fbpx

ಮರ್ಯಕೇ ಆಗದಿರ್ವ ಬಾಲ್ಯದ ನೆನ್ಪುಗ.

ಪ್ರತಿಯೊಬ್ಬನ ಬೊದ್ಕ್ ಲಿ ತಾನ್ ಕಳ್ದ ಬಾಲ್ಯದ ನೆಂಪುಗ ಅವಿಸ್ಮರಣೀಯ ಆಗಿದ್ದದೆ . ಹಂಗೆ ಕೆಲ ನೆಂಪುಗ ಮಾತ್ರ ನಮ್ಮ ತಲೇಲಿ ಹಚ್ಚ ಹಸ್ರಾಗಿ ಉಳ್ಕಂಡ್ ಬುಟ್ಟದೆ. ಅದರ್ಲಿ ಸ್ವಲ್ಪ ಸಿಹಿ ನೆಂಪುಗಾದ್ರೆ ಸ್ವಲ್ಪ ಕಹಿ ನೆಂಪುಗಿದ್ದದೆ. ಆ ದಿನ ಅದೇಷ್ಟ್ ಪೊರ್ಲ್ !! ನೆನ್ಸಿದಷ್ಟ್ ಮುಗ್ಯದ ಪೊರ್ಲ್ ನ ಪಯಣ, ಕಾರಣನೇ ಇಲ್ಲದೇ ಇರುವ ನಲಿವು, ಸಣ್ಣ ಸಣ್ಣ ಕಾರಣಕ್ಕೆ ಕುಣಿತಿದ್ದಂತದ್ , ಹಂಗೆ ಇರಿಕನ ಬಾಳ ಪಯಣಲಿ ಮುಂದೆ ಬಾತ್ ದೊಡ್ಡ ಸವಾಲ್ ಗ….!

ಶಾಲೆಯ ದಿನಗ :

ಶಾಲೆ ಸುರುನ ದಿನ ಕುಸಾಲ್ ಲಿ ಇದ್ದ್’ಕಂಡ್ ಹೊಸ ಪುಸ್ತಕ, ಹೊಸ ಬ್ಯಾಗ್’ನ ಬೆನ್ನುಗೆ ಕೋಸಿಕಂಡ್, ತುಂಬಾ ಕುಸಿಲಿ ಹೋಗ್ತಾ ಇದ್ದದ್, ಹಂಗೆ ಹೊಸ ಪುಸ್ತಕದ ಘಮ ಬೇರೇನೇ ಇರ್ತಿತ್, ಕೈಲಿ ಪೆನ್ನ್ಂದ ಬರ್ದ್ ಅದ್ರ ಘಮನ ಮೂಸುದು, ಆಗ ನಮ್ಮ ಪಕ್ಕ ಕುದ್ದವನ್ನ ಪ್ರಾಣ ಸ್ನೇಹಿತಂತೇಳ್ದು , ಹಿಂದೆ ಕುದ್ದವು ಶತ್ರುಗಂತ ಹೇಳ್ತಿದ್ದದ್, ಪೆನ್ಸಿಲ್ ಮುರ್ದ್ ಹಾಕಿತ್ ಹಾಳೆ ಹರ್ದು ಹಾಕಿತ್ಂತ ನಡಿತಿದ್ದ ಜಗಳ, ವಾರಕ್ಕೆ ಒಂದ್ ಸಲ ಇಸ್ಕೂಲ್ ಕೋಂಬರೆನ ಗುಡ್ಸಕನ ತೋರ್ಸುತಿದ್ದ ಉತ್ಸಾಹ ಮತ್ತೆ ಸೋಂಬೆರಿತನ, ಹಂಗೆ ಮೇಲು -ಕೀಳುತ ನೋಡದೆ ಎಲ್ಲವೂ ಒಟ್ಟಿಗೆ ಬೆರ್ತ್ ಸಾಗಿದ ದಿನಗ, ಪಠ್ಯೇತರ ಚಟುವಟಿಕೆಗೆ ಮೀಸಲಿಟ್ಟ ಸಮಯಗ, ಅದ್ರಲ್ಲಿಸ ಹಿಟ್ಲರ್’ತರ ವರ್ತುಸ್ತಿದ್ದ ಕ್ಲಾಸ್ ಲೀಡರ್ಗ, ಹಂಗೆ ನಮ್ಮ ನಮ್ಮಲ್ಲೇ ಗುಂಪುಗ ಕೆಲ ಸಣ್ಣ ಸಣ್ಣ ವಿಷ್ಯಕ್ಕೆ ಜಗಳಾಡಿ ಮಾತು ಬುಟ್ಟು ಸ್ವಲ್ಪ ದಿನ ಆದಮೇಲೆ ಒಂದಾದು.

ಶಾಲೆ ವಾರ್ಷಿಕೋತ್ಸವ ಇರಕನ ಕೊಣ್ತ ಕೊಣ್ದದ್, ಕೊಣೆಕೆ ಗೊತ್ತಿಲ್ಲದೆ ಇದ್ರು ಕೊಣ್ಸಿದ್ದ ಟೀಚರ್ಗ,
ಮನೇಲಿ ಇರ್ಕನ ಆಟ ಆಡ್ತಾ ಇದ್ದಂಗೆ, ಟಿವಿ ನೋಡ್ತಾ ನೋಡ್ತಾ ಸಿಕ್ಕಿದಲ್ಲಿ ಮಲ್ಗಿ ಬುಡ್ತಿದ್ದದ್, ಹಂಗೆ ಬೊಳ್ಪುಗೆದ್ದ್ ನೋಡ್ರೆ ಹಾಸಿಗೆ ಮೇಲೆ ಇರ್ತಿದ್ದದ್, ರಾತ್ರಿ ಕನ್ಸ್ ಲಿ ದೆವ್ವದ ಕನ್ಸ್ ಗ ಬೀಳ್ತಿದ್ದದ್..ಹೆದ್ರುದ್..,

ನಾವ್ಗೆ ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಆಚರ್ಸುವ ದಿನ ಬಂದ್ರೆ ಮುಗ್ತ್.. ಬೆಳಿ ಬಟ್ಟೆ, ಶೂ, ಬೆಲ್ಟ್ ಹಾಕಂಡ್ ಹೋದು, ಆಮೇಲೆ ಶಾಲೆ ಎದ್ರುಗಡೆ ಹಾಜರಾತಿ ಕರೀತಾ ಇದ್ದದ್. ಮಾತ್ರ ನಮ್ಮ ಬೊದ್ಕ್ ಲಿ ಮರ್ಯಕೆ ಆಗದೇ ಇರುವ ಕೆಲ ನೆಂಪುಗ ಎಂತ ಹೇಳಿರೆ ಅದ್ ನಮ್ಮ ಬಾಲ್ಯದ ಜೀವನ ಮಾತ್ರ.

ನಮ್ಮ ನಿಮ್ಮ ಗುರುಗ ಎಷ್ಟೋ ಸಲ ಹೇಳಿದ್ದವೆ ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ತ ನಾವ್ಗೆ ಆಗ ಅನ್ಸ್ ತಾ ಇತ್ತ್. ಮನೇಲಿ ನೋಡ್ರೆ ಕೆಲ್ಸ…,.! ಕೆಲ್ಸ ಮಾಡ್ದು ತೆಳ್ರೆ ಸಂಕಟ, ಶಾಲೆಗೆ ಬಂದ್ರೆ ಪಾಠ, ಅದ್ರಲ್ಲಿ ಹೋಂ ವರ್ಕ್ ದೊಡ್ಡ ಕಾಟ, ಹಂಗಿರಿಕನ ಈ ಜೀವ್ನ ಗೋಲ್ಡನ್ ಲೈಫ್ ತ ಯಾವ ನನ್ ಮಗ ಹೇಳ್ದ್’ತ ನಾವ್ಗೆ ಗೊತ್ತಿಲದಂಗೆ ಬೈತಿದ್ದೋ, ರಜೆ ಬಾತ್ಂತ ಹೇಳಿರೆ ಅವ್ವ ಮನೆ.. ಅಲ್ಲಿರುವ ದೋಸ್ತ್ ಗಳ ಜೊತೆ ಅದು -ಇದು ಮಾಡಿ ಮನೆಗೆ ದೂರು ತರ್ಥ ಇದ್ದದ್, ಈ ಎಲ್ಲಾ ನೆಂಪುಗ “ಸದಾ ಬೂದಿ ಮುಚ್ಚಿದ ಕೆಂಡದಂಗೆ”,ನಮ್ಮಲ್ಲಿಯೇ ಇದ್ದದೆ ಆದರೆ ಬೆಳಿತಾ ನಾವು ಅಂತ ಕುಸಿನ ಮತ್ತೆ ಪಡ್ಯಕೆ ಸಾಧ್ಯನೇ ಇಲ್ಲೆ.

ಹಿಂಗೇ ಹೋಗ್ತಾ ಕಾಲೇಜ್ ಜೀವ್ನ ಮುಗ್ದದೆ . ಆಗ ನಮ್ಮ ಸ್ವಾತಂತ್ರ್ಯಕೆ ಬ್ರೇಕ್ ಬಿದ್ದದೆ. ಯಾಕೆತೆಳ್ರೆ ಹೆಗ್ಲ ಮೇಲೆ ಕೆಲ್ಸ,ಮನೆ ಜವಾಬ್ದಾರಿ, ಸಂಪಾದನೆ ಅದು ಇದುತ ಬಂದನದಲ್ಲಿದ್ದಂಗೆ ಆದೆ, ಆ ಬಂದನಂದ ಎದ್ದು ಬಾದುತೆಳ್ರೆ ಸತ್ತ ಜನ ಮತ್ತೆ ಎದ್ದು ಬಂದಂಗೆ… ಮುಂದೆ ಇನ್ನು ಅದೇ ದಿನಚರಿ ಆಗಿಬುಟ್ಟದೆ. ಆದ್ರೆ ಅಲ್ಲಿ ಕುಸಿಯಾಗಿ ಇರುವಂಗೆ ಮಾಡ್ದ್ ಮಾತ್ರ ಹಳೆ ನೆಂಪುಗ ಮಾತ್ರ, ಏನೇ ಆದ್ರೂ ಈ ಆ ದಿನಗ ಮತ್ತೆ ಮರಳಿ ಬಾಕೆ ಸಾಧ್ಯನೇ ಇಲ್ಲೆ, ಆದ್ರೆ ನಾವು ಕಲ್ದ ಪ್ರತಿಯೊಂದು ಕ್ಷಣದ ನೆಂಪುಗ ನಮ್ಮಲ್ಲಿಯೇ ಶಾಶ್ವತ ಆಗಿದ್ದದೆ . ಅದು ಸತ್ಯ.

ಬರ್ದವು: ಅಮೃತ್ (ಅಂಜು)ಪೆಮ್ಮಟ್ಟೆ, ಮರಗೋಡು

error: Content is protected !!