ಅಡುಗೆ ಮನೆ

ಎಲ್ಲರಿಗು ನನ್ನ ನಮಸ್ಕಾರಗಳು..

ನನ್ನ ಇಂದಿನ ರೆಸಿಪಿ : ಹೆಸರುಬೇಳೆ ಇಡ್ಲಿ
ಇದು ಕಮ್ಮಿ ಸಮಯದಲ್ಲಿ, ಅಕ್ಕಿಯನ್ನು ಬಳಕೆ ಮಾಡದೆ ತಯಾರಿಸುವಂಥ ರುಚಿಕರ ಹಾಗು ಆರೋಗ್ಯಕರವಾದಂತಹ ಇಡ್ಲಿ…..

ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ 1ಕಪ್
ಎಣ್ಣೇ 2 tsp
ಕ್ಯಾರಟ್ ತುರಿ 1/4 ಕಪ್
ಮೊಸರು 1/4 ಕಪ್
ಹಸಿರು ಮೆಣಸಿನಕಾಯಿ 2-3
ಶುಂಠಿ 1/4 ಇಂಚ್
ಈನೋ 1tsp
ಸಾಸಿವೆ
ಇಂಗು
ಕರಿಬೇವು
ಕೊತ್ತಂಬರಿ ಸೊಪ್ಪು
ಅರಿಶಿನ
ಉಪ್ಪು
ಮಾಡುವ ವಿಧಾನ :
ಮೊದಲಿಗಿ ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು, 2-3 ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ನಂತರ ಅದನ್ನು ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಿ.
ಒಂದು ಪ್ಯಾನ್ ನಲ್ಲಿ 2 tsp ಎಣ್ಣೆ ಹಾಕಿ, ಅದು ಕಾದ ನಂತರ ಅದಕ್ಕೆ ಸಾಸಿವೆ, ಇಂಗು, ಸಣ್ಣಗೆ ಹೆಚ್ಚಿದ ಮೆಣಸಿನಕಾಯಿ, ಕರಿಬೇವು ಮತ್ತು ಅರಿಶಿನ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಈ ಒಗ್ಗರಣೆಯನ್ನು ರುಬ್ಬಿದ ಹೆಸರುಬೇಳೆಗೆ ಹಾಕಿಕೊಳ್ಳಿ, ಇದಕ್ಕೆ ತುರಿದ ಕ್ಯಾರಟ್, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ತುರಿದ ಶುಂಠಿ, ಮೊಸರು ಹಾಕಿ ಚೆನ್ನಾಗಿ ಕಲಿಸಿ.
ಬೇಕಾದಷ್ಟು ನೀರನ್ನು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ತಂದು ಕೊಳ್ಳಿ. ಕೊನೆಯದಾಗಿ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಈನೋ ಹಾಕಿ ಚೆನ್ನಾಗಿ ಕಲಿಸಿ, 5ನಿಮಿಷಗಳ ಕಾಲ ನೆನೆಯಲು ಬಿಡಿ.
ಈಗ ಹಿಟ್ಟನ್ನು ಎಣ್ಣೆ ಸವರಿದ ಇಡ್ಲಿ ಪ್ಲೇಟ್ಗಳಿಗೆ ಹಾಕಿ, ಇಡ್ಲಿ ಕುಕ್ಕರ್ ನಲ್ಲಿ ಇಟ್ಟು 12-15 ನಿಮಿಷಗಳ ಕಾಲ ಬೇಯಿಸಿ.
ಅತ್ಯಂತ ಮೃದುವಾದ ಹಾಗು ರುಚಿಕರವಾದ ಹೆಸರುಬೇಳೆ ಇಡ್ಲಿ ಸವಿಯಲು ಸಿದ್ಧ.

ಅನುಪಮಾ ಶ್ರೀವತ್ಸ
error: Content is protected !!
satta king chart