗೆದುಕೊಂಡು ಸೀಳಿಟ್ಟು ಕೊಳ್ಳಿ. ಇವೆರಡನ್ನು ಒಂದು ಉದ್ದನೆಯ ಗ್ಲಾಸ್ನಲ್ಲಿ ಹಾಕಿ ಅದಕ್ಕೆ, ಪುದಿನ ಎಲೆಗಳು ಶುಂಠಿ, ಬ್ಲಾಕ್ ಸಾಲ್ಟ್ ಹಾಕಿ ಮಡಲ್ ಮಾಡಿ. ಅಂದರೆ ಲೈಟ್ ಆಗಿ ಕಟ್ಟಿಗೆಯ ಮಡ್ಲರ್ ಇಲ್ಲವೆಂದರೆ ವುಡನ್ ಸ್ಪೂನ್ನ ಹಿಂದಿನ ಭಾಗದಿಂದ ಸ್ವಲ್ಪವೇ ಕಿವುಚಿರಿ.ಆಗ ಈ ಎಲ್ಲ ಪದಾರ್ಥಗಳ ಫ್ಲೇವರ್ ಬಿಟ್ಟು ಕೊಳ್ಳುವುದು.
ಇದಕ್ಕೆ ಖಸ್ ಸಿರಪ್, ಎಳನೀರು ಐಸ್ ಕ್ಯೂಬ್ಸ್ ಸೇರಿಸಿ ಚೆನ್ನಾಗಿ ಕಲಕಿರಿ. ಬೇರೊಂದು ಗ್ಲಾಸ್ಗೆ ಸೋಸಿಕೊಳ್ಳಿ. ಫ್ರಿಡ್ಜ್ನಿಂದ ತಯಾರಿಸಿಕೊಂಡ ಸರ್ವಿಂಗ್ ಗ್ಲಾಸ್ ತೆಗೆದು ಅದಕ್ಕೆ ರೆಡಿ ಆದ ಜ್ಯೂಸ್ ನ್ನು ಹಾಕಿ ತಕ್ಷಣವೇ ಸರ್ವ್ ಮಾಡಿ. ಬೇಸಿಗೆಗೆ ಸೂಕ್ತ ತಂಪು ಪಾನೀಯ ಮತ್ತು ಆರೋಗ್ಯಕರ ಕೂಡ.
ಧನ್ಯವಾದಗಳು