ಕೊಡಗು Quick RoundUp

ಗೋಣಿಕೊಪ್ಪದ ಸುತ್ತಮುತ್ತಲಿನ ಪ್ರದೇಶದಗಳಲ್ಲಿ ಹರಿಯುವ ಕಿರುನದಿಗಳು ಒತ್ತುವರಿಯಾಗಿರುವ ಹಿನ್ನಲೆಯಲ್ಲಿ, “ಕಾವೇರಿ ಜಲಮೂಲ ಸಂರಕ್ಷಣಾ ವೇದಿಕೆ” ಅಸ್ಥಿತ್ವಕ್ಕೆ ಬಂದಿದೆ.

ತಿತಿಮತಿಯ ನೋಖ್ಯಾ ಗ್ರಾಮದಲ್ಲಿ ತಹಾಡಹಗಲೇ ಒಂಟಿ ಸಲಗ ಪ್ರತ್ಯಕ್ಷವಾಗಿತ್ತು, ಸಲಗವನ್ನು ಕಾಡಿಗೆ ಅಟ್ಟಲು ಸ್ಥಳೀಯರ ಜೊತೆ ಗ್ರಾಮದ ಶ್ವಾನಗಳು ಕೈಜೋಡಿಸಿದು ವಿಶೇಷ.

ಸುಂಟಿಕೊಪ್ಪದ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಲಾಕಡೌನ್ ಹಿನ್ನಲೆ ಸಂಕಷ್ಟಕ್ಕೆ ಸಿಲುಕಿದ ಕುಟುಂಬಗಳಳಿಗೆ ಹಾಸನದ ಗ್ರಾಹಕ ಆಯೋಗದಿಂದ ದಿನಸಿ ಸಾಮಗ್ರಿ ವಿತರಿಸಲಾಯಿತು.

ವಿರಾಜಪೇಟೆ ಮತ್ತು ಗೋಣಿ‌ಕೊಪ್ಪ ವ್ಯಾಪ್ತಿಯಲ್ಲಿ ನೆನಗಗುದಿಗೆ ಬಿದ್ದಿದ್ದ ಜಮೀನು ಮಂಜೂರಾತಿ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಮಂಜೂರಾತಿ ಪಡೆದ ಕುಟುಂಬಕ್ಕೆ ಶಾಸಕ ಕೆ.ಜಿ ಬೋಪಯ್ ಬೆಲ್ಲ ನೀಡಿ ಸುದ್ದಿ ತಲುಪಿಸಿದ್ದಾರೆ.

ಮಡಿಕೇರಿಯ ಸಂಜೀವಿನಿ ಕ್ಲಿನಿಕ್ ಬಳಿ ಮಳೆಗೆ ನೆನೆದು ಜ್ವರದಿಂದ ನರಳುತ್ತಿದ್ದ ಮಾನಸಿಕ ಅಸ್ವಸ್ಥನನ್ನು 112ರ ಸಹಾಯವಾಣಿ ಪೋಲಿಸರು ರಕ್ಷಿಸಿ,ಸ್ಥಳೀಯಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಲಾಯಿತು.

  • ಮನ್ರೇಗಾ ಯೋಜನೆಯಡಿ ಹುದಿಕೇರಿ ಗ್ರಾ.ಪಂ ಬೇಗೂರು ಗ್ರಾಮದಲ್ಲಿ ಕೃಷಿ ಹೊಂಡ ನಿರ್ಮಾಣದ ಕಾರ್ಯ ತ್ವರಿತವಾಗಿ ನಡಿಯುತ್ತಿದೆ.
  • ಕೆದಕಲ್ ಗ್ರಾಮಪಂಚಾಯ್ತಿಯ ಮಾಜಿ ಅಧ್ಯಕ್ಷ ರ ಕಾಫಿ ತೋಟದಲ್ಲಿರುವ ಬೆಲೆಬಾಳುವ ಮರಗಳ ಬುಡಕ್ಕೆ ಕಿಡಿಗೇಡೀಗಳು ವಿಷಹಾಕಿ ನಾಶ ಮಾಡಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.
  • ರಾಯ್ ಡಿಸೋಜಾ ಸಾವಿನ ಪ್ರಕರಣ ಸಂಬಂಧ ಪೊಲೀಸ್ ಠಾಣೆಯ ಸಿ.ಸಿ.ಕ್ಯಾಮರಾವನ್ನು ವಶಕ್ಕೆ ಪಡಯಲಾಗಿದೆ. ಅದರಲ್ಲಿರುವ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ತಪ್ಪಿತಸ್ಥ ರ ವಿರುದ್ಧ ಶಿಸ್ತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಐಜಿಪಿ ಮಧುಕರ್ ಪವಾರ್ ತಿಳಿಸಿದ್ದಾರೆ.
  • ಇಂದಿನಿಂದ ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ‌ ಆರೋಗ್ಯ ಕೇಂದ್ರದ ವತಿಯಿಂದ ಸುಂಟಿಕೊಪ್ಪ ಜಿ.ಎಂ.ಪಿ. ಶಾಲೆಯಲ್ಲಿ ಕೋವಿಡ್ ಲಸಿಕೆಯನ್ನು ನೀಡಲಾಗುವುದು ಮತ್ತು ಕೋವಿಡ್ ತಪಾಸಣೆ (ಸ್ವ್ಯಾಬ್ ಟೆಸ್ಟಿಂಗ್) ನಡೆಸಲಾಗುವುದು ಎಂದು ವೈದ್ಯರಾದ ಡಾ.ಜೀವನ್ ಅವರು ಮಾಹಿತಿ ನೀಡಿದ್ದಾರೆ.
  • ಕೊಡಗು ಜಿಲ್ಲೆಗೆ ಹೊಂದಿಕೊಂಡಂತಿರುವ ಅರಸಿಕಟ್ಟೆ ಅಮ್ಮ ದೇವಾಲಯದಲ್ಲಿ,ರಾಜ್ಯದಲ್ಲೇ (200+ ಕೆ.ಜಿ) ತೂಕದ ಕಂಚಿನ ಗಂಟೆ ಅಳವಡಿಸಲಾಗಿದೆ.
error: Content is protected !!