fbpx

ಸೆ.21 ರಂದು ಹರದಾಸ ಅಪ್ಪಚ್ಚಕವಿಯ ಜನ್ಮದಿನಾಚರಣೆ

ಮಡಿಕೇರಿ ಸೆ.19:-ಬೆಂಗಳೂರು ಕೊಡವ ಸಮಾಜದಲ್ಲಿ ಸೆಪ್ಟೆಂಬರ್, 21 ರಂದು ಹರದಾಸ ಅಪ್ಪಚ್ಚಕವಿಯ ಜನ್ಮದಿನವನ್ನು ಸಾಹಿತ್ಯ ದಿನವೆಂದು ಆಚರಣೆ ಮಾಡಲಾಗುವುದು. “ಹರದಾಸ ಅಪ್ಪಚ್ಚಕವಿರ ಪುಟ್ಟ್‍ನ ನಾಳ್” (ಸಾಹಿತ್ಯ ನಾಳ್) ಕಾರ್ಯಕ್ರಮದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿತ ಡಾ.ಎಂ.ಪಿ. ರೇಖಾ ಅವರು ಬರೆದ “ಕೊಡವ ರಂಗಭೂಮಿ”, ಐತಿಚಂಡ ರಮೇಶ್ ಉತ್ತಪ್ಪ ಬರೆದ “ಕೊಡವ ಸಂಸ್ಕøತಿ ಮತ್ತು ಮಹಿಳೆ ಪಾತ್ರ ಹಾಗೂ ಪ್ರಭಾವ”(ಸಂಶೋಧನಾ ಕೃತಿ) ಮತ್ತು “ಕೊಡವಾಮೆ ಪೋತುವೊ ಎನ್ನನೆ?”, ಚೊಟ್ಟೆಯಂಡಮಾಡ ಲಲಿತ ಕಾರ್ಯಪ್ಪ ಅವರು ಬರೆದ “ಲಲಿತ ಕವನ” ಹಾಗೂ ಬಬ್ಬೀರ ಎಂ. ಕಲ್ಪನ ಅವರು ಬರೆದ “ಕೊಡಗಿನ ಪಾರಂಪರಿಕ ಆಭರಣ ಹಾಗೂ ಶಸ್ತ್ರಾಸ್ತ್ರಗಳ ಹಿನ್ನಲೆ” (ಸಂಶೋಧನಾ ಕೃತಿ) ಪುಸ್ತಕಗಳು ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ. ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಗೂ ಅಕಾಡೆಮಿಯ ಸರ್ವ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರಾದ ಕರವಟ್ಟೀರ.ಟಿ.ಪೆಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.

error: Content is protected !!
satta king chart