ನಿರ್ಬಂಧಕಾಜ್ಞೆ ಸಡಿಲಿಕೆ; ಡಿ.ಸಿ

ಕೊಡಗು: ಜಿಲ್ಲೆಗೆ ಹೊಂದಿಕೊಂಡಿರುವ ನೆರೆ ರಾಜ್ಯ ಮುಖಾಂತರ ಕೊಡಗು ಜಿಲ್ಲೆಗೆ ಟೂರಿಸ್ಟ್ ಮತ್ತು ಖಾಸಗಿ ವಾಹನಗಳಲ್ಲಿ ಪ್ರವಾಸ, ಪಿಕ್‍ನಿಕ್ ಮುಂತಾದ ಉದ್ದೇಶದಿಂದ ಆಗಮಿಸುವುದು ಕಾರಣವಿಲ್ಲದೆ ಕೊಡಗು ಜಿಲ್ಲೆಗೆ ಭೇಟಿ ನೀಡುವುದು ಮತ್ತು ತಂಗುವುದು ನಿಷೇಧಿಸಲಾಗಿದೆ. ಹೊರ ರಾಜ್ಯ ಮತ್ತು ಹೊರ ದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಜಿಲ್ಲೆಯ ಎಲ್ಲಾ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್, ವಸತಿಗೃಹ ಮತ್ತಿತರ ವಸತಿ ಸೌಕರ್ಯ ನೀಡದಂತೆ ಈಗಾಗಲೇ ನಿರ್ಬಂಧಿಸಲಾಗಿದೆ.

ಪ್ರಸ್ತುತ ರಾಜ್ಯದಾದ್ಯಂತ ನಿಯಮಾನುಸಾರ ಲಾಕ್‍ಡೌನ್ ತೆರವುಗೊಳಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದ್ದು, ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ. ಅದರಂತೆ ಸಾಂಕ್ರಾಮಿಕ ರೋಗಗಳು ಕೋವಿಡ್-19 ರೆಗ್ಯುಲೇಷನ್ 2020 ನಿಯಮ 12 ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್ 2005 ಕಲಂ 24(ಎ) (ಬಿ) 30(2) ವ್ಯಾಖ್ಯಾನಿಸಿದಂತೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ.

ವಿವರ ಇಂತಿದೆ:
ವಿದೇಶ ಮತ್ತು ಹೊರ ರಾಜ್ಯಗಳಿಂದ ಆಗಮಿಸುವವರು ಕಡ್ಡಾಯವಾಗಿ 14 ದಿನಗಳ ಕ್ವಾರಂಟೇನ್ ಇರಬೇಕಾಗಿರುತ್ತದೆ. ಇವರುಗಳು ಯಾವುದೇ ಕಾರಣಕ್ಕೂ ಹೊರ ಬರುವುದು ಅಥವಾ ಸಾರ್ವಜನಿಕವಾಗಿ ತಿರುಗಾಡುವುದು ಮಾಡಬಾರದು. ಕಡ್ಡಾಯವಾಗಿ ಸರ್ಕಾರದ ಆರೋಗ್ಯ ಇಲಾಖೆ ಹೊರಡಿಸಿರುವ ಕಾರ್ಯವಿಧಾನವನ್ನು ಪಾಲಿಸುವುದು.
ನೆರೆಯ ಜಿಲ್ಲೆಗಳಿಂದ ಆಗಮಿಸುವ ಅತಿಥಿಗಳು ಅವರು ತಂಗುವ ಹೋಟೆಲ್, ಲಾಡ್ಜ್, ವಸತಿ ಗೃಹ, ಆತಿಥ್ಯ ಸೇವೆ ಗೃಹ ಇತ್ಯಾದಿಗಳಿಗೆ ನೇರವಾಗಿ ಆಗಮಿಸುವುದು ಮತ್ತು ಆಗಮಿಸಿದ ಕಾರ್ಯ ಪೂರ್ಣಗೊಂಡ ನಂತರ ನೇರವಾಗಿ ಹಿಂತಿರುವುದು. ವಿನಾಕಾರಣ ಯಾವುದೇ ಸ್ಥಳಗಳಿಗೆ ಭೇಟಿ ನೀಡಬಾರದು.

ಹೋಟೆಲ್, ಲಾಡ್ಜ್, ವಸತಿ ಗೃಹ, ಆತಿಥ್ಯ ಸೇವೆ ಗೃಹಗಳಲ್ಲಿ ಸರ್ಕಾರದ ಆರೋಗ್ಯ ಇಲಾಖೆ ಹೊರಡಿಸಿರುವ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೋಂದಾಯಿತ ಹೋಟೆಲ್, ಲಾಡ್ಜ್, ವಸತಿ ಗೃಹ, ಆತಿಥ್ಯ ಸೇವೆ ಗೃಹಗಳಿಗೆ ಮಾತ್ರ ಅವಕಾಶ ಇರುತ್ತದೆ. ಈ ಅಂಶಗಳ ಬಗ್ಗೆ ಸ್ಥಳೀಯ ಕಾರ್ಯ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆ, ಗ್ರಾಮ ಪಂಚಾಯಿತಿ, ಪೊಲೀಸ್, ಆರೋಗ್ಯ ಇಲಾಖೆಗಳು ನಿಗಾವಹಿಸುವುದು. ಈ ಆದೇಶದ ಉಲ್ಲಂಘನೆಯು ಸಂಬಂಧಪಟ್ಟ ಕಾಯ್ದೆಗಳಡಿ ದಂಡನೀಯವಾಗಿದ್ದು, ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

error: Content is protected !!