ಮನೆಯ ತುಳಸಿ ಗಿಡದ ಆಶ್ರಯ ಪಡೆದ ಹಕ್ಕಿಗಳು…
ವರದಿ: ಗಿರಿಧರ್ ಕೊಂಪುಳೀರ,ಕುಶಾಲನಗರ
ಮೊಬೈಲ್ ತರಂಗಗಳಿಂದ ಗುಬ್ಬಚ್ಚಿ, ಕಾಗೆಗಳು,ಹದ್ದುಗಳ ಸಂಗತಿಗಳು ನಶಿಸುತ್ತಿರುವ ಬೆನ್ನಲ್ಲೇ, ಅಪರೂಪದ ಫಿಂಚಸ್ ಎಂದು ಕರೆಯಲ್ಪಡುವ ಹಕ್ಕಿಗಳು ಕುಶಾಲನಗರ ಸುತ್ತಮುತ್ತ ಇದ್ದು ಆಶ್ರಯ ಪಡೆಯಲು ನೆಲೆ ಸಿಗದಂತಾಗಿದೆ.
ಕಳೆದ ಕೆಲವು ದಿನಗಳಿಂದ ಮಳೆಗೆ ಗೂಡು ನಿರ್ಮಿಸಲು ಪರದಾಡುತ್ತಿದ್ದ ಹಕ್ಕಿ ದಂಪತಿಗಳು,ಕುಶಾಲನಗರದ ನಿಂಗಪ್ಪ ಬಡಾವಣೆಯ ಕುದುಕುಳಿ ರಾಜೇಶ್ ರವರ ಮನೆಯಲ್ಲಿ ಆಶ್ರಯ ಪಡೆಯಲು ಯತ್ನಿಸುತಿತ್ತು, ಇದನ್ನು ಅರಿತ ರಾಜೇಶ್ ಪತ್ನಿ ಪ್ರತಿಮಾ ಮತ್ತು ಮಕ್ಕಳು ಕೃತಕ ಗೂಡು ಕಟ್ಟಲು ಬಾಕ್ಸ್ ಅನುವು ಮಾಡಿಕೊಟ್ಟಿದ್ದರು, ಆದರೆ ಅದೇ ಮನೆ ಸ್ಥಳದಲ್ಲಿ ಇರುವ ತುಳಸಿ ಗಿಡದಲ್ಲಿ ಆಶ್ರಯ ಪಡೆದು ಗೂಡು ಕಟ್ಟಿ, ಕೆಂಪು ಬಣ್ಣದ ಮೂಟ್ಟೆಯನ್ನು ಇಟ್ಟು ಸಂತಾನೋತ್ಪತಿಯಲ್ಲಿ ತೊಡಗಿಕೊಂಡಿದೆ.