fbpx

ಮಲೆನಾಡಿನ ಮಳೆಗಾಲಕೆ ಬಹಳಷ್ಟಿದೆ ಬಳಂಜಿ ಬಳಕೆ…

ರಜತ್ ರಾಜ್ ಡಿ.ಹೆಚ್, ಸಂಪಾದಕರು

ಅಹಾ ಮಲೆನಾಡಿನ ಮಳೆಗಾಲ ಏನ್ ಚಂದ. ಬೆಳ್ಳಿ ತಬ್ಬಿದ ಮೋಡ, ಮಂಜಿನ ಚುಮು ಚುಮು ಚಳಿಯಲ್ಲಿ ಹಲ್ಲುಗಳನ್ನು ಕಟಕಟಿಸಿಕೊಳ್ಳುತ್ತಿದ್ದರೆ, ಬೆಂಕಿಗೆ ಮೈ ಒಡ್ಡಿ ಚಳಿ ಕಾಯಿಸಬೇಕು ಅನ್ನಿಸೋದು ಸಹಜ. ಈ ಮಳೆಗಾಲದಿ ಬಟ್ಟೆ ಬರೆಗಳು ಒಣಗಿಸೋದಂತೂ ಒಂದು ಸಾಹಸವೇ ಸರಿ!

ಹಾಗೆ ಮಳೆಗಾಲದಲ್ಲಿ ಬಟ್ಟೆ ಒಣಗಿಸೋಕೆಂದೆ ಇರೋದು ಬಳಂಜಿಗಳು. ಮಳೆಗಾಲ ಬಂತೆಂದರೆ ಇವುಗಳ ಬಳಕೆ ಮನೆಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡು ಬರುತ್ತದೆ. ಆದರೆ ಆಧುನಿಕತೆಯ ಬರಾಟೆಯಿಂದಾಗಿ ವಾಷಿಂಗ್ ಮೆಷಿನ್ ಅಲ್ಲಿಯೇ ಡ್ರಯರ್ ಇರುವುದರಿಂದ ಬಟ್ಟೆ ಒಣಗಿಸೋಕೆ ಜನ ಆ ಯಂತ್ರದ ಮೊರೆ ಹೋಗಿ ಬಳಂಜಿಯನ್ನು ಮರೆತು ಹೋಗಿದ್ದಾರೆ.

ಈಗಾಗಲೇ ಮಳೆಗಾಲವಾದ್ದರಿಂದ ಮಡಿಕೇರಿ ನಗರದಲ್ಲಿ ಬಳಂಜಿ ಮಾರಾಟ ಶುರುವಾಗಿದ್ದು, ಮಾರಾಟ ತೀರಾ ನೀರಸವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥರು. ಒಂದು ಬಳಂಜಿಗೆ 600 ರಿಂದ 650 ರೂಪಾಯಿಗಳಷ್ಟು ಕ್ರಯವಿದ್ದು, ಇದು ಬಿದಿರಿನಿಂದ ಮಾಡಲಾಗಿರುತ್ತದೆ. ಕುಶಲಕರ್ಮಿಗಳ ನಜೂಕಾದ ಕೌಶಲ್ಯದಿಂದ ಮಾಡಲ್ಪಡುವ ಬಳಂಜಿಗಳನ್ನು ನಿಜಕ್ಕೂ ಕ್ರೀಯಾಶೀಲತೆ ಹೊಂದಿದವರೇ ಮಾಡಬೇಕಷ್ಟೆ.

ಮೇದ ಸಮುದಾಯದ ಜನ ಇದನ್ನು ತಯಾರಿಸುವವರಾಗಿದ್ದು, ಇದರ ತಯಾರಿಕೆ ಒಂದು ಅನಾರ್ಷ ಕಲೆಯೇ ಆಗಿದೆ. ಸ್ವದೇಶಿ ಕರ ಕೌಶಲ್ಯದ ಬಳಂಜಿಯ ಜನ ಬಳಕೆ ಆಧುನಿಕತೆಯ ಬರಾಟೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದ್ದು ನಿಜಕ್ಕೂ ವಿಪರ್ಯಾಸವೇ…

ನಮ್ಮ ಕೈಲಾದರೆ ಇಂತಹ ಕಲೆಯನ್ನು ಬಳಂಜಿಯನ್ನು ಖರೀದಿಸಿ ಬಳಸುವ ಮೂಲಕ ಪ್ರೋತ್ಸಾಹಿಸೋಣ. ಆಧುನಿಕತೆಗೆ ಮಾರು ಹೋಗದಿರೋಣ!

error: Content is protected !!
satta king chart