ಕಸಾಪ ದಿಂದ ಶಿವಮೊಗ್ಗ ಸುಬ್ಬಣ್ಣ ಅವರಿಗೆ ಸಂತಾಪಸುಬ್ಬಣ್ಣ ನಿಧನ : ಬಡವಾದ ಸಾಹಿತ್ಯ ಕ್ಷೇತ್ರ
ಕುಶಾಲನಗರ : ಗುರುವಾರ ರಾತ್ರಿ ನಿಧನರಾದ ಸಂಗೀತ ಕ್ಷೇತ್ರದ ದಿಗ್ಗಜರು ಹಾಗು ಖ್ಯಾತ ಗಾಯಕರು ಆದ ಶಿವಮೊಗ್ಗ ಸುಬ್ಬಣ್ಣ ಅವರ ನಿಧನಾರ್ಥ ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರದ್ದಾಂಜಲಿ ಅರ್ಪಿಸಲಾಯಿತು.
ಈ ಸಂದರ್ಭ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಹೆಚ್.ಎನ್.ಮಂಜುನಾಥ್ ಹಾಗು ಜಿಲ್ಲಾ ಕಸಾಪ ನಿರ್ದೇಶಕ ಮೆ.ನಾ.ವೆಂಕಟನಾಯಕ್ ಸುಬ್ಬಣ್ಣ ಅವರ ಕುರಿತಾಗಿ ನುಡಿ ನಮನ ಸಲ್ಲಿಸಿದರು.
ಶಿವಮೊಗ್ಗ ಸುಬ್ಬಣ್ಣ ಅವರ ನಿಧನದಿಂದ ಸಂಗೀತ ಕ್ಷೇತ್ರ ಮಾತ್ರವಲ್ಲ ಸಾಹಿತ್ಯ ಕ್ಷೇತ್ರ ಬಡವಾಗಿದೆ.
ಖ್ಯಾತ ವಕೀಲರೂ ಆಗಿದ್ದ ಸುಬ್ಬಣ್ಣ ಹಾಡುಗಾರಿಕೆಯಿಂದಾಗಿ ನಾಡಿನಲ್ಲಿ ಮನೆ ಮನೆ ಮಾತಾಗಿದ್ದರು ಎಂದು ಬಣ್ಣಿಸಿದರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಮೂರ್ತಿ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ, ತಾಲ್ಲೂಕು ಕಸಾಪ ಕೋಶಾಧಿಕಾರಿ ಕೆ.ವಿ.ಉಮೇಶ್, ಗೌರವ ಕಾರ್ಯದರ್ಶಿ ಎಸ್.ನಾಗರಾಜು, ನಿರ್ದೇಶಕ ಟಿ.ಬಿ.ಮಂಜುನಾಥ್, ಹೆಬ್ಬಾಲೆ ಹೋಬಳಿ ಕಸಾಪ ಗೌರವ ಕಾರ್ಯದರ್ಶಿ ಹೆಚ್.ಎನ್.ಸುಬ್ರಮಣ್ಯ ಇದ್ದರು.