ಧರ್ಮ ದಂಗಲ್ ಬಿಟ್ಟು ಒಗ್ಗೂಡಿ ಬದುಕಬೇಕು: ನಜೀ಼ರ್‌ ಮಾಸ್ಟರ್

ಕುಶಾಲನಗರ: ಜಾತಿ, ಧರ್ಮದ ಹೆಸರನ್ನೇಳಿ ಪರಸ್ಪರ ಕಿತ್ತಾಟವನ್ನು ಬಿಟ್ಟು ಸರ್ವಧರ್ಮೀಯರು ಸೌಹಾರ್ದತೆಯಿಂದ ಬದುಕಬೇಕು ಎಂದು‌ ಕುಶಾಲನಗರದ ನಿವೃತ್ತ ಶಿಕ್ಷಕರಾದ ನಜ಼ೀರ್ ಮಾಸ್ಟರ್ ಅವರು ಕರೆ‌‌ ನೀಡಿದರು.

೭೫ ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕುಶಾಲನಗರದ ಜಾಮಿಯಾ ಮಸೀದಿಯಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಕಾರ್ಯವನ್ನು ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯೋತ್ಸವದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅತಿಮುಖ್ಯ. ಅವರ ತ್ಯಾಗ, ದೇಶಪ್ರೇಮದ ಬಗ್ಗೆ ನೆನಪಿಸಿಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಬೇಕು ಎಂದು ಅವರು‌ ಸಲಹೆ ನೀಡಿದರು.
ಜಾಮಿಯಾ ಮಸೀದಿ ಅಧ್ಯಕ್ಷರಾದ ಮುಜೀಬುರ್ರಹಮಾನ್ ಮಾತನಾಡಿದರು.

ಈ ಸಂದರ್ಭ ಕಮಿಟಿಯ ಪ್ರಮುಖರಾದ ಅಲೀಂ ಇಂಜಿನಿಯರ್, ತನ್ವೀರ್ ಅಹ್ಮದ್, ಶೇಕ್ ಕಲೀಮುಲ್ಲಾ, ಫಜ಼ಲುಲ್ಲಾ ಹಾಗೂ ಇತರರು ಇದ್ದರು.

error: Content is protected !!