ಗಿನ್ನಿಸ್ ದಾಖಲೆ ಬರೆದ ತೂಕದ ಹಲಸಿನಕಾಯಿ!

ಚೆಟ್ಟಳ್ಳಿ ಸಮೀಪದ ಅಬ್ಯಾಲದ ಮುರಿಕೇನ್ ತೋಟದಲ್ಲಿ ಬೆಳೆದ ಹಲಸಿನಕಾಯಿ 55.50 ಕೆ.ಜಿ ತೂಕದ ಹಲಸಿನ ಹಣ್ಣೊಂದು ಗಿನ್ನಿಸ್ ದಾಖಲೆಯತ್ತ ಸಾಗಿದೆ.

ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಹಲವು ಸಾಧನೆಯಿಂದ ಹಿಡಿದು ಪ್ರಕೃತಿ ವಿಸ್ಮಯಗಳು ಸೇರಿಕೊಳ್ಳುತ್ತದೆ. ಹಾಗೇ 42.73 ಕೆ.ಜಿ ಹಾಗು 57.35 ಸೆ.ಮಿ ಉದ್ದದ ಹಲಸಿನ ಹಣ್ಣು ವಿಶ್ವದಾಖಲೆಯ ಗಿನ್ನಿಸ್ ಪುಸ್ತಕದಲ್ಲಿ ಸೇರಿದೆ. ಇದನ್ನು ಮನಗಂಡ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿರುವ ಅಬ್ಯಾಲದ ಮುರ್ ಕೀನ್ ತೋಟದ ಮಾಲೀಕ ಸಿದ್ಧಾಥ್೯ ಜೋಸೆಫ್ ಮುರ್ ಕೀನ್ ಹಾಗು ಸಹೋದರ ಗೌತಮ್ ಆ್ಯಂಟೋನಿ ಮುರ್ ಕೀನ್ ತನ್ನ ತೋಟದಲ್ಲಿ ಬೆಳೆದ ಹಲಸಿನ ಹಣ್ಣನ್ನು ತೂಕ ಮಾಡಿದಾಗ, 55.5 ಕೆಜಿ ತೂಕ ಹಾಗು 82 ಸೆ.ಮಿ ಉದ್ದವಿರುವುದನ್ನು ಮಾಹಿತಿ ಸಮೇತ ತಾಯಿ ವಿನಿತ ಮೋಹನ್ ಜೋಸೆಫ್ ಅವರ ಹೆಸರಿನಲ್ಲಿ ಗಿನ್ನಿಸ್ ದಾಖಲೆಗೆ ವೆಬ್ ಸೈಟ್ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ.

ಸಿದ್ಧಾಥ್೯ ಅವರ ತಾತ ಎಂ.ಜೆ ಜೋಸೆಫ್ ಸುಮಾರು 20-25 ವರ್ಷದ ಹಿಂದೆ ಕೇರಳದ ಕ್ಯಾಲಿಕಟ್ ನಿಂದ ಅಬ್ಯಾಲದ ಮುರ್ ಕೀನ್ ತೋಟದಲ್ಲಿ ಮೂರು-ನಾಲ್ಕು ಹಲಸಿನ ಗಿಡಗಳನ್ನು ತಂದು ನೆಟ್ಟು ಬೆಳೆಸಿದ್ದರು. ಕಳೆದ 15 ವರ್ಷಗಳಿಂದ ಅವು ಫಸಲು ನೀಡುತ್ತಿದ್ದು, ಪ್ರತಿ ವರ್ಷವೂ ಒಂದು ಮರದಲ್ಲಿ ಬೃಹತ್ತಾದ ಒಂದೇ ಒಂದು ಹಲಸಿನ ಹಣ್ಣು ಬಿಡುತ್ತಿದೆ. ಈ ವರ್ಷ ಫಸಲಿಗೆ ಬಂದ ಹಲಸಿನ ಹಣ್ಣನ್ನು ತೋಟದ ಮಾಲೀಕ ಸಿದ್ದಾಥ್೯ ತೂಕ ಮಾಡಿದಾಗ, ಗಿನ್ನಿಸ್ ದಾಖಲೆಗೊಂಡ ವಿಶ್ವದ ಹಲಸಿನ ಹಣ್ಣಿಗಿಂತ ಸುಮಾರು 13 ಕೆ.ಜಿ ಹೆಚ್ಚಿನ ತೂಕ ಇರುವುದನ್ನು ಅರಿತು ಪೊಟೋ ಸಹಿತ ಮಾಹಿತಿ ಸಮೇತವಾಗಿ ತನ್ನ ಸ್ನೇಹಿತ ಅಭಿನಯ್ ತಿಮ್ಮಯ್ಯ ಸಾಕ್ಷಿಯಾಗಿ ಮೇ 14ರಂದು ಗಿನ್ನಿಸ್ ದಾಖಲೆಯ ವೆಬ್ ಸೈಟ್ಗೆ ಅಪ್ ಲೋಡ್ ಮಾಡಿದ್ದಾರೆ. ಮೂರು ತಿಂಗಳಲ್ಲಿ ಮಾಹಿತಿಯನ್ನು ಪರಿಶೀಲಿಸಿ, ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಳ್ಳಲಿದೆ ಎಂದು ಸಿದ್ಧಾಥ್೯ ಜೋಸೆಫ್ ಮುರ್ ಕೀನ್ ಹಾಗು ಸಹೋದರ ಗೌತಮ್ ಆಂಟೋನಿ ಮುರ್ ಕೀನ್ ಹೇಳುತ್ತಾರೆ.

error: Content is protected !!