ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಹಾಗೂ ಶಾಲಾ ಬ್ಯಾಗ್ ಕೊಡುಗೆ
ಕುಶಾಲನಗರ, ಆ 10: ಕುಶಾಲನಗರ ತಾಲ್ಲೂಕಿನ ತೊರೆನೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಹಾಗೂ ಶಾಲಾ ಬ್ಯಾಗ್ ಕೊಡುಗೆ ನೀಡಲಾಯಿತು.
ಶಾಲೆಯ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ
ಕುಶಾಲನಗರದ ಬಿ.ಎಸ್.ಆರ್. ಗ್ರೂಪ್ ಸಂಸ್ಥೆ ಜಗದೀಶ್ ಅವರ ನೇತೃತ್ವದಲ್ಲಿ ಶಾಲೆಯ 50 ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಹಾಗೂ ಬ್ಯಾಗ್ ವಿತರಿಸಲಾಯಿತು.
ಈ ಸಂದರ್ಭ ಸಂಸ್ಥೆಯ ಪ್ರಮುಖರು ಆದ ಕುಶಾಲನಗರ ಪಪಂ ಸದಸ್ಯ ಡಿ.ಕೆ.ತಿಮ್ಮಪ್ಪ ಹಾಗೂ ಡಾ.ಸುಜಯ್ ಮಾತನಾಡಿ, ಸರಕಾರ ಮತ್ತು ಸಂಘಸಂಸ್ಥೆಗಳು, ದಾನಿಗಳಿಂದ ದೊರಕುವ ಸೌಲಭ್ಯ, ಸವಲತ್ತುಗಳನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ತಮ್ಮ ಶೈಕ್ಷಣಿಕ ಮಟ್ಟವನ್ನು ವೃದ್ದಿಸಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಪ್ರಮುಖರಾದ ಶಶಿಕಿರಣ್, ಜಯರಾಂ, ತಾಪಂ ಮಾಜಿ ಸದಸ್ಯ ಟಿ.ಕೆ.ಪಾಂಡುರಂಗ, ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅಣ್ಣಯ್ಯ, ಶಿಕ್ಷಕರಾದ ಮಂಜುನಾಥ್, ಸವಿತಾ, ಶ್ರೀಹರ್ಷ, ಜಯಲಕ್ಷ್ಮಿ, ಕೂಡಿಗೆ ಸ.ಪ.ಪೂ.ಕಾಲೇಜು ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ, ಹಳೆ ವಿದ್ಯಾರ್ಥಿ ಸಾಗರ್ ತೊರೆನೂರು ಇದ್ದರು.
ಇದೇ ಸಂದರ್ಭ ದಾನಿಗಳಾದ ಡಾ.ಸುಜಯ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.