fbpx

” ಕತೆ ಡಬ್ಬಿ ” ಕಥಾ ಸಂಕಲನದ ಕುರಿತು ವಿಮರ್ಶೆ

ರಂಜನಿ ರಾಘವನ್ ಅವರ “ಕತೆ ಡಬ್ಬಿ” ಪುಸ್ತಕವನ್ನು ಈಗ ತಾನೇ ಓದಿ ಮುಗಿಸಿ ಅಭಿಪ್ರಾಯವನ್ನು ಬರೆಯುತ್ತಿದ್ದೇ‌ನೆ.ಯಾವುದೇ ಪುಸ್ತಕವಾದರೂ ಸರಿ ಓದಿಮುಗಿಸಿದ ತಕ್ಷಣ ಅದರ ಕುರಿತು ಅಭಿಪ್ರಾಯ ಹಂಚಿಕೊಳ್ಳುವ ರೂಢಿ ಓದಲು ಶುರುಮಾಡಿದಾಗಿನಿಂದ ಬೆಳೆಸಿಕೊಂಡಿದ್ದೇನೆ.

ಒಬ್ಬ ನಟಿಸುವವರಲ್ಲಿಯೂ ಬರಹಗಾರರಿರುತ್ತಾರೆಂಬುದಕ್ಕೆ ಸಾಕ್ಷಿಯೆಂಬಂತೆ ರಂಜನಿಯವರು ಈ ಪುಸ್ರಕವನ್ನು ಹೊರತಂದಿದ್ದಾರೆ.ಎರಡನೇ ಲಾಕ್ಡೌನ್ ಸಮಯದಲ್ಲಿ ‘ಅವಧಿ’ ವೆಬ್ ಪತ್ರಿಕೆಯಲ್ಲಿ ಬರೆಯಲು ಶುರುಮಾಡಿ ಅಲ್ಲಿನ ಕತೆಗಳನ್ನೇ ಪುಸ್ತಕವಾಗಿಸಿ ಎಲ್ಲರಿಗೂ ಅವರ ಕತೆಗಳು ದೊರಕುವಂತೆ ಮಾಡಿದ್ದಾರೆ.ಹದಿನಾಲ್ಕು ಕತೆಗಳನ್ನು ಒಳಗೊಂಡ ಈ ಪುಸ್ತಕ ಅವರ ಸಾಹಿತ್ಯ ಜ್ಞಾನಕ್ಕೆ ಹಿಡಿದ ಕನ್ನಡಿಯಂತಿದೆ.

ನನನ್ನು ಅತಿ ಹೆಚ್ಚು ಅಟ್ರಾಕ್ಟ್ ಮಾಡಿದ ಎರಡು ಕತೆಗಳೆಂದರೆ ,
ಒಂದು: ಚುಚ್ಚುಮದ್ದಿನ ಸೈಡ್ ಎಫೆಕ್ಟ್.
ಎರಡು: ಕಾಣೆಯಾದವರ ಬಗ್ಗೆ ಪ್ರಕಟಣೆ.
ಚುಚ್ಚುಮದ್ದಿನ ಸೈಡ್ ಎಫೆಕ್ಟ್ನಲ್ಲಿ ನರಹರಿಯವರು ಮನೆಯ ಅಂದಕ್ಕೋಸ್ಕರ ಆಲದ ಮರವನ್ನು ಟಾರ್ಡನ್ ಕೆಮಿಕಲ್ ಅನ್ನು ಪ್ರತಿದಿನ ಇಂಜಕ್ಟ್ ಮಾಡುವ ಮೂಲಕ ಸಾಯೋ ಹಾಗೆ ಮಾಡಿದ್ದು, ಬೆನ್ನುಹುರಿ ಬಂದು ಬಹುದಿನಗಳವರೆಗೆ ಬೆಡ್ ರಿಡನ್ ಆದಾಗ ಕಿಟಕಿಯಿಂದ ಕಾಣಬಹುದಾದ ಹೊಂಗೆ ಮರದ‌ಕೆಡಗೆ ಆಕರ್ಷಣೆ ಆಗಿದ್ದು , ರಸ್ತೆ ಕಾಮಗಾರಿಯಿಂದಾಗಿ ಆ ಹೊಂಗೆ ಮರದಲ್ಲಿ ಜೀವಿಸುತ್ತಿದ್ದ ಪಕ್ಷಿಗಳು ಬರದೇ ಹೋಗಿದ್ದು .ಇದೆಲ್ಲದರಿಂದ ನಿಸರ್ಗದ ಬಗ್ಗೆ ಒಲವು ಹೆಚ್ಚಿಸಿಕೊಂಡ ನರಹರಿ‌‌ ತನ್ನ ಸಾವಿನ‌ ನಂತರ ಬ್ಯಾಂಕ್ ನಲ್ಲಿದ್ದ ಎಲ್ಲಾ ಹಣವನ್ನು ಪರಿಸರ ಸಂರಕ್ಷಣೆಯ ಕೆಲಸಕ್ಕೆ ಹೆಸರಾದ ವನಶಕ್ತಿ ಸಂಸ್ಥೆಗೆ ಸೇರುವ ರೀತಿ ಮಾಡಿದ್ದು ಎಲ್ಲವೂ ನಿಸರ್ಗಕ್ಕೆ ಮನುಷ್ಯ ಮಾಡಬಹುದಾದ ಒಳಿತು ಕೆಡುಕುಗಳ ಕಿರುಚಿತ್ರದಂತಿತ್ತು.ಅಲ್ಲದೇ ರಂಜನಿಯವರೊಳಗೊಬ್ಬ ಪರಿಸರ ಪ್ರೇಮಿಯೂ ಇದ್ದಾರೆಂದು ನನಗನ್ನಿಸಿದ್ದೂ ನಿಜ.

ಕಾಣೆಯಾದವರ ಬಗ್ಗೆ ಪ್ರಕಟಣೆಯಲ್ಲಿ ಪ್ರಾಣಿಗಳ ನಡುವಿನ ಸಂಬಂಧವನ್ನು ಪ್ರಾಣಿಗಳ ಮೂಲಕವೇ ಹೇಳಹೊರಟಿದ್ದನ್ನು ನೋಡಿ ಮಕ್ಕಳ ಪಂಚತಂತ್ರ ಕಥೆಯ ರೀತಿಯಲ್ಲಿರಬಹುದೆಂದು ಅಂದುಕೊಂಡಿದ್ದೆನಾದರೂ ಅನಂತರ ಕಥೆಯ ಮೂಲಕ ಹೇಳಹೊರಟಿರುವ ಸಂದೇಶವನ್ನು ಮಾತ್ರ ಬಹಳ ಮೆಚ್ಚಿಕೊಂಡೆ.ಮನುಷ್ಯ ತನ್ನ ಹೊಟ್ಟೆಪಾಡಿಗಾಗಿ ಪ್ರಾಣಿಗಳಿಗೆ ಅದೆಷ್ಟು ಹಿಂಸೆ ನೀಡಲೂ ಸಿದ್ದನಿದ್ದಾನೆ .ಆದರೂ ತನ್ನ ಮಾಲಿಕರು ನನ್ನಿಂದ ಸಂಕಷ್ಟಕ್ಕೀಡಾಗಬಾರದೆಂದು‌ ತನ್ನ ಅಮ್ಮ ಕೋತಿಯನ್ನೇ ಬಿಟ್ಟು ಮತ್ತೆ ಮಾಲಿಕರ ಬಳಿ ಹೋಗಲು ಸಿದ್ದನಾಗಿದ್ದು ಮರಿಕೋತಿಯ ಪ್ರಾಮಾಣಿಕತೆಯಲ್ಲಿ ಪುಣ್ಯಕೋಟಿಯನ್ನು ನೋಡಬಹುದು.ಬರಿಯ ಸ್ವಾರ್ಥ ಜಗತ್ತಿನ ನಡುವೆ ಆರೋಗ್ಯವಂತ ಸಮಾಜದ ನಿರ್ಮಾಣಕ್ಕಾಗಿ ಬೇಕಾಗುವ ಎಲ್ಲಾ ಸಂದೇಶಗಳನ್ನು ತಮ್ಮ ಕತೆಯ ಮೂಲಕ ಹೇಳುವ ಪ್ರಯತ್ನ ಮಾಡಿರುವುದು ಅಭಿನಂದನಾರ್ಹ.ಎಲ್ಲಾ ಕತೆಗಳು ಎಲ್ಲಿಯೂ ನಿಲ್ಲಿಸದೇ ಜೋಗಿಯವರು ಹೇಳಿದಂತೆ ನಿರರ್ಗಳವಾಗಿ ಓದಿಸಿಕೊಂಡು ಹೋಗುತ್ತದೆ.ಒಬ್ಬ ಬರಹಗಾರ ಮಾಡಬೇಕಾಗಿರುವುದು ಅದೇ .ಒಬ್ಬ ಓದುಗಾರನಿಗೆ ಬೇಕಾಗಿರುವಿದು ಅದೇ.ರಂಜನಿಯವರಿಗೆ ಶುಭವಾಗಲಿ.ಇನ್ನಷ್ಟು ಪುಸ್ತಕಗಳು ಅವರಿಂದ ಮೂಡಿಬರುವಂತಾಗಲಿ.

ದೀಪಕ್ ಪೊನ್ನಪ್ಪ , ಯುವ ಬರಹಗಾರರು

error: Content is protected !!
satta king chart