ಅಪರಾಧ ತಡೆಗೆ ಬಾರ್ಡರ್ ಕ್ರೈಂ ಸಭೆ
ಗೋಣಿಕೊಪ್ಪದಲ್ಲಿ ಬಾರ್ಡರ್ ಕ್ರೈಂ ಸಭೆ ಹಮ್ಮಿಕೊಳ್ಳಲಾಯಿತು. ರಾಜ್ಯ, ಅಂತರರಾಜ್ಯ ಗಡಿ ಭಾಗದ ಪೊಲೀಸ್, ಅಬಕಾರಿ,ಅರಣ್ಯ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ಸಭೆ ನಡೆಸಿದ್ದು, ಗಡಿ ಭಾಗದಲ್ಲಿ ಅಪರಾಧ ಪತ್ತೆ ಹಚ್ಚಿ ಅವುಗಳ ತಡೆಗಟ್ಟುವ ಸಲುವಾಗಿ ಸಭೆ ನಡೆಸಿದ್ದು, ಎಲ್ಲಾ ಅಧಿಕಾರಿಗಳಿಂದ ಒಮ್ಮತದ ನಿರ್ಣಯ ತೆಗೆದುಕೊಳ್ಳಲಾಯಿತು.
ಈ ಸಂದರ್ಭ ಕೇರಳದ ಮೂರು ಗಡಿ ಭಾಗದ ಹಿರಿಯ ಅಧಿಕಾರಿಗಳು ಹಾಜರಿದ್ದು, ಅವರ ಅಭಿಪ್ರಾಯ ಪ್ರಕಟಿಸಿದರಲ್ಲದೆ ಕಾಡಿನ ಅಧಿಕಾರಿಗಳ ನಿರ್ಧಾರಕ್ಕೆ ಒಮ್ಮತದ ಸಹಕಾರ ನೀಡುವುದಾಗಿ ತಿಳಿಸಿದರು.