fbpx

ನೀನಾಸಂ ಗೆ ಆಯ್ಕೆ ಆದ ಮಮತಾ ಕಲ್ಮಕಾರ್‌ಗೆ ರಂಗಮನೆಯಲ್ಲಿ ಬೀಳ್ಕೊಡುಗೆ

ರಾಜ್ಯದ ಅತ್ಯತ್ತಮ ಮತ್ತು ಪ್ರತಿಷ್ಠಿತ ರಂಗ ತರಬೇತಿ ಸಂಸ್ಥೆಯಾದ ನೀನಾಸಂ ಗೆ ಇತ್ತೀಚೆಗೆ ಆಯ್ಕೆ ಪ್ರಕ್ರಿಯೆ ನಡೆದಿದ್ದು ಸುಳ್ಯ ತಾಲೂಕಿನ ಕಲ್ಮಕಾರಿನ ಮಮತ ಆಯ್ಕೆಯಾಗಿದ್ದಾರೆ.

ರಾಜ್ಯದ ವಿವಿಧ ಕಡೆಗಳಿಂದ ಸುಮಾರು 125 ರಂಗಾಸಕ್ತರು ಭಾಗವಹಿಸಿದ್ದು ಅದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಮತಾ ಕಲ್ಮಕಾರು ಆಯ್ಕೆ ಆಗಿರುವುದು ಹೆಮ್ಮೆಯ ವಿಚಾರ.

ಸುಳ್ಯದ ರಂಗಮನೆಯ ವಿದ್ಯಾರ್ಥಿ ಆಗಿರುವ ಮಮತ ಅರೆಭಾಷೆ ಅಕಾಡೆಮಿ ಪ್ರಾಯೋಜಿತ ಸಾಹೇಬ್ರು ಬಂದವೇ ನಾಟಕದಲ್ಲಿ ಕಾವೇರಿ ಎಂಬ ಮುಖ್ಯಪಾತ್ರದಲ್ಲಿ ನಟಿಸಿ ಜನಮನ ಗೆದ್ದಿದ್ದಳು. ಅದೂ ಅಲ್ಲದೆ ಒಂದಷ್ಟು ಕಿರುಚಿತ್ರದಲ್ಲಿಯೂ ಭಾಗವಹಸಿದ್ದಳು.

ಈಗ ನೀನಾಸಂ ಗೆ ಹೊರಟಿರುವ ಮಮತಾಗೆ ರಂಗಮನೆಯಲ್ಲಿ ಆತ್ಮೀಯವಾಗಿ ಹರಸಿ ಬೀಳ್ಕೊಡಲಾಯಿತು.

ರಂಗಮನೆಯ ನಿರ್ದೇಶಕ, ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾದ ಜೀವನ್ ರಾಂ ಸುಳ್ಯ ಅವರು ರಂಗಮನೆಯಲ್ಲಿ ಮಮತ ಕಳೆದ ದಿನಗಳನ್ನು ನೆನೆದು ರಂಗಮನೆಯ ಪರವಾಗಿ ನೆನಪಿನ ಕಾಣಿಕೆ ನೀಡಿ ಹರಸಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಕಜೆಗದ್ದೆ ಅವರು ಮಾತನಾಡಿ ಅರೆಭಾಷೆ ಅಕಾಡೆಮಿ ವತಿಯಿಂದ ನಾಟಕ‌ ಹಮ್ಮಿಕೊಂಡ ಉದ್ದೇಶ ಮತ್ತು ಅದರಿಂದ ಬಂದ ಪ್ರತಿಫಲವೇ ಇಂದು ಮಮತಳ ಆಯ್ಕೆ‌ ಎಂದು ಸಂತಸ ವ್ಯಕ್ತಪಡಿಸಿದರು. ರವೀಶ್ ಪಡ್ಡಂಬೈಲು ಮತ್ತು ಶಿಕ್ಷಕಿ ಮಮತಾ ಪಡ್ಡಂಬೈಲು ಶುಭ ಹಾರೈಸಿದರು.

ಇದೇ ಸಂದರ್ಭ ಸಾಹೇಬ್ರು ಬಂದವೇ ನಾಟಕ ತಂಡದ ವಿನೋದ್ ಮೂಡಗದ್ದೆ, ಹಾರಂಬಿ ಯತೀನ್ ವೆಂಕಪ್ಪ, ನಿತ್ಯಾನಂದ ಮಲೆಯಾಳ, ಸುಶ್ಮಿತಾ ಮೋಹನ್,ಯೋಗಿತಾ ಬಂಗಾರಕೋಡಿ, ಅಮೃತ್ ಕುಕ್ಕೇಟಿ, ಬಂಗಾರಕೋಡಿ ಶಿವಗಣೇಶ್ ಮತ್ತು ಬಂಗಾರಕೋಡಿ ಚೇತಸ್ ಉಪಸ್ಥಿತರಿದ್ದರು.

error: Content is protected !!
satta king chart