fbpx

ದಸರಾ ಮಹೋತ್ಸವಕ್ಕೆ ಸಿದ್ಧತೆ: ಗಜಪಡೆಗೆ ಸಾಂಪ್ರದಾಯಿಕ ಸ್ವಾಗತ

ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳೂ ಭರದಿಂದ ಸಾಗುತ್ತಿದೆ. ದಸರಾ ಭಾಗವಾದ ಗಜಪಡೆಗಳನ್ನು ಬುಧವಾರ ಇಂದು ಸ್ವಾಗತ ಮಾಡಿಕೊಳ್ಳಲಾಗಿದ್ದು, ಸ್ವಾಗತ ಕಾರ್ಯಕ್ರಮದ ವೇಳೆ ಕಂಸಾಳೆ ಸದ್ದಿಗೆ ಅಶ್ವಪಡೆಗಳು ಬೆಚ್ಚಿಬಿದ್ದು ಓಡಿದ ಸಂಗತಿ ನಡೆದಿದೆ.

ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ದಸರಾ ಗಜಪಡೆಗಳ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಲ್ಲಿಗೆ ಗಜಪಡೆಗಳು ಬರುತ್ತಿದ್ದಂತೆ ಅದ್ಧೂರಿಯಾಗಿ ಸ್ವಾಗತವನ್ನು ಮಾಡಿಕೊಳ್ಳಲಾಯಿತು. ಈ ವೇಳೆ ಕಂಸಾಳೆ ನೃತ್ಯ ಮಾಡುತ್ತಿದ್ದಾಗ ಅದರದ ಸದ್ದಿಗೆ ಅಶ್ವಪಡೆಗಳು ಬೆದರಿವೆ. ಆನೆಗಳು ಅರಮನೆ ಪ್ರವೇಶ ಮಾಡುತ್ತಿದ್ದ ವೇಳೆ ಕುದುರೆಗಳು ಈ ಶಬ್ದಕ್ಕೆ ದಿಕ್ಕೆಟ್ಟು ಓಡಾಡಲಾರಂಭಿಸಿವೆ. ಕಂಸಾಳೆ ಕಲಾವಿದರ ನಿಯಂತ್ರಣಕ್ಕೆ ಕುದುರೆ ಬಾರದೇ ಇದ್ದಿದ್ದರಿಂದ ಪೊಲೀಸರು 3 ಕುದುರೆಗಳನ್ನು ಮೆರವಣಿಗೆ ಜಾಗದಿಂದ ದೂರಕ್ಕೆ ಕರೆದೊಯ್ದಿದ್ದಾರೆ.

ಇಲ್ಲಿನ ಅರಣ್ಯ ಭವನದಿಂದ 3.5 ಕಿಮೀ ನಡಿಗೆ ಮೂಲಕ ಆನೆಗಳು ಅರಮನೆ ಜಯಮಾರ್ತಾಂಡ ದ್ವಾರಕ್ಕೆ ಆಗಮಿಸಿದ್ದು, ಅವುಗಳಿಗೆ ಸರ್ಕಾರಿ ಗೌರವದೊಂದಿಗೆ ಸ್ವಾಗತ ಮಾಡಲಾಯಿತು. ಅಭಿಮನ್ಯು ನೇತೃತ್ವದ 9 ಆನೆಗಳು ಮೊದಲ ಹಂತದಲ್ಲಿ ಪ್ರವೇಶವನ್ನು ಮಾಡಿವೆ. ಇವುಗಳಿಗೆ ಹಲವು ಬಗೆಯ ಹಣ್ಣುಗಳು, ಕಾಯಿ, ಬೆಲ್ಲ, ಕಬ್ಬು, ಕಡುಬು ಇಟ್ಟು ಪೂಜೆ ನೆರವೇರಿಸಲಾಗಿದೆ.

ಅರಮನೆ ಆಡಳಿತ ಮಂಡಳಿ ವತಿಯಿಂದ 9.5ರ ಶುಭ ಲಗ್ನದಲ್ಲಿ ಗಜಪಡೆಗೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು. ಇದೇ ವೇಳೆ ಗಜಪಡೆಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ರಾಮದಾಸ್, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

error: Content is protected !!
satta king chart