ಅಂಕಣ: ಅಳೆದು ತೂಗಿ…

ಇನ್ನು ಮುಂದೆ ಪ್ರತಿ ಮಂಗಳವಾರ ಸುದ್ದಿಸಂತೆಯ ಸಹ ಸಂಪಾದಕನಾದ ನಾನು ಜೀವನ್ ನಿಮ್ಮ ಮುಂದೆ ಅಳೆದು ತೂಗಿ ಎಂಬ ಅಂಕಣ ಬರೆಯಲಿದ್ದೇನೆ. ಓದಿ ಪ್ರೋತ್ಸಾಹಿಸಿ…

ಭಾರತ ‘ಆತ್ಮ ನಿರ್ಭರ್’ ಆಗಲು ಜಪಾನ್ ಮಾದರಿಯನ್ನು ಪಾಲಿಸಬೇಕು!

ಇತ್ತೀಚೆಗೆ ಭಾರತ ಸಂಪೂರ್ಣ ಸ್ವಾವಲಂಭನೆಯನ್ನು ಸಾಧಿಸಿ, ‘ಆತ್ಮ ನಿರ್ಭರ್’ ಆಗುವತ್ತ ಸಾಗುವ ತುಡಿತದಲ್ಲಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಅದಕ್ಕಾಗಿ ‘Vocal For Local’  ಆಗಬೇಕಾದ ಅಗತ್ಯತೆಯ ಪ್ರಾಮುಖ್ಯತೆ ಬಗ್ಗೆ ನಮಗೆ ಸಂದೇಶ ನೀಡಿದ್ದಾರೆ. ನಮ್ಮ ಸ್ವದೇಶಿ ಕಂಪೆನಿಗಳ ಉತ್ಪನ್ನಗಳನ್ನೇ ಭಾರತೀಯರು ಕೊಂಡುಕೊಳ್ಳುತ್ತಾ, ಅದನ್ನು ಪ್ರೋತ್ಸಾಹಿಸಬೇಕು ಎಂಬುದು ಇದರ ಮೊದಲ ಹೆಜ್ಜೆ ಆಗಿದೆ. ಅಷ್ಟೇ ಅಲ್ಲ, ನಾವು ಚೀನಾದ ಮೇಲೆ ಅವಲಂಭನೆಯನ್ನು ತಪ್ಪಿಸಲು ಕೂಡ ಇದು ಸಹಕಾರಿ ಆಗಬಲ್ಲದು. ಹಾಗಾಗಿ ಜಪಾನ್ ಮಾದರಿಯಲ್ಲಿ ಭಾರತವನ್ನು ಸ್ವಾಭಿಮಾನಿ ಆಗಿಸಲು ನಾವೆಲ್ಲಾ ಟೊಂಕ ಕಟ್ಟಿ ನಿಲ್ಲಬೇಕಾದ ಸಮಯವೇ ಇದಾಗಿದೆ.



ಅದು ಎರಡನೇ ಮಹಾ ಯುದ್ಧದ ಸಮಯ. ಜಪಾನ್ ಚಿಕ್ಕ ರಾಷ್ಟ್ರವಾದರೂ ಅದು ಸೋಲು ಒಪ್ಪಿಕೊಳ್ಳದೆ ಇನ್ನೂ ದಿಟ್ಟವಾಗಿ ಧೀರತೆಯಿಂದ ಏಕಾಂಗಿ ಹೋರಾಟ ನಡೆಸುತ್ತತ್ತು. ಸೆಣೆಸಿ, ಸೋಲಿಸಲು ಅಮೇರಿಕಾಗೆ ಸಾಧ್ಯವಿಲ್ಲ‌ ಎಂಬುದನ್ನು ಅರ್ಥ ಮಾಡಿಕೊಂಡಿತ್ತು. ಆಗಸ್ಟ್ 6, 1945ರಂದು ಜಪಾನಿನ ಹಿರೋಶಿಮಾ ಮತ್ತು ನಾಗಾಸಕಿ ನಗರಗಳ ಮೇಲೆ ‘Little Boy’ ಮತ್ತು ‘Fat Boy’ ಎಂಬ ಎರಡು ಅಣು ಬಾಂಬ್ ಗಳನ್ನು ಅಮೇರಿಕಾ ಯುದ್ಧ ವಿಮಾನ B-29 ಬಾಂಬರ್ ಮೂಲಕ ಹಾಕಿ ಸ್ಪೋಟಿಸಲಾಯಿತು. ಅದು ತೀರಾ ಹೃದಯವಿದ್ರಾಮಕ ವಿಧ್ವಂಸಕ ದಾಳಿಯಾಗಿತ್ತು. ಎರಡೂ ನಗರಗಳೂ ಪತರ್ ಗುಟ್ಟಿ ಹೋಗಿತ್ತು. ಎಲ್ಲೆಲ್ಲೂ ಸುಟ್ಟು ಬೂದಿಯಾಗಿದ್ದ ಆಸ್ತಿ ಪಾಸ್ತಿ, ಜನರ ಧಹಿಸಿ ಹೋಗಿದ್ದ ದೇಹದ ಅಸ್ಥಿಪಂಜರಗಳು, ತಲೆಬುಡೆಗಳ ರಾಶಿಯೇ ಅಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿತ್ತು. ಪ್ರಪಂಚವೇ ಈ ಅಪಾಯಕಾರಿ ಬೆಳವಣಿಗೆ ಕಂಡು ಕಂಬನಿ ಹಾಕಿತ್ತು.



ಈ ಸ್ಪೋಟದಲ್ಲಿ ಅನಾಮತ್ತು 1.85 ಮಿಲಿಯನ್  ಜಪಾನಿ ಅಮಾಯಕ ಜನರು ಸತ್ತು ಬೂದಿಯಾಗಿ ಬಿಟ್ಟರು. ಏಳು ಲಕ್ಷ ಜನರು ಗಾಯಾಳುಗಳಾಗಿ ಕೆಲವರು ಕಾಣೆಯೇ ಆಗಿ ಹೋದರು. ಜಪಾನಿನ 4% ಜನಸಂಖ್ಯೆ ನಾಶವಾಗಿ ಹೋಯಿತು. ಸುಮಾರು 25 ಶೇಖಡದಷ್ಟು ದೇಶದ ಸಂಪತ್ತಿನ ನಷ್ಟ ಉಂಟಾಯಿತು. ಜಪಾನಿನ ರಾಜ ಹಿರೊಹಿಟೊ ಅಗಸ್ಟ್/15ಕ್ಕೆ ಷರತ್ತು ರಹಿತ ಶರಣಾಗತಿಯನ್ನು ಎರಡನೇ ವಿಶ್ವ ಯುದ್ಧದ ಸಂಬಂಧ ಘೋಷಿಸಿತು. ಇಡೀ ಜಗತ್ತೇ ಈ ಅಪಾಯಕಾರಿ ಬೆಳವಣಿಗೆ ಕಂಡು ದಿಗಿಲಿಗೆ ಈಡಾಗಿತ್ತು.


ಆಘಾತದಿಂದ ಸುಧಾರಿಸಿಕೊಳ್ಳಲು ಮತ್ತೆ ಜಪಾನ್ ಮೈ ಕೊಡವಿ‌ ಎದ್ದು ನಿಲ್ಲಲು ಹಂಬಲಿಸಿತು. 1945-1991ರ ತನಕ ಅದು ಆರ್ಥಿಕ  ಅಭಿವೃದ್ಧಿಯತ್ತ ಗಮನ ಹರಿಸಿ, ‘Japanese Economic Miracle Years’  ಎಂದು ಆ ಅವಧಿಯನ್ನು ಜಪಾನ್ ಕರೆದುಕೊಂಡಿತು.


Keiretsu ಮತ್ತು Shinto ಎಂಬ ವಿಭಾಗಗಳನ್ನು ಮಾಡಿ, ಉತ್ಪಾದಕರು, ಹಂಚಿಕೆದಾರರು, ವಿತರಕರು ಹಾಗು ಬ್ಯಾಂಕ್ ಗಳನ್ನು ಒಟ್ಟಿಗೆ ಬೆಸೆಯಲಾಯಿತು. ಅದರ ಮೂಲಕ ವ್ಯಾಪಾರ-ವಹಿವಾಟು, ಶೇರ್ ಹಿಡುವಳಿಗಳನ್ನು ಸಾಂಗವಾಗಿ ನಡೆಯುವಂತೆ ನೋಡಿಕೊಳ್ಳಲಾಯಿತು. Shunto ಮೂಲಕ ಕಾರ್ಮಿಕ ವರ್ಗದ ಕಾಳಜಿ ಹಾಗು ಹೂಡಿಕೆದಾರರ ಹಿತಾಸಕ್ತಿ ಕಾಪಾಡಿಕೊಳ್ಳಲಾಯಿತು.

1949ರಲ್ಲಿ ಜಪಾನ್ ತೀವ್ರವಾದ ಆರ್ಥಿಕ ಮುಗ್ಗಟ್ಟು ಹಾಗು ಹಣದುಬ್ಬರದ ದುಸ್ಥಿತಿಯಿಂದ ಹೊರಬರಲು ವಿದೇಶಾಂಗ ವಹಿವಾಟಿನ ಹಾಗು ಕಾರ್ಖಾನೆಗಳ ಸಚಿವಾಲಯವೆಂಬ ಹೊಸ ಸಚಿವಾಲಯವನ್ನು ಜಪಾನಿ ಸರಕಾರ ಶುರು ಮಾಡಿತು. ಇದು ಉತ್ಪಾದನಾ ಚಟುವಟಿಕೆಗಳಿಗೆ ಚುರುಕು ಮುಟ್ಟಿಸಲು ಹಾಗು ವಿದೇಶಿ ತಂತ್ರಜ್ಞಾನವನ್ನು ಸ್ವಯಂ ಆಗಿ ಅಳವಡಿಸಿಕೊಳ್ಳಲು ಸಹಕಾರಿ ಆಯಿತು. ಪ್ರತಿಯೊಬ್ಬ ಜಪಾನಿನ ಪ್ರಜೆಗಳು ಕೂಡ ಜಪಾನಿನ ಅಭ್ಯುದಯಕ್ಕೆ ಅವಿರತ ಶ್ರಮಿಸಿದರು. 1990’s ನಲ್ಲಿ ಫಲಿತಾಂಶವಾಗಿ ಜಪಾನ್ ವಿಶ್ವದ 2ನೇ ದೊಡ್ಡ ಆರ್ಥಿಕತೆಯಾಗಿ ಮೂಡಿ ಬಂದಿತು. ಅಮೇರಿಕಾದ ನಂತರದ ಸ್ಥಾನವನ್ನು ಜಪಾನ್ ಆರ್ಥಿಕತೆಯಲ್ಲಿ ಪಡೆಯಿತು. ಅದರಲ್ಲಿ ಸರಕಾರದ ಹೊಸ ಯೋಚನೆ, ಯೋಜನೆಗಳಿದ್ದವು. ಪ್ರಜೆಗಳು ಕೂಡ ಹಗಲು ರಾತ್ರಿ ಎನ್ನದೆ ದೇಶದ ಒಳಿತಿಗೆ ಶಕ್ತಿ ಮೀರಿ ದುಡಿಯುತ್ತಿರುವರು.


ಕೆಲಸದ ಒತ್ತಡದಿಂದ ಜಪಾನಿಯರು ಸಾವನ್ನಪ್ಪುತ್ತಿದ್ದಾರೆ!

ಈಗಲೂ ಅಲ್ಲಿನ ಜನ ತಿಂಗಳಿಗೆ 80 ಗಂಟೆಗಳ ಓವರ್ ಟೈಮ್ ಡ್ಯೂಟಿ ಮಾಡಿ, ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ. ಆ ಕಾರಣದಿಂದ ಕೆಲಸದ ಮಾನಸಿಕ ಒತ್ತಡವಾಗಿ ಜಪಾನಿನ ಜನರಲ್ಲಿ ‘Karoshi’ ಸಮಸ್ಯೆ ಕಾಡುತ್ತಿದೆ. ಅಂದರೆ ‘Overwork death’. ಈ ಸಮಸ್ಯೆ ಕಾಡಿದವರು ಹೃದಯಾಘಾತ ಅಥವಾ ಪಾಶ್ವವಾಯು ಅಥವಾ ಆತ್ಮ ಹತ್ಯೆಗೆ ಶರಣಾಗಿ ಸಾವನ್ನು ಅಪ್ಪುತ್ತಾರೆ. ಮೊದಲೇ ಸಣ್ಣ ಜನ ಸಂಖ್ಯೆಯ ಸಮಸ್ಯೆಯಿಂದ ಮಾನವ ಸಂಪನ್ಮೂಲದ ನ್ಯೂನತೆ ಇದ್ದು, ಈ ಸಮಸ್ಯೆ ಮತ್ತಷ್ಟು ಅದನ್ನು ಹೈರಾಣಾಗಿಸಿದೆ. ಹಾಗಾಗಿ ರೋಬೊಟ್ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ. ಹಾಗಾಗಿ ಜಪಾನ್ ಕೆಲಸದ ಸಮಯವನ್ನು ಎಲ್ಲಾ ಪ್ರಜೆಗಳಿಗೂ ಕಡಿಮೆ ಮಾಡಿದೆ. ಅದೇನೇ ಇರಲಿ ಜಪಾನ್ ನೆಲಕ್ಕಚ್ವಿದಾಗಲೂ ಕುಸಿಯದೆ, ಸರಕಾರ ಹಾಗು ಜನತೆ ಜೊತೆಗೂಡಿ ದೇಶದ ಉದ್ಧಾರಕ್ಕೆ ಪಣ ತೊಟ್ಟಿದ್ದು, ನಂತರ ಪರಿಣಾಮವಾಗಿ ಜಪಾನ್ ವಿಶ್ವದ ಎರಡನೇ ಅತಿ ದೊಡ್ಡ ಆರ್ಥಿಕತೆಯಾಗಿ ಅಮೇರಿಕಾ ಪಕ್ಕ ನಿಂತಿದ್ದು ಎಲ್ಲವೂ ನಿಜಕ್ಕೂ ಪವಾಡದಂತೆ ಕಂಡರೂ ಅದು ಅದರ ಪರಿಶ್ರಮ, ಶಕ್ತಿ, ಶಿಸ್ತಿನಿಂದಲೇ ಆಗಿದ್ದು ಎಂಬುದು ಸತ್ಯ.

ಭಾರತವೂ ಜಪಾನ್ ಮಾದರಿ ಅನುಸರಿಸಲಿ


ಹಿಂದಿಗಿಂತಲೂ ಭಾರತ 2014ರಿಂದ ಉತ್ಪಾದನಾ ಕ್ಷೇತ್ರದಲ್ಲಿ ಸುಧಾರಣೆಯನ್ನು ಕಂಡುಕೊಂಡು ಬಂದಿದೆ ಆದರೂ ಅದು ಪರಾವಲಂಬನೆಯನ್ನು ತಿರಸ್ಕರಿಸುವ ಮಟ್ಟಕ್ಕೇನೂ ಬೆಳೆದಿಲ್ಲ. ಜಪಾನ್ ಅಲ್ಲಿ ಇರುವ ಕಡಿಮೆ ಜನಸಂಖ್ಯೆಯ ಸಮಸ್ಯೆ ನಮಗೆ ಭಾರತದಲ್ಲಿ ಇಲ್ಲ. ಈ ವರ್ಷ ನಮ್ಮ ಭಾರತ ಜಗತ್ತಿನ ಅತಿ ಯುವ ರಾಷ್ಟ್ರವಾಗಿ ನಿಂತಿದೆ. ಹಾಗಾಗಿ ಭಾರತದ ಕೇಂದ್ರ ಸರಕಾರವು ‘Micro,Small and Medium Enterprises'(MSME)ಗಳನ್ನು ಈ ಯುವ ಜನರನ್ನು ಬಳಸಿಕೊಂಡು ಬೆಳೆಸುವ ಜೊತೆಗೆ ಕೃಷಿಗೆ ಆದ್ಯತೆ ನೀಡಿ ಕೃಷಿ ಕ್ಷೇತ್ರದ‌ ವೃದ್ಧಿಗೂ ಶ್ರಮಿಸಬೇಕಿದೆ. ‘Digital India’ದ ಕಲ್ಪನೆಯನ್ನು ಪೂರ್ತಿಯಾಗಿ ಸಾಕಾರಗೊಳಿಸಬೇಕು. ಪ್ರತಿ ರಾಜ್ಯಗಳಲ್ಲೂ ಉತ್ಪಾದನಾ ಚಟುವಟಿಕೆಗಳಿಗೆ ಪೂರಕವಾದಂತಹ ಮೂಲಭೂತ ಸೌಕರ್ಯಗಳನ್ನು ಬಲಪಡಿಸಬೇಕು.

ಅದಕ್ಕಾಗಿ ಆರ್ಥಿಕತೆಯನ್ನು ಗಟ್ಟಿಗೊಳಿಸಿ, ಪ್ರಜಾಪ್ರಭುತ್ವದ ಶಕ್ತಿಗಳನ್ನು ಬಳಸಿಕೊಂಡು ಹೊಸ ಕಾರ್ಖಾನೆಗಳನ್ನು ಸ್ಥಾಪಿಸಬೇಕಿದೆ. ಚೀನಾ ಕೊರೋನಾ ಸಮಸ್ಯೆಯಿಂದ ಪ್ರಪಂಚದ ಎಲ್ಲಾ ದೇಶಗಳ ನಂಬಿಕೆಗಳನ್ನು ಕಳೆದುಕೊಂಡಿದೆ. ಹಾಗಾಗಿ ಭಾರತ ಚೀನಾಗೆ ಪರ್ಯಾಯ ಶಕ್ತಿಯಾಗಿ ಬೆಳೆಯಲು ಇದು ಸೂಕ್ತ ಸಮಯ. ಅದಕ್ಕೆ ಭಾರತ ಸರಕಾರ ಹಾಗು ದೇಶದ ಪ್ರತಿಯೊಬ್ಬ ಪ್ರಜೆಯೂ ಬದ್ಧನಾಗಿ ದೇಶದ ಏಳಿಗೆಗೆ ದುಡಿಯುವಂತಾಗಲಿ. ಆ ಮೂಲಕ ನಮ್ಮ ಮಾತೃ ಭೂಮಿ ಭಾರತವನ್ನು ವಿಶ್ವಗುರುವಾಗಿಸುವ ಪ್ರಯತ್ನ ಪಡಬೇಕಿದೆ. ಹೀಗಾದಾಗಲೇ ‘ಸ್ವಾಭಿಮಾನಿ ಭಾರತ’ ಆಗಿ ವಿಶ್ವಗುರು ಎನ್ನಿಸಿಕೊಳ್ಳಲು ಆರ್ಹವಾಗಬಲ್ಲದು.


ಜೀವನ್ ಅಚ್ಚಲ್ಪಾಡಿ, ಸಹ ಸಂಪಾದಕರು

error: Content is protected !!
satta king chart