fbpx

ಎಸ್.ಡಿ.ಪಿ.ಐ. ನಿಷೇಧಕ್ಕೆ ಮುಂದಡಿ ಇಟ್ಟ ರಾಜ್ಯ ಸಕಾ೯ರ

ಬೆಂಗಳೂರು ಕೆ.ಜಿ.ಹಳ್ಳಿ ಘಟನೆ ಹಿಂದೆ ಎಸ್.ಡಿ.ಪಿ.ಐ ಸಂಘಟನೆ ಇರುವುದು ಸರಕಾರಕ್ಕೆ ಸ್ಪಷ್ಟವಾಗಿದೆ.

ರಾಜ್ಯದ ಹಲವೆಡೆ ನಡೆದ ಹಲವಾರು ಅಶಾಂತಿ ಸೃಷ್ಟಸಿದ ಸಮಾಜ ಘಾತುಕ ಘಟನೆಯಲ್ಲಿನ ಪ್ರಕರಣಗಳಲ್ಲಿಯೂ ಎಸ್.ಡಿ.ಪಿ.ಐನ ಕೈವಾಡವಿರುವುದು ಈಗಾಗಲೇ ದೃಢವಾಗಿದ್ದು, ಕೊಲೆ, ದೊಂಬಿ,ಗಲಭೆಗಳಲ್ಲಿಯೂ ಎಸ್.ಡಿ.ಪಿ.ಐ ಕಾಯ೯ಕತ೯ರು ಪಾಲ್ಗೊಂಡಿರುವುದಕ್ಕೆ ಸಾಕ್ಷಿ ಸಕಾ೯ರದ ಬಳಿಯಿದೆ.

ಈ ಹಿಂದೆ ಮಡಿಕೇರಿಯ ವಿಶ್ವ ಹಿಂದೂ ಪರಿಷತ್ ಮುಖಂಡ ಕುಟ್ಟಪ್ಪ ಅವರ ಮೇಲೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದರಲ್ಲೂ ಇದು ಭಾಗಿಯಾಗಿತ್ತು. ಎಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿಕೆ ನೀಡಿದರು.

ಈಗಾಗಲೇ ರಾಜ್ಯ ಗೖಹ ಸಚಿವ ಬಸವರಾಜ ಬೊಮ್ಮಾಯಿ ಅವರೂ ಎಸ್.ಡಿ.ಪಿ.ಐ. ನಿಷೇಧಕ್ಕೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.

ಮುಖ್ಯಮಂತ್ರಿಗಳಿಗೆ ಸಂಪುಟದ ಅನೇಕ ಸಚಿವರೂ ಈ ಬಗ್ಗೆ ಒತ್ತಾಯಿಸಿದ್ದಾರೆ. ರಾಜ್ಯದಲ್ಲಿ ಶಾಂತಿ ನೆಲಸುವ ನಿಟ್ಟಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಈ ಸಂಘಟನೆ ನಿಷೇಧವಾಗಬೇಕಾಗಿದೆ.

ರಾಜ್ಯದಲ್ಲಿ ಎಸ್.ಡಿ.ಪಿ.ಐ ನಿಷೇಧಕ್ಕೆ ಸಕಾ೯ರ ಮುಂದಡಿ ಇರಿಸಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಶೋಕ್ ಹೇಳಿಕೆ ನೀಡಿದ್ದಾರೆ.

ಸಂಸದ ಪ್ರತಾಪ್ ಸಿಂಹ ಹೇಳಿಕೆ

ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಪ್ರತಾಪ್ ಸಿಂಹ ಅವರು ಮಾತನಾಡಿ, ‘ಎಸ್.ಡಿ.ಪಿ.ಐ, ಪಿ.ಎಫ್ .ಐ, ಕೆ.ಎಫ್.ಡಿ ಸಂಘಟನೆಗಳು ಈ ಹಿಂದೆಯೂ ಮಂಗಳೂರು, ಮೈಸೂರು, ಕೊಡಗು ಈಗ ಬೆಂಗಳೂರಿನಲ್ಲಿ ನಡೆದ ಗಲಭೆ, ದೊಂಬಿಯಲ್ಲಿ ಕೂಡ ಭಾಗಿಯಾಗಿತ್ತು. ಜೊತೆಗೆ ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲೂ ಶಾಮೀಲಾಗಿದೆ.

ಅದ್ದರಿಂದ ಅವುಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಜೊತೆಗೆ ಆಗಿರುವ ಸಾವ೯ಜನಿಕ ಆಸ್ತಿ-ಪಾಸ್ತಿ ನಷ್ಟವನ್ನು ಹಾಗೆ ಮಾಡಿದವರಿಂದಲೇ ಭರ್ತಿ ಮಾಡಬೇಕು. ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥರ ಮಾದರಿಯನ್ನು ನಮ್ಮಲ್ಲೂ ಅನುಸರಿಸಬೇಕು. ಅದಕ್ಕೆ ಕಾನೂನಿನ ಅಡ್ಡಿಯೇನಾದರೂ ಇದ್ದರೆ, ಅಲ್ಲಿ ಮಾಡಿದಂತೆ ಸುಗ್ರೀವಾಜ್ಞೆ ತಂದು ಈ ಕ್ರಮವನ್ನು ಜರುಗಿಸುವಂತಾಗಬೇಕು.

error: Content is protected !!
satta king chart