fbpx

ನೂತನ ಅಧ್ಯಕ್ಷರೊಂದಿಗೆ ಮಹತ್ವದ ಚರ್ಚೆ

ನವದೆಹಲಿ: ಅಮೆರಿಕ ಚುನಾಯಿತ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ.

ಜೋ ಬೈಡೆನ್ ಜೊತೆಗೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಚರ್ಚೆ ನಡೆಸಿದ್ದು, ಉಭಯ ದೇಶಗಳ ಸಂಬಂಧ ಗಟ್ಟಿಗೊಳಿಸಲು ಸಹಕಾರ, ನೆರವಿನ ಭರವಸೆ ನೀಡಿದ್ದಾರೆ. ಹವಾಮಾನ ವೈಪರಿತ್ಯ, ಕೊರೋನಾ ಸೋಂಕು, ಹಿಂದೂ – ಫೆಸಿಪಿಕ್ ವಲಯದಲ್ಲಿ ಸಹಕಾರದ ಕುರಿತು ಚರ್ಚೆ ನಡೆಸಲಾಗಿದೆ.

ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್ ಅವರಿಗೂ ಶುಭಾಶಯ ತಿಳಿಸಲಾಗಿದ್ದು, ಅವರ ಗೆಲುವು ಇಂಡೋ – ಅಮೆರಿಕನ್ನರ ಗೆಲುವು ಎಂದು ಹೇಳಲಾಗಿದೆ. ಕೋವಿಡ್ ಲಸಿಕೆ ಕಂಡು ಹಿಡಿಯಲು ಪರಸ್ಪರ ಸಹಕಾರಕ್ಕೆ ಕರೆ ನೀಡಲಾಗಿದೆ. ಜೋ ಬೈಡೆನ್ ಜೊತೆ ಮಾತನಾಡಿದ ಬಳಿಕ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಮಾಹಿತಿ ನೀಡಿದ್ದಾರೆ.

error: Content is protected !!