ಅರೆಬಾಸೆ ಹಾಡು ಕೈಲ್ ಮುಹೂರ್ತಕ್ಕೆ ರಿಲೀಸ್!
“ಮೊದ್ವೆ ಜಂಬರಲಿ” ಅರೆಬಾಸೆ ಹಾಡು
Facebook ಮತ್ತು YouTube ನಲ್ಲಿ ರಿಲೀಸ್ ಆಗಲಿದೆ. ಕೊಡಗು, ಮತ್ತು ಕಾಸರಗೋಡು ಯುವಕರ ತಂಡದವರು ಮಾಡಿರುವ “ವಿಹ ಕ್ರಿಯೇಶನ್” ಅವರ ಸಹಾಯದಿಂದ ಮತ್ತು ಪರಿಶ್ರಮದಿಂದ ” ಮೊದ್ವೆ ಜಂಬರಲಿ” ಎಂಬ ಅರೆಭಾಸೆ ಹಾಡು ರಿಲೀಸ್ಗೆ ಸಜ್ಜಾಗುತ್ತಿದ್ದು ಎಲ್ಲರ ಗಮನಸೆಳೆಯುವ ನಿರೀಕ್ಷೆಯಲ್ಲಿದ್ದಾರೆ.
ಈ ಹಿಂದೆಯಸ್ಟೆ ‘ ನೆನ್ಪುನ ಕನ್ಸುಲಿ, ರಾಣೀ ನೀ” ಎಂಬ ಹಾಡು ಜನ ಪ್ರಿಯವಾಗಿತ್ತು ಹೆಚ್ಚು ವೀವ್ಸ್ ಬಂದಿದ್ದು ಜನರ ಗಮನಸೆಳೆಯಿತು.
ಕರ್ನಾಟಕ ಸೇರಿದಂತೆ ದೇಶ ವಿದೇಶದಿಂದ ಹಲವು ಕನ್ನಡಿಗರು/ ಅರೆಬಾಷಿಕ ಜನ ಇರುವ ಸ್ಥಳದಿಂದ ಹೆಚ್ಚು ಪ್ರೋತ್ಸಾಹ ಬಂದಿದ್ದು ಅರೆಬಾಸೆ ಟೀಮ್ಗೆ ಹೆಚ್ಚು
ಪ್ರೋತ್ಸಾಹ ಸಿಗಲಿದೆ.
ಇನ್ನು ಈ ಅರೆಬಾಸೆ ಹಾಡಿಗೆ ಅರೆಬಾಸೆ ಕಥೆ ಮತ್ತು
ಬರಹಗಾರರಾದ ಅಂಜೇರಿರ ವಿಶು ರಾಘವಯ್ಯ ರವರು ಲಿರಿಕ್ಸ್ ಅನ್ನು ಬರೆದಿದ್ದರೆ.
ಬೆಂಗಳೂರಿನಲ್ಲಿ ರೆಕಾರ್ಡಿಂಗ್ ಮತ್ತು ಮಾಸ್ಟರಿಂಗ್ ಮಾಡಿದ್ದು ಈ ಹಾಡಿಗೆ ದೇರನ ರವಿ ಮಡಿಕೇರಿ ಇವರು ಧ್ವನಿ ನೀಡಿದ್ದು ಕುತೂಹಲದಿಂದ ಜನರು ಕಾಯುತ್ತಿದ್ದಾರೆ. ಇವರೊಂದಿಗೆ ಮುಖ್ಯ ಸಹಾಯಕರಾಗಿ ಪೃಥ್ವಿರವರು ಕೈಜೋಡಿಸಿದ್ದಾರೆ.
ಈ ಹಾಡಿಗೆ ಮುಖ್ಯ ನಿರ್ಮಾಪಕ (producer) ಆಗಿರುವ ಅಚಲ್ಪಾಡಿ ಜೀವನ್ ದೇವಯ್ಯ ಇವರು ಕೈ ಜೋಡಿಸಿದ್ದು ಯುವಕರ ಹುಮ್ಮಸ್ನು ಹೆಚ್ಚಿಸಿದಂತಾಗಿದೆ.
ಇವರೆಲ್ಲರ ಪ್ರರಿಶ್ರಮದ ಫಲ ಅರೆಬಾಸೆ ಜನರ ಮನಸ್ಸು ಮುಟ್ಟಲಿ ಎಂದು ಆಶಿಸೋಣ.