ರಾಷ್ಟ್ರೀಯ ಕೀಟಗಳ ಪಟ್ಟಿ ಸಿದ್ಧ: ಅಂಕಿತ ಒಂದೇ ಬಾಕಿ!

ಕೊಡಗು: ಮನೆಯ ಸುತ್ತಮುತ್ತಲಿರುವ ಉದ್ಯಾನವಾಗಲಿ,ಕಾಡಿನ ಗಿಡದಲ್ಲಿರುವ ಹೂವುಗಳಾಗಲಿ ಅಲ್ಲಿ ಬಣ್ಣ ಬಣ್ಣದ ಚಿಟ್ಟೆಗಳನ್ನು ನೋಡಿರುತ್ತೇವೆ,ಪರಾಗ ಸ್ಪರ್ಷದಿಂದ ಹಲವು ಗಿಡಗಳ ಸಂತತಿಯನ್ನು ಬೆಳೆಸುವ ಮೃದು ರೆಕ್ಕೆ ,ಪುಟ್ಟ ಮಕ್ಕಳು ಸೇರಿದಂತೆ ಎಲ್ಲರಿಗೂ ಖುಷಿ ತರುವ ಈ ಜೀವಿಗಳು ರಾಷ್ಟ್ರೀಯ ಸಂತತಿ ಪಟ್ಟಿಗೆ ಬರುವ ದಿನ ಬರಲಿದೆ. ಹೌದು ಈಗಾಗಲೇ ದೇಶದ ಮೂಲೆಮೂಲೆಯಲ್ಲೂ ಅದ್ಯಾಯನ ನಡೆಸಿದ ತಂಡ ಕೊಡಗಿಗೆ ಭೇಟಿ ನೀಡಿದ ಸಂದರ್ಭ ಈ ವಿಚಾರ ಬಹಿರಂಗ ಪಡಿಸಿದ್ದು,ಈಗಾಗಲೇ ದೇಶದ ವಿವಿದೆಡೆಗಳಲ್ಲಿ 7 ಪ್ರಭೇದಗಳನ್ನು ಗುರುತಿಸಲಾಗಿದ್ದು ಸದ್ಯದಲ್ಲೇ ಅಂತಿಮ ಹೆಸರು ಬಹಿರಂಗಗೂಳ್ಳಲಿದೆ.

ಆನೆಪಥ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಖಾಸಗಿ ವನ್ಯಜೀವಿ ಸಂರಕ್ಷಣಾ ತಂಡ ಚಿಟ್ಟೆಗಳ ಮಾನದಂಡವನ್ನು ಗುರುತಿಸಿದ್ದು.ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆ ಫೌಂಡೇಶನ್ ಕಾರ್ಯದರ್ಶಿ ಪಲ್ಲವಿ ಕೊಡಗಿನ ಪೊನ್ನಂಪೇಟೆಯಲ್ಲಿ ಬಹಿರಂಗಪಡಿಸಿದ್ದು ಈಗಾಗಲೇ ಏಳು ಪ್ರಭೇದಗಳ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ.

ಎಲ್ಲೋ ಗಾರ್ಗನ್
ಈಶಾನ್ಯ ಜಂಗಲ್ ರಾಣಿ
ಆರೆಂಜ್ ಓಕೆ ಲೀಫ್
ಕೃಷ್ಣ ನವಿಲು ಚಿಟ್ಟೆ
ಭಾರತೀಯ ನವಾಬ್
ಕಾಮನ್ ಜೆಸೆಬೆಲ್
ಗಗನಫೈವ್ ಬಾರ್ ಸೋಡ್೯ ಟೇಲ್

ರಾಷ್ಟ್ರೀಯ ಚಿಟ್ಟೆಗಳ ಪಟ್ಟಿ ಇಂತಿದೆ
1.ಕಾಮನ್ ಜೆಸೆಬೆಲ್ -ಈಶಾನ್ಯ ರಾಜ್ಯಗಳು,ಅಂಡಮಾನ್ ನಿಕೋಬಾರ್ ದ್ವೀಪ,ಚತ್ತಿಸ್ಘಡದಲ್ಲಿ ಮಾತ್ರ ಕಾಣಸಿಗುತ್ತದೆ.
2.ಫೈಬೆನ್ ಸೋರ್ಡ್ ಟೈಲ್(ಕತ್ತಿಬಾಲ ಚಿಟ್ಟೆ)-ಈಶಾನ್ಯ ರಾಜ್ಯ,ಒಡಿಸಾ,ಪಶ್ಚಿಮ ಬಂಗಾಳ,ಬಿಹಾರ್,ಉತ್ತರ ಪ್ರದೇಶ,ಕೇರಳ ಮತ್ತು ಕರ್ನಾಟಕದಲ್ಲಿ ಕಂಡುಬರುತ್ತದೆ.
3.ಕೃಷ್ಣ ನವಿಲು ಚಿಟ್ಟೆ-ಪಶ್ಚಿಮ ಬಂಗಾಳ,ಸಿಕ್ಕಿಂ,ಅರುಣಾಚಲಪ್ರದೇಶದಲ್ಲಿ ಕಂಡುಬರುತ್ತದೆ.
4.ಎಲ್ಲೋ ಗಾರ್ಗನ್- ಅರುಣಾಚಲ ಪ್ರದೇಶ,ಮೇಘಾಲಯ,ಪಶ್ಚಿಮ ಬಂಗಾಲದಲ್ಲಿ ಕಂಡುಬರುತ್ತದೆ.
5.ಸಾಮಾನ್ಯ ಭಾರತೀಯ ನವಾಬ್:ದೇಶದಾದ್ಯಂತ ಕಂಡು ಬರುವ ಪ್ರಭೇದದ ಚಿಟ್ಟೆ.
6.ಈಶಾನ್ಯ ಜಂಗಲ್ ರಾಣಿ-ಸಿಕ್ಕಿಂ,ಮೇಘಾಲಯ,ಅರುಣಾಚಲ ಪ್ರದೇಶದಲ್ಲಿ ಕಾಣ ಸಿಗುತ್ತದೆ.
7.ಆರೆಂಜ್ ಓಕ್ ಲೀಫ್:ಭಾರತೀಯ ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ಕಂಡು ಬರುವ ಪತಂಗ.

ಸಾಮಾನ್ಯ ವ್ಯಕ್ತಿಗೂ ಒಂದು ಬಾರಿ ಈ ಏಳು ಬಗೆಯ ಚಿಟ್ಟೆಗಳ ಮಾಹಿತಿ ಸಿಗುವಂತಾಗಬೇಕು,ಮತ್ತು ಇದೇ ರೀತಿಯ ಚಿಟ್ಟೆಗಳ ಪ್ರಭೇದಗಳು ಇರಬಾರದು ಎನ್ನುವ ಮಾನದಂಡದ ಆದಾರದ ಮೇಲೆ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಇನ್ನು ನಮ್ಮ ರಾಜ್ಯದ ಚಿಟ್ಟೆಯನ್ನಾಗಿ ಥ್ರೋಡಿಸ್ ಮಿನೋಸ್ ಮತ್ತು ಶ್ವಾಲೋ ಔಟ್ ಟೇಲ್ ಚಿಟ್ಟೆಗಳನ್ನು ಗುರುತಿಸಲಾಗಿದೆ.

ಅಧ್ಯಯನ ಮಾಡಿದ ಪಲ್ಲವಿ ಅವರು

ಇನ್ನು ಈ ಸಂಶೋಧನೆ ನಡೆಸಿರುವ ಪಲ್ಲವಿ ಮೂಲತಃ ಕುಂದಾಪುರದ ಬೈಂದೂರಿನವರು. ಪೂನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ಅಧ್ಯಾಯನ ಮಾಡಿರುವ ಇವರು,ಶಿರಸಿಯ ಫಾರೆಸ್ಟ್ರಿ ಕಾಲೇಜಿನಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ,ಸದ್ಯದಲ್ಲೇ ವನ್ಯ ಜೀವಿ ಸಂಬಂಧ ಅಧ್ಯಾಯನ ನಡೆಸಲು ಜರ್ಮನಿ ಮತ್ತು ಇಟಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಗಿರಿಧರ್ ಕೊಂಪುಳೀರ
error: Content is protected !!