ಸಾಯುವ ಅವಿವೇಕಿಗೆ ನಾನೇನು ಹೇಳಲಯ್ಯ…

ಬರಹಗಾರರು: ಅಂಜೇರಿರ ವಿಶು ರಾಘವಯ್ಯ‌.

ನಾ ಕಂಡ ಈ ೨೧ ನೇ ಶತಮಾನದಲ್ಲಿ ಕೆಲವರು ಅವಿವೇಕಿಗರು ಇದ್ದಾರೆ , ಆದರೆ ಎಲ್ಲರನ್ನೂ ದೋಷಿ ಎಂದು ಹೇಳಲು ಆಗುವುದಿಲ್ಲ ಅವರ ಧೈರ್ಯ ಕುಗ್ಗಿ ಮನನೊಂದು ಸಾಯುವ ಪ್ರಸಂಗ ಎದುರಾಗಿ ಕೆಟ್ಟ ಅಲೋಚನೆಗೆ ಹೋಗಲು ಕೆಲವೇ ಕ್ಷಣಗಳು ಸಾಕಲ್ಲವೇ. ಈ ಜೀವನೇ ಹಾಗಲ್ಲವೇ ಕೆಲವೊಮ್ಮೆ ತನ್ನಗ್ತಾನೆ ಆಲೋಚನೆ ಬರಲಾರಂಭಿಸುತ್ತವೆ.

ಒಂದು ವೇಳೆ ಕೆಟ್ಟ ದೋಷಗಳು ನಿಮ್ಮ ಹಿಂಬಾಲಿಸಿ ಬಂದರೆ ನಿಮ್ಮ ಮನಸ್ಥಿತಿಯಲ್ಲಿ ಅವಿತರೆ ನೀವು ಮನಸ್ಸಿನ ಮಾತುಗಳನ್ನು ಯಾರೋಂದಿಗೂ ಹೇಳಲೂ ಸಾಧ್ಯವಾಗದಂತಾಗುತ್ತದೆ ಅಲ್ಲವೇ. ಕೆಲವೊಮ್ಮೆ ನೆನಪಿಸಿಕೊಳ್ಳಿ ಕೆಲವರು ಪ್ರೀತಿ ಮುಖಾಂತರ ಸಾಯುತ್ತಾರೆ, ಇನ್ನು ಕೆಲವರು ಕಷ್ಟಕರದ ಜೀವದಲ್ಲಿ ಬೇಸತ್ತು ಸಾಯುತ್ತಾರೆ, ಇನ್ನೂ ಕೆಲವರು ಏನು ಮಾಡಲಾರದೆ ಕುಗ್ಗಿ ಕುಗ್ಗಿ ಸಾಯುತ್ತಾರೆ, ಈ ಯುಗದಲ್ಲಿ ನಾವು ಮಾಡುವಂತಹ ಕೆಲಸಗಳು ಬೇಕಾದಷ್ಟು ಇರುತ್ತದೆ ಅಲ್ಲವೇ ಹಾಗಾಗಿ ನಾ ಹೇಳುವುದಾದರೆ ಹುಟ್ಟು ಖಚಿತ ಸಾವು ನಿಶ್ಚಿತ, ಯಮ ಕರೆದಾಕ್ಷಣ ಅವನ ಹಿಂದೆ ಹೋಗಬೇಕು ಹೊರೆತು ನಾವೇ ಸಾವನ್ನು ಹುಡಿಕೊಂಡು ಹೋಗಬಾರದು ಅಲ್ಲವೇ?

ಬರಹಗಾರರು: ಅಂಜೇರಿರ ವಿಶು ರಾಘವಯ್ಯ‌ ಆರೋಗ್ಯ ಇಲಾಖೆ ಕುಶಾಲನಗರ, ಕೊಡಗು‌

error: Content is protected !!
satta king chart